Friday 2 July 2021

ಮಹಿಳೆಯರಿಗೆ ಕಿರಿಕಿರಿ ಎನಿಸುವ ಮುಖದ ಮೇಲಿನ ಕೂದಲಿನ ಸಮಸ್ಯೆಗೆ ಇಲ್ಲಿದೆ ಪರಿಹಾರ.

ಮುಖದ ಮೇಲೆ ಬೆಳೆಯುವ ಕೂದಲು ಮುಖದ ಅಂದ ಕೆಡಿಸುತ್ತದೆ. ಈ ಸಮಸ್ಯೆಯಿಂದ ಬಹಳಷ್ಟು ಮಂದಿ ಬಳಲುತ್ತಿರುತ್ತಾರೆ.
ಮುಖದ ಮೇಲಿನ ಕೂದಲಿನ ಸಮಸ್ಯೆಗೆ ಈ ಸುಲಭ ಪರಿಹಾರ ಟ್ರೈ ಮಾಡಿ 
·         ಮುಖದ ಮೇಲೆ ಬೆಳೆಯುವ ಕೂದಲು ಮುಖದ ಅಂದ ಕೆಡಿಸುತ್ತದೆ.
·         ಈ ಸಮಸ್ಯೆಗೆ ಮನೆಯಲ್ಲಿಯೇ ಇದೆ ಸುಲಭ ಪರಿಹಾರ.
·         ಈ ಟಿಪ್ಸ್ ಬಳಸಿದರೆ ಮುಖದ ಮೇಲಿನ ಕೂದಲು ಮಾಯ.


ಮುಖದ ಮೇಲೆ ಬೆಳೆಯುವ ಕೂದಲು ಮುಖದ ಅಂದ ಕೆಡಿಸುತ್ತದೆ. ಈ ಸಮಸ್ಯೆಯಿಂದ ಬಹಳಷ್ಟು ಮಂದಿ ಬಳಲುತ್ತಿರುತ್ತಾರೆ. ಸಮಸ್ಯೆಯ ಪರಹಾರಕ್ಕೆ ನಾನಾ ಪ್ರಯತ್ನಗಳನ್ನು ಕೂಡ ಮಾಡುತ್ತಿರುತ್ತಾರೆ. ಆದರೆ ಪರಿಹಾರ ಸಿಗದೇ ಕೊರಗುತ್ತಾರೆ. ಈ ಸಮಸ್ಯೆಗೆ ನಿಮ್ಮ ಅಡುಗೆ ಮನೆಯಲ್ಲಿಯೇ ಇದೆ ಸುಲಭ ಪರಿಹಾರ. 

1. ನಿಂಬೆ ಮತ್ತು ಜೇನುತುಪ್ಪ : ನಿಂಬೆ, ಸಕ್ಕರೆ  ಮತ್ತು ಜೇನು ತುಪ್ಪದ ಮಿಶ್ರಣದಿಂದ ಮುಖದ ಮೇಲಿನ ಕೂದಲನ್ನು ತೆಗೆದುಹಾಕಬಹುದು. ಇದಕ್ಕಾಗಿ ನೀವು ಎರಡು ಚಮಚ ಸಕ್ಕರೆ, ನಿಂಬೆ ರಸ  ಮತ್ತು ಒಂದು ಚಮಚ ಜೇನುತುಪ್ಪವನ್ನು ಬೆರೆಸಬೇಕು.

-ಈ ಮಿಶ್ರಣವನ್ನು ಸುಮಾರು ಮೂರು ನಿಮಿಷಗಳ ಕಾಲ ಬಿಸಿ ಮಾಡಿ.
-ಅಗತ್ಯವಿದ್ದರೆ, ಮಿಶ್ರಣವನ್ನು ತೆಳುವಾಗಿ ಮಾಡಿಕೊಳ್ಳಿ 
-ಪೇಸ್ಟ್ ತಣ್ಣಗಾದ ನಂತರ, ಕೂದಲು ಬೆಳೆದಿರುವ ಜಾಗಕ್ಕೆ ಹಚ್ಚಿ. 
-ಈಗ ವ್ಯಾಕ್ಸಿಂಗ್ ಸ್ಟ್ರಿಪ್ ಅಥವಾ ಹತ್ತಿ ಬಟ್ಟೆಯನ್ನು ತೆಗೆದುಕೊಳ್ಳಿ .
- ವ್ಯಾಕ್ಸಿಂಗ್ ಸ್ಟ್ರಿಪ್ ಅನ್ನು ಪೇಸ್ಟ್  ಮೇಲೆ ಸರಿಯಾಗಿ ಅಂಟಿಸಿ
-ಕೂದಲು ಬೆಳವಣಿಗೆಯ ವಿರುದ್ಧ ದಿಕ್ಕಿಗೆ ಎಳೆಯಿರಿ .
ಜೇನುತುಪ್ಪವು ಚರ್ಮವನ್ನು ತೇವಾಂಶವಾಗಿಡಲು ಸಹಾಯ ಮಾಡುತ್ತದೆ.


