Thursday, 26 August 2021

ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ನೀರಿಗೆ 3,000, ಅನ್ನಕ್ಕೆ 7,000 ರೂ.!

 

ಕಾಬೂಲ್: ತಾಲಿಬಾನಿಗಳು ಅಫ್ಗಾನಿಸ್ತಾನದ ರಾಜಧಾನಿ ಕಾಬೂಲನ್ನೂ ಆಕ್ರಮಿಸಿಕೊಂಡ ನಂತರ ಇಲ್ಲಿನ ಚಿತ್ರಣವೇ ಬದಲಾಗಿದೆ. ದೇಶ ತೊರೆಯಲು ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ಜನಜಂಗುಳಿ ಹೆಚ್ಚಿದ್ದು, ಅಲ್ಲಿನ ವಸ್ತುಗಳ ಬೆಲೆಯೂ ದುಬಾರಿಯಾಗಿದೆ.

ಕಾಬೂಲ್ ವಿಮಾನ ನಿಲ್ದಾಣದೊಳಗೆ 1 ನೀರಿನ ಬಾಟಲಿಗೆ 40 ಡಾಲರ್ (3 ಸಾವಿರ ರೂ.), ಒಂದು ಪ್ಲೇಟ್ ಅನ್ನಕ್ಕೆ 100 ಡಾಲರ್(7,000 ರೂ.) ಇದೆ. ಇದರಿಂದ ಬಡಜನರು, ಮಧ್ಯಮ ವರ್ಗದವರಿಗೆ ಆಹಾರ, ನೀರು ಕೈಗೆಟುಕದಂತಾಗಿದೆ.

ತಾಲಿಬಾನಿಗಳು ಅಫ್ಗಾನಿಸ್ತಾನವನ್ನು ಆಕ್ರಮಿಸಿಕೊಂಡ ನಂತರ ಲಕ್ಷಾಂತರ ಮಂದಿ ದೇಶವನ್ನು ತೊರೆಯುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ ಜನಜಂಗುಳಿ ಇದೆ. ಹೀಗಾಗಿ, ಅಲ್ಲಿ ವಸ್ತುಗಳು, ಆಹಾರದ ಬೆಲೆಯೂ ಏರಿದೆ.

No comments:

Post a Comment