ವರ್ಷದ ಮೊದಲ ಸೂರ್ಯಗ್ರಹಣ ಜೂನ್ 10ರಂದು ಸಂಭವಿಸಲಿದೆ. 148 ವರ್ಷಗಳ ನಂತ್ರ ಶನಿ ಜಯಂತಿ ದಿನ ಸೂರ್ಯಗ್ರಹಣವಾಗ್ತಿದೆ. ಶನಿ ಜಯಂತಿಯಂದು ಸೂರ್ಯ ಮತ್ತು ಶನಿಯ ಅದ್ಭುತ ಸಂಯೋಜನೆಯಾಗಲಿದೆ. ಈ ಸೂರ್ಯಗ್ರಹಣ ಭಾರತದಲ್ಲಿ ಭಾಗಶಃ ಗೋಚರಿಸಲಿದೆ. ಹಾಗಾಗಿ ಸೂತಕದ ಅವಧಿ ಮಾನ್ಯವಾಗ್ತಿಲ್ಲ.
ಜ್ಯೋತಿಷಿಗಳ ಪ್ರಕಾರ, ಸೂರ್ಯಗ್ರಹಣದ ಅದ್ಭುತ ಸಮಸ ಮೇ 26, 1873 ರಂದು ಶನಿ ಜಯಂತಿ ದಿನದಂದು ಸಂಭವಿಸಿತ್ತು. ಈ ಗ್ರಹಣ ವೃಷಭ ಮತ್ತು ಮೃಗಶಿರಾ ನಕ್ಷತ್ರಪುಂಜದಲ್ಲಿ ಬರಲಿದೆ. ಉತ್ತರ ಅಮೆರಿಕಾ, ಯುರೋಪ್ ಮತ್ತು ಏಷ್ಯಾದಲ್ಲಿ ಗ್ರಹಣ ಸ್ಪಷ್ಟವಾಗಿ ಗೋಚರಿಸಲಿದೆ. ಈ ಗ್ರಹಣ ಲಡಾಖ್ ಮತ್ತು ಅರುಣಾಚಲ ಪ್ರದೇಶದಲ್ಲಿ ಗೋಚರಿಸುವ ಸಾಧ್ಯತೆಯಿದೆ. ಸೂರ್ಯಾಸ್ತಕ್ಕೂ ಮುನ್ನ ಸೂರ್ಯ ಗ್ರಹಣ ಗೋಚರಿಸಲಿದೆ. ಆದ್ರೆ ಭಾರತದಲ್ಲಿ ಭಾಗಶಃ ಮಾತ್ರ ಗೋಚರಿಸಲಿದ್ದು, ಕರ್ನಾಟಕ, ದಕ್ಷಿಣ ಭಾರತದಲ್ಲಿ ಗ್ರಹಣ ಗೋಚರಿಸುವುದಿಲ್ಲ.
ಜೂನ್ 10ರ ಮಧ್ಯಾಹ್ನ 1.42ಕ್ಕೆ ಶುರುವಾಗಿ ಸಂಜೆ 6.41ಕ್ಕೆ ಕೊನೆಗೊಳ್ಳಲಿದೆ. ಒಟ್ಟು ಐದು ಗಂಟೆಗಳ ಕಾಲ ಗ್ರಹಣವಿರಲಿದೆ. ಗ್ರಹಣ ಕಾಲದಲ್ಲಿ ದೇವರ ಧ್ಯಾನ ಮಾಡಬೇಕು. ಆದ್ರೆ ದೇವರ ಮೂರ್ತಿಯನ್ನು ಎಂದೂ ಮುಟ್ಟಬಾರದು. ಆಹಾರಗಳಿಗೆ ತುಳಸಿ ಕುಡಿಯನ್ನು ಹಾಕಬೇಕು. ಗ್ರಹಣ ಕಾಲದಲ್ಲಿ ನಿದ್ರೆ ಮಾಡಬಾರದು. ಗ್ರಹಣ ಶುರುವಾಗ್ತಿದ್ದಂತೆ ಸ್ನಾನ ಮಾಡಿ ದೇವರ ಧ್ಯಾನ ಮಾಡಬೇಕು. ಗ್ರಹಣ ಮುಗಿದ ಮೇಲೆ ಮತ್ತೆ ಸ್ನಾನ ಮಾಡಿ ದೇವರ ಪೂಜೆ ಮಾಡಬೇಕು
No comments:
Post a Comment