Thursday 17 June 2021

POEM AND SONG: ಕಾಣದ ಅಲೆ.

ಕಾಣದ ಕರೋನಾದ ಮೇಲೊಂದು ಕವಿತೆ. ಮಹಾಂತೇಶ, ಶಿಕ್ಷಕರು. ಇವರಿಂದ. ಇಡೀ ವಿಶ್ವವೇ, ಕರೋನಾದ ಕರಿನೆರಳಲ್ಲಿ ನೊಂದು ಬಳಲಿ, ಬೆಂಡಾಗುತ್ತಿದ್ದು, ಇದರ ಅಟ್ಟಹಾಸ ಯಾವಾಗ ಮುಗಿಯುವುದೋ, ಎಂದು ಜನತೆ, ಜಾತಕ ಪಕ್ಷಿಗಳಂತೆ ಕಾಯುವುದು ಬಿಟ್ಟರೆ. ಅನ್ಯ ಮಾರ್ಗವೇ ತಿಳಿಯದಂತಾಗಿದೆ. ಕವಿತೆಯ ಶೀರ್ಷಿಕೆ, 'ಕಾಣದ ಅಲೆ'.

******************************

ಬರುವುದಂತೆ ಮೂರನೇ ಅಲೆ/
ಸುನಾಮಿ ಅಲ್ಲ! ಸೂಪರ್ಸೋನಿಕ್ ಅಲ್ಲ//

ಸಿಸ್ಮಿಕ್ ಅಲ್ಲ! ಕಣ್ಣಿಗೆ  ಕಾಣೋಲ್ಲ.../



ಈ ಮೊದಲಲ್ಲಿ ಕಂಡಿದ್ದು ಇಷ್ಟು/

ನದಿಯಲ್ಲಿ ಶವಗಳ ಅಲೆ, ಆಸ್ಪತ್ರೆ ಮುಂದೆ ರೋಧಿಸುವವರ ಅಲೆ//

ಶವಾಗಾರದಲ್ಲಿ ಚಿತೆಗಳ ಅಲೆ.../


ಬೆಡ್ ಬ್ಲಾಕಿಂಗ್ ಅಲೆ/
ಸಂಬಂಧಿಗಳ ನೈಜತೆ ಅಲೆ//
ಬಚಾವ್ ಆದ್ರೂ ಬಿಡದ ಫಂಗಸ್ ಅಲೆ.../


ಇದು ಬಂತು,ಬೆರಿಯಿತು./

ಬದುಕುಗಳ ಹರಿಯಿತು.//

ಮಕ್ಕಳ ಬಾಲ್ಯ ಕಸಿಯಿತು,//

ಆಕ್ಸಿಜನ್ ಏನೆಂದು ಕಲಿಸಿತು..../


ವಿವಿಧತೆಯಲ್ಲಿ ಏಕತೆ ನಮ್ಮದು/

ಏಕತೆಯಲ್ಲಿ ವಿವಿಧತೆ ವೈರಾಸ್ಗಳದ್ದು/

ಎಸ್ಟೇ ಬರಲಿ SMS(ಸ್ಯಾನಿಟೈಸರ್,ಮಾಸ್ಕ್, ಸೋಶಿಯಲ್ ಡಿಸ್ಟೆನ್ಸ್) 

ಪಾಲನೆ ಇರಲಿ.//

ಜಾಗೃತರಾಗುವ, ಕಾಣದ ಅಲೆಯಿಂದ ಮುಕ್ತಿ ಪಡೆಯುವ.../

 -ಮಹಾಂತೇಶ, ಶಿಕ್ಷಕರು

ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ.

ತೋಗರ್ಸಿ. ಶಿಕಾರಿಪುರ ತಾಲ್ಲೂಕು. ಶಿವಮೊಗ್ಗ ಜಿಲ್ಲೆ.

No comments:

Post a Comment