![]() |
ಆನಂದ್ ಬೆಂಗಳೂರಿಗೆ ಹೋಗುವ ದಾರಿಯಲ್ಲಿ ಬೈಸಿಕಲ್ ಸವಾರಿ ಮಾಡುತ್ತಿದ್ದರು |
ಮೈಸೂರು: “ನನ್ನ ಮಗ 18 ವರ್ಷದವನಾಗುವವರೆಗೂ ತಪ್ಪಿಲ್ಲದೆ ಔಷಧಿ ತೆಗೆದುಕೊಂಡರೆ, ಅವನು ಇತರ ವ್ಯಕ್ತಿಗಳಂತೆ ಸಾಮಾನ್ಯನಾಗಿರುತ್ತಾನೆ, ಎಂದು ವೈದ್ಯರು ಭರವಸೆ
ನೀಡಿದ್ದರು. ಆದ್ದರಿಂದ ಯಾವುದೇ ಎರಡನೆಯ ಆಲೋಚನೆಯಿಲ್ಲದೆ, COVID-19 ಲಾಕ್‌ಡೌನ್ ಮಧ್ಯೆ ತನ್ನ ವಿಕಲಚೇತನ ಮಗನಿಗೆ ಔಷಧಿ ಖರೀದಿಸಲು ತನ್ನ
ಹಳ್ಳಿಯಿಂದ ಬೆಂಗಳೂರಿಗೆ ಸೈಕಲ್ ನಲ್ಲಿ 300 ಕಿ.ಮೀ.ಸಾಗಿ ಔಷಧಿ ತರುವ ದೃಢ ನಿರ್ಧಾರ ತೆಗೆದುಕೊಂಡೆ ”ಎಂದು 45 ವರ್ಷದ ಆನಂದ್ ಹೇಳುತ್ತಾರೆ,
ಸಂಪೂರ್ಣ ಲಾಕ್‌ಡೌನ್‌ನ ಮಧ್ಯೆ ತನ್ನ ಹಳ್ಳಿಯಿಂದ ಬೆಂಗಳೂರಿಗೆ ಯಾವುದೇ ಸಾರ್ವಜನಿಕ
ಸಾರಿಗೆ ಮತ್ತು ಖಾಸಗಿ ವಾಹನವನ್ನು ಕಾಯ್ದಿರಿಸಲು ಹಣವಿಲ್ಲದ ಕಾರಣ, ನಗರದಿಂದ ಔಷಧಿ ಪಡೆಯಲು ದೈನಂದಿನ
ಕೂಲಿ ಕೆಲಸಗಾರನಾದ ಆನಂದ್, ಮೈಸೂರಿನ ಒಂದು ಪುಟ್ಟ ಹಳ್ಳಿಯಿಂದ ಪೆಡಲ್ ಮಾಡಲು
ನಿರ್ಧರಿಸಿದ.ತನ್ನ ಹಳ್ಳಿಯಿಂದ ಬೆಂಗಳೂರಿಗೆ ತಲುಪಲು 130-140 ಕಿ.ಮೀ.ಗೆ
ಪೆಡಲ್ ಮಾಡಿ ನಗರದ ನಿಮ್ಹಾನ್ಸ್‌ನಿಂದ ಔಷಧಿ ಸಂಗ್ರಹಿಸಿದರು.
ಮೈಸೂರಿನ ಟಿ ನರಸೀಪುರ ತಾಲ್ಲೂಕಿನ ಗಣಿಗಾನ ಕೊಪ್ಪಲು ಗ್ರಾಮದ ಆನಂದ್,ಒಬ್ಬ ದಿನಗೂಲಿ ಕೃಷಿಭೂಮಿ ಕಾರ್ಮಿಕನಾಗಿ, ಹಾಗೂ ಮರಗೆಲಸ ಮಾಡಿ ಜೀವನ
ಸಾಗಿಸುತ್ತಿದ್ದ ಆದರೆ, ಜಿಲ್ಲೆಯಲ್ಲಿ COVID-19 ಎರಡನೇ ಅಲೆಯ ಮಧ್ಯೆ ಲಾಕ್‌ಡೌನ್ ಘೋಷಣೆಯು ಅವರ
ಕೆಲಸವನ್ನು ಕಿತ್ತುಕೊಂಡಿದ್ದು,
ಮಾತ್ರವಲ್ಲದೆ ಬೌದ್ಧಿಕ ಅಂಗವೈಕಲ್ಯದಿಂದ ಬಳಲುತ್ತಿರುವ, 10 ವರ್ಷದ ಮಗ ಭಿರೇಶ್ ಗೆ ಔಷಧಿಯು
ಮುಗಿಯುತ್ತಾ ಬಂದಿದ್ದು, ಮುಂದೆನು, ಎಂಬ
ಆತಂಕ, ಭಯ ಶುರುವಾಯಿತು.
