Wednesday 23 June 2021

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್: ನ್ಯೂಜಿಲ್ಯಾಂಡ್ 249 ಕ್ಕೆ ಆಲ್ ಔಟ್, ಭಾರತ: ಎರಡನೇ ಇನಿಂಗ್ಸ್ 64 ಕ್ಕೆ 2 ವಿಕೆಟ್.

ನವದೆಹಲಿ: ದಿ ರೋಸ್ ಬೌಲ್, ಸೌತಾಂಪ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ಪಂದ್ಯಾವಳಿಯಲ್ಲಿ ಭಾರತ ತಂಡವು ಎರಡನೇ ಇನಿಂಗ್ಸ್ ನಲ್ಲಿ 64 ರನ್ ಗಳಿಗೆ ಎರಡು ವಿಕೆಟ್ ಗಳನ್ನು ಕಳೆದುಕೊಂಡಿದೆ.ಆ ಮೂಲಕ ಇನಿಂಗ್ಸ್ 32 ರನ್ ಗಳ ಮುನ್ನಡೆಯನ್ನು ಸಾಧಿಸಿದೆ.

ಇದಕ್ಕೂ ಮೊದಲು ಭಾರತ ನೀಡಿದ 217 ರನ್ ಗಳಿಗೆ ಪ್ರತಿಯಾಗಿ ನ್ಯೂಜಿಲೆಂಡ್  ತಂಡವು ಕಾನ್ವೆ 54, ಹಾಗೂ ವಿಲಿಯಮ್ಸನ್ 49 ಅವರ ಬ್ಯಾಟಿಂಗ್ ನೆರವಿನಿಂದಾಗಿ 249 ರನ್ ಗಳಿಗೆ ಸರ್ವಪತನ ಕಂಡಿತು. ಒಂದು ಹಂತದಲ್ಲಿ ಎರಡು ವಿಕೆಟ್ ನಷ್ಟಕ್ಕೆ 101 ರನ್ ಗಳಿಸುವ ಮೂಲಕ ಸುಸ್ಥಿತಿಯಲ್ಲಿದ್ದ ನ್ಯೂಜಿಲೆಂಡ್ ತಂಡವು ನಂತರ ಧೀಡೀರ್ ಕುಸಿತ ಕಂಡಿತು.ಭಾರತದ ಪರವಾಗಿ ಮೊಹಮ್ಮದ್ ಶಮಿ 4, ಆರ್.ಅಶ್ವಿನ್ 2, ಇಶಾಂತ್ ಶರ್ಮಾ 3 ವಿಕೆಟ್ ಗಳನ್ನು ಕಬಳಿಸುವ ಮೂಲಕ ನ್ಯೂಜಿಲೆಂಡ್ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.

ಇದಕ್ಕೆ ಪ್ರತಿಯಾಗಿ ಎರಡನೇ ಇನಿಂಗ್ಸ್ ಆರಂಭಿಸಿರುವ ಭಾರತ ತಂಡವು ಎಚ್ಚರಿಕೆಯಿಂದಲೇ ಆಟವಾಡಿದರೂ ಕೂಡ 64 ರನ್ ಗಳಿಗೆ ಎರಡು ಮಹತ್ವದ ವಿಕೆಟ್ ಗಳನ್ನು ಕಳೆದುಕೊಂಡಿದೆ.ಆರಂಭಿಕ ಆಟಗಾರ ರೋಹಿತ್ ಶರ್ಮಾ 30 ಗಳಿಸಿ, ಔಟಾದರೆ ಶುಬ್ಮನ್ ಗಿಲ್ 8 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಈ ಎರಡು ವಿಕೆಟ್ ಗಳನ್ನು ಸೌಥಿ ಪಡೆದಿದ್ದು ವಿಶೇಷವಾಗಿತ್ತು. ಈ ಪಿಚ್ ಬೌಲರಗಳಿಗೆ ನೆರವಾಗುತ್ತಿರುವ ಹಿನ್ನಲೆಯಲ್ಲಿ ಫೈನಲ್ ಪಂದ್ಯ ಮತ್ತಷ್ಟು ಕುತುಕೂಲ ಕೆರಳಿಸಿದೆ.

No comments:

Post a Comment