Tuesday, 6 December 2022

Jangi Kushti: ಭಾಲ್ಕಿ -ದೂರದೂರುಗಳಿಂದ ಬಂದಿದ್ದ ಕುಸ್ತಿ ಪಟುಗಳು ಖುಷಿ ಖುಷಿಯಿಂದಲೇ ಕುಸ್ತಿಯಾಡಿ ಬಹುಮಾನ ಪಡೆದರು!

Jangi Kushti annual sports held in Taranalli village in Bhalki taluk Bidar

ಅದು ಬಹು ಹಿಂದಿನ ಕಾಲದಿಂದಲೂ ನಡೆದು ಬಂದಿರುವ ಕ್ರೀಡೆ. ಇಂದು ನೋಡಲು ಸಿಗುವುದು ಕೂಡಾ ತೀರಾ ಕಡಿಮೆ. ಆದರೆ ಈ ಜಾತ್ರೆಯಲ್ಲಿ ಪ್ರತಿ ವರ್ಷ ಈ ಆಟಕ್ಕೆ ರಾಜ್ಯ ಹೊರ ರಾಜ್ಯಗಳಿಂದ ಆಟಗಾರರನ್ನ ಕರೆಸಿ ಆಡಿಸಲಾಗುತ್ತದೆ. ನಿನ್ನೆ ಸೋಮವಾರವೂ ಕೂಡ ಈ ಕುಸ್ತಿ ಸ್ಪರ್ಧೆ (Jangi Kushti) ಜೋರಾಗಿಯೇ ನಡೆಯಿತು. ಹೇಗೆಲ್ಲಾ ಕುಸ್ತಿ ಪಟುಗಳು ತಮ್ಮ ಶಕ್ತಿ ಪ್ರದರ್ಶನ ಮಾಡಿದರು ಎಂಬುದರ ಒಂದು ಜಲಕ್ ಇಲ್ಲಿದೆ ನೋಡಿ.

ತಮ್ಮ ಸಾಮರ್ಥ್ಯಕ್ಕೆ ತಕ್ಕವರೊಂದಿಗೆ ಕೈ ಕೈ ಹಿಡಿದು ಕಾದಾಟಕ್ಕೆ ನಿಂತ ಪಟುಗಳು, ಅದನ್ನ ನೋಡಲು ಮುಗಿಬಿದ್ದಿರುವ ಜನರು. ಈ ದೃಶ್ಯ ಕಂಡು ಬಂದಿದ್ದು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ತರನಳ್ಳಿ ಗ್ರಾಮದಲ್ಲಿ (Bhalki taluk Bidar). ಕಳೆದ 5 ದಿನಗಳಿಂದ ಇಲ್ಲಿನ ರೇವಪ್ಪಯ್ಯ ಜಾತ್ರೆ ನಡೆಯುತ್ತಿದ್ದು ಕೊನೆಯ ದಿನವಾದ ಇಂದು ಕುಸ್ತಿ ಸ್ಪರ್ಧೆಯನ್ನ ಆಯೋಜಿಸಲಾಗಿತ್ತು.

ಪ್ರತಿ ವರ್ಷ ಇಲ್ಲಿ ಕುಸ್ತಿಯನ್ನ ನಡೆಸಲಾಗುತ್ತಿದ್ದು 101 ರೂಪಾಯಿಯಿಂದ ಹಿಡಿದು 5001 ರೂ. ವರೆಗೆ ಭಾಗವಹಿಸಿದ ಪಟುಗಳಿಗೆ ಹಣ ನೀಡಲಾಗುತ್ತದೆ. ಸುಮಾರು 100ಕ್ಕೂ ಹೆಚ್ಚು ಕುಸ್ತಿ ಪಟುಗಳು ಇಲ್ಲಿ ಭಾಗವಹಿಸಿದ್ದರು. ಒಂದು ಕಡೆ ಅತಿಯಾದ ಮಳೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿ ನಷ್ಟ ಅನುಭವಿಸಿದ್ದರು ಕೂಡಾ ನೂರಾರು ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದರು. ಇನ್ನು ದೂರದ ಊರುಗಳಿಂದ ಬಂದಿದ್ದ ಕುಸ್ತಿ ಪಟುಗಳು ಖುಷಿ ಖುಷಿಯಿಂದಲೇ ಕುಸ್ತಿಯಾಡಿ ಬಹುಮಾನವನ್ನ ಪಡೆದರು ಎನ್ನುತ್ತಾರೆ ಕುಸ್ತಿ ಪಟು ವಿಜಯ್ ಕುಮಾರ್.

