Saturday 19 June 2021

ಜೂನ್ 21 ರ ವರೆಗೂ ಈ ಜಿಲ್ಲೆಗಳಲ್ಲಿ, ಭಾರೀ ಮಳೆ.




ಕರಾವಳಿಉತ್ತರ ಒಳನಾಡಿನಲ್ಲಿ ಜೂ. 21 ರವರೆಗೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಇಂದು ಮತ್ತು ನಾಳೆ ದಕ್ಷಿಣ ಕನ್ನಡಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ. 




ಬೆಂಗಳೂರು : ಮುಂದಿನ 24 ಗಂಟೆಗಳಲ್ಲಿ ಭಾರೀ ಗಾಳಿ ಸಮೇತ ಬೆಂಗಳೂರಿನಲ್ಲಿ ಮಳೆ ಆಗಲಿದೆ ಎಂದು ಭಾರತ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಅಲ್ಲದೆ, ಕರಾವಳಿ, ಉತ್ತರ ಒಳನಾಡಿನಲ್ಲಿ ಜೂ. 21 ರವರೆಗೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಇಂದು ಮತ್ತು ನಾಳೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ.

ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 29 ಮತ್ತು 20 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಶಿವಮೊಗ್ಗ, ಹಾಸನ, ಕೊಡಗು ಮತ್ತು ಚಿಕ್ಕಮಗಲೂರು ಜಿಲ್ಲೆಗಳಿಗೆ ಆರೇಂಜ್ ಎಚ್ಚರಿಕೆ ನೀಡಲಾಯಿತು . ನಗರದ ಐಎಮ್‌ಡಿಯ ಪ್ರಾದೇಶಿಕ ಶಾಖೆ ಮೀನುಗಾರರಿಗೆ ಜೂ.18 ಮತ್ತು 19 ರಂದು ಸಮುದ್ರಕ್ಕೆ ಇಳಿಯದಂತೆ ಸಲಹೆ ನೀಡಿತು.

ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ 21 ಸೆಂ.ಮೀ ಗರಿಷ್ಠ ಮಳೆಯಾಗಿದೆ. ಸಿದ್ದಾಪುರ 12 ಸೆಂ.ಮೀ, ಮಡಿಕೇರಿ 11 ಸೆಂ.ಮೀ, ಕುಂದಾಪುರ 9 ಸೆಂ.ಮೀ, ಸೊರಬ 8 ಸೆಂ.ಮೀ, ಸಾಗರ 7 ಸೆಂ.ಮೀ, ಬೆಳ್ತಂಗಡಿ 6 ಸೆಂ.ಮೀ, ಬೆಳಗಾವಿ, ಸಕಲೇಶಪುರ 5 ಸೆಂ.ಮೀ, ಮೂಡುಬಿದರೆ, ಪುತ್ತೂರು, ಕಾರವಾರ 4 ಸೆಂ.ಮೀ, ಭಟ್ಕಳ, ಹಾವೇರಿ, ಭದ್ರಾವತಿ, ಶಿವಮೊಗ್ಗ 3 ಸೆಂ.ಮೀ, ಮಂಗಳೂರು, ಧಾರವಾಡ, ತರೀಕೆರೆ, ಹಾಸನದಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ.

 


No comments:

Post a Comment