ಬೆಂಗಳೂರು : ರಾಜ್ಯದಲ್ಲಿ ದಿನೇ ದಿನೇ ಕೊರೋನಾ
ಅಬ್ಬರ ಇಳಿಕೆಯತ್ತ ಸಾಗುತ್ತಿದೆ. ಕಳೆದ 24 ಗಂಟೆಯಲ್ಲಿ 3,979
ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಅಲ್ಲದೇ ಸೋಂಕಿತರಾದಂತ 138
ಜನರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.ಈ ಕುರಿತಂತೆ
ರಾಜ್ಯ ಆರೋಗ್ಯ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಬೆಂಗಳೂರು ನಗರದಲ್ಲಿ 969 ಜನರು ಸೇರಿದಂತೆ ರಾಜ್ಯದಲ್ಲಿ
ಕಳೆದ 24 ಗಂಟೆಯಲ್ಲಿ ಹೊಸದಾಗಿ 3,979 ಜನರಿಗೆ
ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 2823444ಕ್ಕೆ ಏರಿಕೆಯಾಗಿದೆ.
24 ಗಂಟೆಯಲ್ಲಿ ಸೋಂಕಿತರಾದಂತ 9768 ಜನರು ಸೇರಿದಂತೆ ಇದುವರೆಗೆ 2678473 ಸೋಂಕಿತರು ಗುಣಮುಖರಾದ
ಕಾರಣ, ರಾಜ್ಯದಲ್ಲಿ 110523 ಸಕ್ರೀಯ
ಸೋಂಕಿತರು ಇರುವುದಾಗಿ ತಿಳಿಸಿದೆ.ಇನ್ನೂ ಇಂದು ಕಿಲ್ಲರ್ ಕೊರೋನಾ ಸಾವಿನ ಸರಣಿ
ಮುಂದುವರೆದಿದ್ದು, 24 ಗಂಟೆಯಲ್ಲಿ ಬಳ್ಳಾರಿಯಲ್ಲಿ 10, ಬೆಂಗಳೂರು ನಗರದಲ್ಲಿ 14 ಜನರು, ದಕ್ಷಿಣ
ಕನ್ನಡ ಜಿಲ್ಲೆಯಲ್ಲಿ 15, ಧಾರವಾಡ 10, ಮೈಸೂರು
22 ಜನರು ಸೇರಿದಂತೆ ರಾಜ್ಯದಲ್ಲಿ 138 ಜನರು
ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಹೀಗಾಗಿ ಇದುವರೆದೆ ಕಿಲ್ಲರ್ ಕೊರೋನಾಗೆ
ಬಲಿಯಾದವರ ಸಂಖ್ಯೆ 34,425ಕ್ಕೆ ಏರಿಕೆಯಾಗಿದೆ.
No comments:
Post a Comment