ಹುಬ್ಬಳ್ಳಿ, ಜೂನ್ 21: ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಒಂದೇ ಕಾಲಿನ ಅಪರೂಪದ ಮಗುವಿನ ಜನನವಾಗಿದೆ. ಈ ಮಗುವಿನ ಭಾವಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರದಾಡಿದ್ದು, ಸಾರ್ವಜನಿಕರಿಗೆ ಅಚ್ಚರಿ ಮೂಡಿಸಿದೆ.
ಹಳೇ ಹುಬ್ಬಳ್ಳಿಯ ಮಹಿಳೆ ಒಬ್ಬರು ಹೆರಿಗೆ ನೋವು ಕಾಣಿಕೊಂಡ ಕಾರಣ
ಕಿಮ್ಸ್ ಆಸ್ಪತ್ರೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆ ಮಾಡಿಸಲಾಗಿತ್ತು.
ವಿಚಿತ್ರ ರೀತಿಯಲ್ಲಿ ಒಂಟಿ ಕಾಲಿನ ಮಗು ಜನಿಸಿದ್ದು, ಆಸ್ಪತ್ರೆಯ
ವೈದ್ಯರಿಗೂ ಸಹ ಅಚ್ಚರಿ ಮೂಡುವಂತೆ ಮಾಡಿದೆ.
ಆದರೆ, ಕೆಲವೇ ಹೊತ್ತಿನ
ನಂತರ ಮಗು ಸಾವನ್ನಪ್ಪಿದೆ. ಇಂತಹ ಮಗುವಿನ ಜನನ ಅಪರೂಪವಾಗಿದ್ದು, ಇದಕ್ಕೆ
ಏನು ಕಾರಣ ಎಂದು ತಿಳಿದುಕೊಳ್ಳಲು ಸಂಶೋಧನೆಗೆ ಕಳುಹಿಸಲಾಗಿದೆ ಎಂದು ಕಿಮ್ಸ್ ಆಸ್ಪತ್ರೆ ವೈದ್ಯರು
ತಿಳಿಸಿದ್ದಾರೆ.
No comments:
Post a Comment