'ಕೋವ್ಯಾಕ್ಸಿನ್ ಲಸಿಕೆ' ಪಡೆಯೋ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್ : ರಾಜ್ಯದಲ್ಲಿ '2ನೇ ಡೋಸ್' ಬಾಕಿ ಇರೋರಿಗೆ ಮಾತ್ರ ಲಸಿಕೆ
ಬೆಂಗಳೂರು : ರಾಜ್ಯದಲ್ಲಿ ಸದ್ಯಕ್ಕೆ 18 ರಿಂದ 44 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಇಲ್ಲ. ಈಗ ಏನಿದ್ದರೂ ಆದ್ಯತೆಯ ಮೇರೆಗೆ ಕೊರೋನಾ ಮುಂಚೂಣಿ ಕಾರ್ಯಕರ್ತರು ಎಂಬುದಾಗಿ ರಾಜ್ಯ ಸರ್ಕಾರ ಪರಿಗಣಿಸಿರುವಂತವರಿಗೆ ಮಾತ್ರ ಲಸಿಕೆ ನೀಡಲಾಗುತ್ತಿದೆ. ಇನ್ನೂ ಕೋವಿಶೀಲ್ಡ್ ಏನೋ ಎಲ್ಲಾ ಕಡೆ ಸಿಗ್ತಾ ಇದೆ. ಆದ್ರೇ ಕೋವ್ಯಾಕ್ಸಿನ್ ಲಸಿಕೆಗೆ ಸಾಕಷ್ಟು ಕೊರತೆ ಎದುರಾಗಿದೆ ಎನ್ನುವಂತಿದೆ. ಇದರಿಂದಾಗಿಯೇ ಕೋವ್ಯಾಕ್ಸಿನ್ ಲಸಿಕೆ ಪಡೆಯೋ ಯೋಚನೆಯಲ್ಲಿ ಇದ್ದವರಿಗೆ ಸದ್ಯಕ್ಕೆ ಸಿಗೋದು ಡೌಟ್ ಆಗಿದೆ.
ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಿಸಲಾಗುತ್ತಾ?
ಆರೋಗ್ಯ ಸಚಿವರ ಉತ್ತರ.!
ಹೌದು.. ಸದ್ಯಕ್ಕೆ ಹೆಚ್ಚು ಜನರಿಗೆ ಸಿಗ್ತಾ ಇರೋದು ರಾಜ್ಯದಲ್ಲಿ ಕೋವಿಶೀಲ್ಡ್ ಲಸಿಕೆ ಮಾತ್ರವೇ ಆಗಿದೆ. ಅದರ ಹೊರತಾಗಿ ಕೋವ್ಯಾಕ್ಸಿನ್ ಲಸಿಕೆ ಸಿಗ್ತಾನೇ ಇಲ್ಲವಾಗಿದೆ. ಈಗಾಗಲೇ ಮೊದಲ ಡೋಸ್ ಪಡೆದಂತವರಿಗೆ ಮಾತ್ರವೇ ಕೋವ್ಯಾಕ್ಸಿನ್ ಲಸಿಕೆಯನ್ನು ನೀಡಲಾಗುತ್ತೆ ಎಂಬುದಾಗಿ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
ಈ ಕುರಿತಂತೆ ಟ್ವಿಟ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಅವರು, ಕೇಂದ್ರ ಸರ್ಕಾರದಿಂದ ಇಂದು ಕರ್ನಾಟಕಕ್ಕೆ 1.64 ಲಕ್ಷ ಡೋಸ್ ಕೋವ್ಯಾಕ್ಸಿನ್ ಪೂರೈಕೆಯಾಗಿದೆ. ಒಟ್ಟು ಕೋವ್ಯಾಕ್ಸಿನ್ ಪೂರೈಕೆ: 17.8 ಲಕ್ಷ ಡೋಸ್. ಕೇಂದ್ರ ಸರ್ಕಾರದಿಂದ: 15.86 ಲಕ್ಷ ಡೋಸ್. ರಾಜ್ಯ ಸರ್ಕಾರದ ಖರೀದಿ: 1.94 ಲಕ್ಷ ಡೋಸ್. ಲಭ್ಯವಿರುವ ಕೋವ್ಯಾಕ್ಸಿನ್ ಲಸಿಕೆಯನ್ನು 2ನೇ ಡೋಸ್ ಬಾಕಿ ಇರುವವರಿಗೆ ಆದ್ಯತೆ ಮೇರೆಗೆ ನೀಡಲಾಗುವುದು ಎಂಬುದಾಗಿ ತಿಳಿಸಿದ್ದಾರೆ. ಈ ಮೂಲಕ ಮೊದಲ ಡೋಸ್ ಕೋವ್ಯಾಕ್ಸಿನ್ ಲಸಿಕೆ ಪಡೆಯೋ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್ ನೀಡಿದ್ದಾರೆ.
Comments
Post a Comment