Thursday 24 June 2021

ಸೆಪ್ಟಂಬರ್ ವೇಳೆಗೆ 5ಜಿ ಯುಗಾರಾಂಭ, ಮುಖೇಶ್ ಅಂಬಾನಿ.



ರಿಲಯನ್ಸ್​ನ 44ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, 2ಜಿ ಬಳಕೆದಾರರಿಗೆ ಕೈಗೆಟುಕುವ 4ಜಿ ಸ್ಮಾರ್ಟ್​ಫೋನ್​ ಸಿಗಲಿದೆ ಅಲ್ಲದೇ ಕೈಗೆಟುವ ದರದಲ್ಲಿ 5ಜಿ ಮೊಬೈಲ್​ ಬಿಡುಗಡೆ ಮಾಡಲಾಗುವುದು ಎಂದು ಕೂಡ ತಿಳಿಸಿದ್ದಾರೆ. ಪರಿಸರ ಸ್ನೇಹಿಯಾಗಿ 5ಜಿ ಅಭಿವೃದ್ಧಿ ಪಡಿಸಲಾಗುವುದು. ಅಲ್ಲದೇ 5ಜಿ ಅನ್ನು ಜಾಗತಿಕ ಪಾಲುದಾರರೊಂದಿಗೆ ಕೆಲಸ ಮಾಡಲಾಗುತ್ತಿದೆ.

ಭಾರತವನ್ನು ಕೇವಲ 2 ಜಿ ಮುಕ್ತವಾಗಿಸಲು ಕೆಲಸ ಮಾಡುತ್ತಿಲ್ಲ. ಜೊತೆಗೆ 5ಜಿ ಯುಗಾರಂಭ ಮಾಡಲು ಕಾರ್ಯನಿರ್ವಹಿಸುತ್ತಿದ್ದೇವೆ.ಭಾರತೀಯ ಸ್ಥಳೀಯ ಭಾಷೆಯಲ್ಲಿ ಮಾಹಿತಿಯನ್ನು ಕೈಗೆಟುಕುವ ದರದಲ್ಲಿ ಹೊಸ ಉತ್ಪನ್ನಗಳು ಮತ್ತು ಸೇವೆಗಳನ್ನು ನಿರ್ಮಿಸುವುದು ಮತ್ತು ತಂತ್ರಜ್ಞಾನದೊಂದಿಗೆ ವ್ಯವಹಾರಗಳನ್ನು ಸಶಕ್ತಗೊಳಿಸುವುದು ನಮ್ಮ ಉದ್ದೇಶವಾಗಿದೆ.

 

ಕೋವಿಡ್​ ಬಿಕ್ಕಟ್ಟಿನ ನಡುವೆಯೋ ಭಾರತ ತನ್ನ ಕಾರ್ಯಕ್ಷಮತೆಯನ್ನು ಸಾಧಿಸಿದೆ. ಜಿಯೋ ಇಂದು ವಿಶ್ವದ ಅತಿದೊಡ್ಡ ಮೊಬೈಲ್​ ಡೇಟಾ ನೀಡುವ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ

ಗೂಗಲ್ ಕ್ಲೌಡ್​​ ಮತ್ತು ಜಿಯೋ ನಡುವಿನ ಹೊಸ 5 ಜಿ ಸಹಭಾಗಿತ್ವವು ಒಂದು ಶತಕೋಟಿಗೂ ಹೆಚ್ಚು ಭಾರತೀಯರು ವೇಗದ ಇಂಟರ್‌ನೆಟ್‌ಗೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ, ಡಿಜಿಟಲ್ ರೂಪಾಂತರದಲ್ಲಿ ವ್ಯವಹಾರಗಳನ್ನು ಬೆಂಬಲಿಸುತ್ತದೆ ಮತ್ತು ಭಾರತದ ಮುಂದಿನ ಡಿಜಿಟಲೀಕರಣಕ್ಕೆ ಅಡಿಪಾಯ ಹಾಕಲಿದೆ.