ಮಗ ಆರು ತಿಂಗಳ ಮಗುವಾಗಿದ್ದಾಗ ಈ ಸಮಸ್ಯೆಯನ್ನು
ಗುರುತಿಸಲಾಯಿತು ಮತ್ತು ಅಂದಿನಿಂದ ಕಳೆದ 10 ವರ್ಷಗಳಲ್ಲಿ, ಅವನಿಗೆ ಅಗತ್ಯವಾದ ಔಷಧಿಯನ್ನು ಕೊಡುವುದು ಎಂದಿಗೂ
ತಪ್ಪಿಸಲಿಲ್ಲ. ಆದರೆ ಔಷಧಿಯನ್ನು ಬೆಂಗಳೂರಿನ ನಿಮ್ಹಾನ್ಸ್‌ನಿಂದ ಮಾತ್ರ
ಉಚಿತವಾಗಿ ಪಡೆಯುತ್ತಿದ್ದು, ಪ್ರತಿ ಎರಡು
ತಿಂಗಳಿಗೊಮ್ಮೆ ಅಲ್ಲಿಂದ ತಂದು ಮಗನ ಆರೈಕೆ ಮಾಡುತ್ತಿದ್ದೆವು.
“ಮಾತ್ರೆಗಳು ಬುಧವಾರದ ವೇಳೆಗೆ ಖಾಲಿಯಾಗುತ್ತದ್ದವು, ಹಾಗಾಗಿ ನಾನು
ಭಾನುವಾರ ಪ್ರಯಾಣವನ್ನು ಪ್ರಾಂಭಿಸಿ, ರಾತ್ರಿಯ
ಹೊತ್ತಿಗೆ ಅಲ್ಲಿಗೆ ತಲುಪಿ, ಮರುದಿನ
ಆಸ್ಪತ್ರೆಯಿಂದ ಟ್ಯಾಬ್ಲೆಟ್ ಸಂಗ್ರಹಿಸಿ ಮಂಗಳವಾರದ ವೇಳೆಗೆ ಮರಳಿದೆ ”ಎಂದು ಆನಂದ್ ಹೇಳುತ್ತಾರೆ.
ಅವರ ಪ್ರಯಾಣವು ಸುಲಭವಾಗಿರಲಿಲ್ಲ, ಸುಡುವ ಸೂರ್ಯನ ಬಿಸಿಲಿನಲ್ಲಿ ಪೆಡಲ್ ಮಾಡಿದ್ದಲ್ಲದೆ, ದಾರಿಯಲ್ಲಿ ಭಾರೀ ಮಳೆಯಿಂದಾಗಿ ಸಂಪೂರ್ಣವಾಗಿ
ತೇವಗೊಂಡಿದ್ದರೂ. ಜಿಲ್ಲೆಯ ಗಡಿ ದಾಟಿದಾಗಲೆಲ್ಲಾ ಪೊಲೀಸರನ್ನು
ಎದುರಿಸಬೇಕಾಗಿತ್ತು ಮತ್ತು ಅವನಿಗೆ ಆಹಾರ ಖರೀದಿಸಲು ಕೈಯಲ್ಲಿ ಹಣವಿಲ್ಲದೆ ಹಸಿವಿನಿಂದ
ಬಳಲುತ್ತಿದ್ದರು.
ಮಗನ ಮೇಲಿನ ಅಕ್ಕರೆ, ಪ್ರೀತಿ, ಮಮತೆ ಇಂತಹ ಸನ್ನಿವೇಶದಲ್ಲೂ
ತಂದೆಯ ಕಾರ್ಯವೈಖರಿ ಎಲ್ಲರ ಹುಬ್ಬರವಂತೆ ಮಾಡಿದೆ.
Comments
Post a Comment