Monday, 31 May 2021

ಕೋವಿಡ್-19:ರಾಜ್ಯದಲ್ಲಿಂದು 16,604, ಹೊಸ ಪ್ರಕರಣ,411 ಸಾವು.


 ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಚೇತರಿಕೆ ಪ್ರಮಾಣದಲ್ಲಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಇಂದು 44,473 ಸೋಂಕಿತರು ಗುಣಮುಖರಾಗಿ ಆಸ್ರತ್ರೆಯಿಂದ ಬಿಡುಗಡೆಯಾಗಿದ್ದಾರೆ.ಇದರೊಂದಿಗೆ ಸೋಂಕಿನಿಂದ ಗುಣಮುಖರಾದವರ ಒಟ್ಟು ಸಂಖ್ಯೆ 22,61,590ಕ್ಕೆ ಏರಿಕೆಯಾಗಿದೆ.

ಹೊಸದಾಗಿ 16,604 ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿನ ಖಚಿತ ಪ್ರಕರಣಗಳ ಒಟ್ಟು ಸಂಖ್ಯೆ 26,04,431 ಆಗಿದೆ. ರಾಜ್ಯದಲ್ಲಿ ಒಟ್ಟು 3,13,730 ಸಕ್ರಿಯ ಪ್ರಕರಣಗಳಿವೆ. ಮರಣ ಪ್ರಮಾಣದಲ್ಲಿ ಇಳಿಕೆ ಕಂಡುಬರುತ್ತಿಲ್ಲ. ಇಂದು ಸಹ 411 ಸೋಂಕಿತರು ಮೃತಪಟ್ಟಿದ್ದಾರೆ. ಸೋಂಕಿನ ಖಚಿತ ಪ್ರಕರಣಗಳ ಶೇಕಡಾವಾರು ಪ್ರಕರಣ ಶೇ.13.57 ರಷ್ಟಿದ್ದರೆ, ಮರಣ ಪ್ರಮಾಣ ಶೇ.2.47 ರಷ್ಟಿದೆ.

ಬೆಂಗಳೂರು ನಗರದಲ್ಲಿ 3992 ಪ್ರಕರಣಗಳು ದೃಢಪಟ್ಟಿದ್ದು, 242 ಮಂದಿ ಸಾವನ್ನಪ್ಪಿದ್ದಾರೆ. ಉಳಿದಂತೆ ಬಾಗಲಕೋಟೆ 194, ಬಳ್ಳಾರಿ 437, ಬೆಳಗಾವಿ 910, ಬೆಂಗಳೂರು ಗ್ರಾಮಾಂತರ 383, ಚಾಮರಾಜನಗರ 317, ಚಿಕ್ಕಬಳ್ಳಾಪುರ 415, ಚಿಕ್ಕಮಗಳೂರು 340, ಚಿತ್ರದುರ್ಗ 731, ದಕ್ಷಿಣ ಕನ್ನಡ 651, ದಾವಣಗೆರೆ 360, ಧಾರವಾಡ 291, ಗದಗ 240,ಹಾಸನ 1162, ಹಾವೇರಿ 134,ಕಲಬುರಗಿ 93,ಕೊಡಗು 193, ಕೋಲಾರ 465, ಕೊಪ್ಪಳ 249, ಮಂಡ್ಯ 753, ಮೈಸೂರು 1171, ರಾಯಚೂರು 192, ರಾಮನಗರ 90, ಶಿವಮೊಗ್ಗ 589, ತುಮಕೂರು 806,ಉಡುಪಿ 519, ಉತ್ತರ ಕನ್ನಡ 641, ವಿಜಯಪುರ 185,ಯಾದಗಿರಿಯಲ್ಲಿ 84 ಪ್ರಕರಣಗಳು ವರದಿಯಾಗಿವೆ.





No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...