ಬೆಂಗಳೂರು: ಇಂದು ಅಂತರಾಷ್ಟ್ರೀಯ ಯೋಗ ದಿನವಾಗಿದ್ದು, ಇದೇ ಸಂದರ್ಭದಲ್ಲಿ ದೇಶಾದ್ಯಂತ ಜನರಿಗೆ ಇಂದಿನಿಂದ ಉಚಿತ ಲಸಿಕೆ ನೀಡಲು ಕೇಂದ್ರ
ಸರ್ಕಾರ ನಿರ್ಧರಿಸಿದೆ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಇಂದಿನಿಂದ
ಉಚಿತ ವ್ಯಾಕ್ಸಿನ್ ನೀಡಲಾಗುತ್ತಿದ್ದು, ಪ್ರತಿಯೊಬ್ಬರೂ ಲಸಿಕೆ
ಪಡೆದುಕೊಳ್ಳಬೇಕು ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಇಂದಿನಿಂದ ಉಚಿತವಾಗಿ
ಕೋವಿಡ್ ಲಸಿಕೆ ನೀಡುವ ಐತಿಹಾಸಿಕ ನಿರ್ಣಯ ಕೈಗೊಂಡಿದೆ. ಕೋವಿಡ್ ಲಸಿಕೆ ಸಂಪೂರ್ಣ
ಸುರಕ್ಷಿತವಾಗಿದೆ. ವದಂತಿಗಳನ್ನು ನಂಬಬೇಡಿ, ಎಲ್ಲರೂ ಲಸಿಕೆ ಪಡೆದು
ಸುರಕ್ಷಿತವಾಗಿರಿ ಎಂದು ಮನವಿ ಮಾಡಿದ್ದಾರೆ.
ಇದೇ ವೇಳೆ ಕೊರೊನಾ ಸೋಂಕಿನ ಬಗ್ಗೆ ನಿರ್ಲಕ್ಷ್ಯ ಬೇಡ. ಯಾರೂ ಕೂಡ ಅನಗತ್ಯವಾಗಿ ಮನೆಗಳಿಂದ ಹೊರಬರಬೇಡಿ. ಮಾಸ್ಕ್,
ಸಾಮಾಜಿಕ ಅಂತರ ಪಾಲನೆ ಮಾಡಿ ನಾವೆಲ್ಲರೂ ಜೊತೆಯಾಗಿ ಕೊರೊನಾ ಹಿಮ್ಮೆಟ್ಟಿಸೋಣ
ಎಂದು ಕರೆ ನೀಡಿದ್ದಾರೆ.
No comments:
Post a Comment