ಪ್ರತಿ ವರ್ಷದಂತೆ ಈ ವರ್ಷ ಕೂಡ ಇಲ್ಲಿ ನೂರಾರು ಪಟುಗಳು ಬಂದಿದ್ದು ಅದರಲ್ಲಿ ಮಹರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ಕರ್ನಾಟಕದ ಕೆಲವು ಜಿಲ್ಲೆಗಳಿಂದ ಕುಸ್ತಿ ಆಡಲು ಪಟುಗಳು ಬಂದಿದ್ದು ತಮಗೆ ತಕ್ಕ ಸಾಮರ್ಥ್ಯ ಪಟುವನ್ನ ಆಯ್ಕೆ ಮಾಡಿಕೊಂಡು ಕುಸ್ತಿಗೆ ಇಳಿಯುತ್ತಾರೆ. ಇಲ್ಲಿ ಹಣ ನೀಡುತ್ತಾರೆ ಎಂಬುದಕ್ಕಿಂತ ಕುಸ್ತಿ ಆಡಿ ತಮ್ಮ ಸಾಮರ್ಥ್ಯ ತೊರಿಸುತ್ತಾರೆ.

ಫೈನಲ್ ಪಂದ್ಯ ಕೂಡ ಅಷ್ಟೇ ರೊಚಕತೆಯಿಂದ ಕೂಡಿತ್ತು. ಕೊನೆಯಲ್ಲಿ ಮಹಾರಾಷ್ಟ್ರದ ಪ್ರವೀಣ ನಂಬರ್ ಒನ್ ಪಟುವಾಗಿ ಹೊರ ಹೊಮ್ಮಿದರು. ಚಿಕ್ಕ ಮಕ್ಕಳಿಂದ ಹಿಡಿದು 40 ವರ್ಷ ವಯಸ್ಸಿನ ವರೆಗೂ ಯುವಕರು, ಪುರುಷರು ಇದರಲ್ಲಿ ಭಾಗವಹಿಸಿರುತ್ತಾರೆ. ದೂರದ ಊರುಗಳಿಂದ ಬರುವ ಪಟುಗಳಿಗೆ ಎಲ್ಲ ರೀತಿಯ ವ್ಯವಸ್ಥೆ ಕೂಡ ಇಲ್ಲಿ ಮಾಡಲಾಗಿರುತ್ತದೆ. ಜಾತಿ ಭೇದ ಮರೆತು ಹಿಂದಿನ ಕಾಲದ ಸಂಪ್ರದಾಯವನ್ನೇ ಉಳಿಸಿಕೊಂಡು ಬೆಳಸಿಕೊಂಡು ಹೋಗುವುದು ನಮ್ಮ ಜವಾಬ್ದಾರಿ ಎನ್ನುತ್ತಾರೆ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಬಾಬುರಾವ್.

ನಶಿಸಿ ಹೋಗುತ್ತಿರುವ ಇಂತಹ ಕ್ರೀಡೆಗಳು ಇನ್ನೂ ಹಳ್ಳಿಗಾಡಿನಲ್ಲಿ ಜೀವಂತವಾಗಿದೆ ಅನ್ನುವುದಕ್ಕೆ ಇದು ಕೂಡ ಸಾಕ್ಷಿ. ಇತ್ತ ಗ್ರಾಮಿಣ ಭಾಗದ ಯುವಕರು ತಮ್ಮ ನೆಚ್ಚಿನ ಕ್ರಿಡೆಗಳಲ್ಲಿ ಒಂದಾದ ಕುಸ್ತಿಗೂ ಇನ್ನೂ ಹೆಚ್ಚಿನ ಪ್ರೋತ್ಸಾಹ ಸಿಗಬೇಕಿದೆ. ಆಗ ಮಾತ್ರ ಇಂತಹ ಕ್ರೀಡೆಯನ್ನ ಉಳಿಸಿ, ಬೆಳೆಸಲು ಸಾಧ್ಯವಾಗುತ್ತದೆ. (ವರದಿ: ಸುರೇಶ್ ನಾಯಕ್, ಟಿವಿ 9, ಬೀದರ್)

Also Read: ಸಚಿವ ಆನಂದ ಸಿಂಗ್ ಆಯ್ತು ಈಗ ಆಪ್ತ ಸಹಾಯಕಿಯಿಂದಲೂ ಒತ್ತುವರಿ? ಎದುರು ಮನೆ ಆಸ್ತಿ ಕಬಳಿಕೆಗೆ ಮುಂದಾದ್ರಾ ಸಚಿವರ ಸಹಾಯಕಿ?



source https://tv9kannada.com/karnataka/bidar/jangi-kushti-annual-sports-held-in-taranalli-village-in-bhalki-taluk-bidar-sas-au4-481707.html

No comments:

Post a Comment