 

ಮೈಕ್ರೋಸಾಫ್ಟ್​ನೊಂದಿಗೆ JIO-AZURE ಕ್ಲೌಡ್​​ ದತ್ತಾಂಶ ಕೇಂದ್ರಗಳ ಆರಂಭಿಕ 10 ಮೆಗಾವ್ಯಾಟ್ ಸಾಮರ್ಥ್ಯವನ್ನು ಕಾರ್ಯಗತಗೊಳಿಸಲಾಗುವುದು. ಜಿಯೋ ಫೈಬರ್​ ಭಾರತದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಬ್ರಾಡ್​ಬ್ಯಾಂಡ್​ ಸೇವೆಯಾಗಿದ್ದು, 3 ಮಿಲಿಯನ್​ ಬಳಕೆದಾರರನ್ನು ಹೊಂದಿದೆ.ಜಿಯೋ ಗೂಗಲ್​, ಫೇಸ್​ಬುಕ್​, ಮೈಕ್ರೋಸಾಫ್ಟ್​ನೊಂದಿಗೆ ಕೂಡ ಪಾಲುದಾರಿಕೆ ಹೊಂದಿದ್ದು, ಇದು ನಮಗೆ ಖುಷಿ ತಂದಿದೆ ಎಂದಿದ್ದಾರೆ ಮುಖೇಶ್​ ಅಂಬಾನಿ

 ಗೂಗಲ್ ಹಾಗೂ ಜಿಯೋ ಸಹಯೋಗದಲ್ಲಿ ಅಭಿವೃದ್ಧಿಯಾಗಿರುವ ಜಿಯೋಫೋನ್ ನೆಕ್ಸ್ಟ್-5 ಜಿ ಸ್ಮಾರ್ಟ್ ಫೋನ್ ಸೆಪ್ಟೆಂಬರ್ ನಲ್ಲಿ ಬಿಡುಗಯಾಗಲಿದೆ ಎಂದೌ ರಿಲಾಯನ್ಸ್ ಇಂಡಸ್ಟ್ರೀಸ್ ನ ಅಧ್ಯಕ್ಷ ಮುಖೇಶ್ ಅಂಬಾನಿ ಜೂ.24 ರಂದು ಘೋಷಿಸಿದ್ದಾರೆ.ಜಿಯೋಫೋನ್ ನೆಕ್ಸ್ಟ್ ಸೆ.10 ರಿಂದ ಮಾರುಕಟ್ಟೆಯಲ್ಲಿ ಲಭ್ಯವಿರಲಿದ್ದು ಜಗತ್ತಿನಲ್ಲಿಯೇ ಕೈಗೆಟುಕುವ ಸ್ಮಾರ್ಟ್ ಫೋನ್ ಆಗಿರಲಿದೆ ಎಂದು ಅಂಬಾನಿ ಆರ್ ಐಎಲ್ ನ ವಾರ್ಷಿಕ ಸಭೆಯಲ್ಲಿ ಅಂಬಾನಿ ಹೇಳಿದ್ದಾರೆ.

ಧ್ವನಿ ಸಹಾಯಕ ಜಾಗೂ ಭಾಷಾಂತರ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಸ್ಮಾರ್ಟ್ ಫೋನ್ ಹೊಂದಿರಲಿದ್ದು, ರಿಲಾಯನ್ಸ್ ಜಿಯೋ 5 ಜಿ ಗಾಗಿ ಗೂಗಲ್ ಕ್ಲೌಡ್ ನ್ನು ಬಳಕೆ ಮಾಡಲಿದೆ ಎಂದು ಅಂಬಾನಿ ಹೇಳಿದ್ದಾರೆ. ಕಳೆದ ವರ್ಷ ರಿಲಾಯನ್ಸ್ ನಲ್ಲಿ ಶೇ.7.7 ರಷ್ಟು ಪಾಲನ್ನು ಹೊಂದಲು 33,737 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುವುದಾಗಿ ಹೇಳಿತ್ತು.


No comments:

Post a Comment