2. ಸಕ್ಕರೆ ಮತ್ತು ನಿಂಬೆ ರಸ :ನೀವು ಸಕ್ಕರೆ ಮತ್ತು ನಿಂಬೆಯೊಂದಿಗೆ ಕೂಡಾ ಮುಖದ ಕೂದಲನ್ನು ತೆಗೆದುಹಾಕಬಹುದು. ಏಕೆಂದರೆ ಸಕ್ಕರೆ ನೈಸರ್ಗಿಕ ಎಕ್ಸ್ ಫ್ಫೋಲಿಯೇಟಿಂಗ್ ಏಜೆಂಟ್ ಮತ್ತು ಬಿಸಿ ಸಕ್ಕರೆ ನಿಮ್ಮ ಕೂದಲಿಗೆ ಅಂಟಿಕೊಳ್ಳುತ್ತದೆ. ಆದರೆ ನಿಂಬೆ ರಸ ಚರ್ಮದ ಕೂದಲಿನ ಮೇಲೆ ನೈಸರ್ಗಿಕ ಬ್ಲೀಚ್ ನಂತೆ ಕಾರ್ಯನಿರ್ವಹಿಸುತ್ತದೆ.

-ನೀವು ಮೊದಲು 8-9 ಚಮಚ ನೀರಿಗೆ ಎರಡು ಚಮಚ ಸಕ್ಕರೆ ಮತ್ತು ನಿಂಬೆ ರಸ  ಬೆರೆಸಬೇಕು.
- ಅದರಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುವವರೆಗೆ ಈ ಮಿಶ್ರಣವನ್ನು ಬಿಸಿ ಮಾಡಿ ನಂತರ ತಣ್ಣಗಾಗಲು ಬಿಡಿ.
 -ತಣ್ಣಗಾದ  ಮೇಲೆ ಕೂದಲು ಬೆಳೆದಿರುವ ಜಾಗಕ್ಕೆ ಈ ಪೇಸ್ಟ್ ಅನ್ನು ಹಚ್ಚಿ.  ಸುಮಾರು 20-25 ನಿಮಿಷಗಳ ಕಾಲ ಬಿಡಿ.
-ವೃತ್ತಾಕಾರದ ಚಲನೆಯಲ್ಲಿ ಉಜ್ಜುವ ಮೂಲಕ ಅದನ್ನು ತಣ್ಣೀರಿನಿಂದ ತೊಳೆಯಿರಿ.


3. ಓಟ್ ಮೀಲ್ ಮತ್ತು ಬಾಳೆಹಣ್ಣು :
ಓಟ್ ಮೀಲ್ ಮತ್ತು ಬಾಳೆಹಣ್ಣು ಕೂಡ ಮುಖದ ಕೂದಲನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಈ ವಿಧಾನವು ತುಂಬಾ ಸುಲಭ. ಓಟ್ ಮೀಲ್ ಉತ್ತಮವಾದ, ಹೈಡ್ರೇಟಿಂಗ್ ಸ್ಕ್ರಬ್ ಆಗಿ ಕೆಲಸ ಮಾಡುತ್ತದೆ. ಚರ್ಮದ ರೆಡ್ನೆಸ್ಸ್ ದೂರ ಮಾಡಲು ಕೂಡ ಇದು ಸಹಕಾರಿಯಾಗಿದೆ. 

-ಮೊದಲು  ಎರಡು ಚಮಚ ಓಟ್ ಮೀಲ್ ಅನ್ನು ಮಾಗಿದ ಬಾಳೆಹಣ್ಣಿನೊಂದಿಗೆ ಬೆರೆಸಬೇಕು.
-ಅದರ ಪೇಸ್ಟ್ ತಯಾರಿಸಿ ಕೂದಲು ಬೆಳೆದಿರುವ ಜಾಗಕ್ಕೆ ಹಚ್ಚಿ.
-ಇದನ್ನು 15 ನಿಮಿಷಗಳ ಕಾಲ ಮಸಾಜ್ ಮಾಡಿ ಮತ್ತು ತಣ್ಣೀರಿನಿಂದ ತೊಳೆಯಿರಿ.
- ಈ ಪೇಸ್ಟ್ ಮುಖದ ಮೇಲಿನ ಕೂದಲು  ತೆಗೆದು ಹಾಕಲು ಮಾತ್ರವಲ್ಲ ಚರ್ಮದ ಕಾಂತಿಯನ್ನು ಕೂಡಾ ಹೆಚ್ಚಿಸುತ್ತದೆ
. 

No comments:

Post a Comment