Saturday 26 June 2021

Health: ಖಾಲಿ ಹೊಟ್ಟೆಗೆ ಈ ವಸ್ತುಗಳನ್ನು ತಿನ್ನಲೇಬೇಡಿ??

ಕೆಲವೊಂದು ಆಹಾರ ಪದಾರ್ಥಗಳನ್ನು ತಪ್ಪಿಯೂ ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. ಈ ಆಹಾರಗಳನ್ನು ಖಾಲಿಹೊಟ್ಟೆಯಲ್ಲಿ ಸೇವಿಸಿದರೆ ಸಮಸ್ಯೆ ತಪ್ಪಿದ್ದಲ್ಲ.  ಕೆಲವು ಆಹಾರಗಳನ್ನು ಎದ್ದ ತಕ್ಷಣ ಸೇವಿಸಿದರೆ ಆರೋಗ್ಯ ಸಮಸ್ಯೆಗಳು ಕಾಡಲು ಆರಂಭವಾಗುತ್ತದೆ. 


ಕೆಲವೊಂದು ಆಹಾರ ಪದಾರ್ಥಗಳಿರುತ್ತವೆ ಅವುಗಳನ್ನು ಖಾಲಿ ಹೊಟ್ಟೆಯಲ್ಲಿ, ಅಂದರೆ ಬೆಳಗ್ಗೆ ಎದ್ದ ತಕ್ಷಣ ಸೇವಿಸಬೇಕು ಎಂದು ಸೂಚಿಸಲಾಗುತ್ತದೆ. ಆದರೆ ಕೆಲವೊಂದು ಆಹಾರ ಪದಾರ್ಥಗಳನ್ನು ತಪ್ಪಿಯೂ ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. ಈ ಆಹಾರಗಳನ್ನು ಖಾಲಿಹೊಟ್ಟೆಯಲ್ಲಿ ಸೇವಿಸಿದರೆ ಸಮಸ್ಯೆ ತಪ್ಪಿದ್ದಲ್ಲ.  ಕೆಲವು ಆಹಾರಗಳನ್ನು ಎದ್ದ ತಕ್ಷಣ ಸೇವಿಸಿದರೆ ಆರೋಗ್ಯ ಸಮಸ್ಯೆಗಳು ಕಾಡಲು ಆರಂಭವಾಗುತ್ತದೆ. 

ಖಾಲಿ ಹೊಟ್ಟೆಯಲ್ಲಿ ಈ ವಸ್ತುಗಳನ್ನು ತಿನ್ನಲೇಬಾರದು : ಖಾಲಿ ಹೊಟ್ಟೆಯಲ್ಲಿ  ಜೀರ್ಣಾಂಗ ವ್ಯವಸ್ಥೆಯು ಬಹಳ ಸೂಕ್ಷ್ಮವಾಗಿರುತ್ತದೆ. ಏಕೆಂದರೆ ಈ ಸಂದರ್ಭದಲ್ಲಿ ಹೊಟ್ಟೆಯಲ್ಲಿ ಬೇರೆ ಯಾವುದೇ ಆಹಾರಗಳಿರುವುದಿಲ್ಲ.  ನೀವು ಏನನ್ನು ಸೇವಿಸುತ್ತಿರೋ ಅದು ಹೊಟ್ಟೆಯ ಒಳ ಚರ್ಮ ಮತ್ತು ಸ್ಟಮಕ್ ಜ್ಯೂಸ್ ನೊಂದಿಗೆ ಸಂಪರ್ಕ ಹೊಂದುತ್ತದೆ. ಹಾಗಾಗಿಯೇ ಈ ಪದಾರ್ಥಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬೇಡಿ.

ಚಾಕೊಲೇಟ್‌ಗಳು ಮತ್ತು ಸಿಹಿತಿಂಡಿಗಳು : ಬೆಳಿಗ್ಗೆ ಚಾಕೊಲೇಟ್  ಅಥವಾ ಸಿಹಿತಿಂಡಿಗಳನ್ನು ತಿನ್ನುವ ಮೂಲಕ ನಿಮ್ಮ ದಿನವನ್ನು ಪ್ರಾರಂಭಿಸುವುದು ತಪ್ಪು ನಿರ್ಧಾರ. ಏಕೆಂದರೆ, ಈ ವಸ್ತುಗಳ ಸೇವನೆಯಿಂದ ಮೇದೋಜ್ಜೀರಕ ಗ್ರಂಥಿಯು, ದೇಹ್ಕೆ ಸಿಕ್ಕಿರುವ ಸಕ್ಕರೆಗೆ ಹೊಂದಿಕೊಳ್ಳುವಷ್ಟು ಇನ್ಸುಲಿನ್ ಉತ್ಪಾದಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ದೇಹದ ಆಸಿಡ್ ಸಮತೋಲನ ತೊಂದರೆಗೊಳಗಾಗಬಹುದು. 

ಖಾಲಿ ಹೊಟ್ಟೆಯಲ್ಲಿ ಟೊಮೆಟೊ ತಿನ್ನುವುದು: ಟೊಮ್ಯಾಟೋದಲ್ಲಿ  ವಿಟಮಿನ್-ಸಿ ಮತ್ತು ಇತರ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುತ್ತವೆ.  ಆದರೆ, ಇದು ಟ್ಯಾನಿಕ್ ಆಸಿಡ್  ಸಹ ಹೊಂದಿರುತ್ತದೆ. ಇದು ನಿಮ್ಮ ಹೊಟ್ಟೆಯಲ್ಲಿ ಆಸಿಡಿಟಿಯನ್ನು  ಹೆಚ್ಚಿಸುತ್ತದೆ. ಇಸು ಗ್ಯಾಸ್ಟ್ರಿಕ್ ಅಲ್ಸರ್ ಗೂ ಕಾರಣವಾಗಬಹುದು. 

ಖಾಲಿ ಹೊಟ್ಟೆಯಲ್ಲಿ ಸೌತೆಕಾಯಿ ತಿನ್ನುವುದು: ಖಾಲಿ ಹೊಟ್ಟೆಯಲ್ಲಿ ಸೌತೆಕಾಯಿಯನ್ನು ಸೇವಿಸಿದಾಗ, ಅದನ್ನು ಜೀರ್ಣಿಸಿಕೊಳ್ಳಲು ಬೇಕಾಗುವಷ್ಟು ಸ್ಟಮಕ್ ಜ್ಯೂಸ್ ಇರುವುದಿಲ್ಲ. ಈ ಕಾರಣದಿಂದಾಗಿ, ಸೌತೆಕಾಯಿ ಸಂಪೂರ್ಣವಾಗಿ ಜೀರ್ಣವಾಗುವುದಿಲ್ಲ. ಇದರಿಂದ ಹೊಟ್ಟೆಯಲ್ಲಿ ಕಿರಿಕಿರಿ ಉಂಟುಮಾಡುತ್ತದೆ.


No comments:

Post a Comment