Sunday, 4 December 2022

IND vs BAN: ಚಿರತೆ ಜಿಗಿತ..! ಲಿಟನ್ ದಾಸ್ ಅದ್ಭುತ ಫೀಲ್ಡಿಂಗ್​ಗೆ ಕೊಹ್ಲಿಯೇ ಶಾಕ್..! ವಿಡಿಯೋ ನೋಡಿ

ಮಿರ್‌ಪುರದಲ್ಲಿ ನಡೆಯುತ್ತಿರುವ ಭಾರತ-ಬಾಂಗ್ಲಾ (India Vs Bangladesh) ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶದ ನಾಯಕ ಲಿಟನ್ ದಾಸ್‌ಗೆ (Liton Das) ಪಂದ್ಯದ ಫಲಿತಾಂಶಕ್ಕೂ ಮುನ್ನವೇ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಾರಣ ಅವರು ಹಿಡಿದ ಆ ಅದ್ಭುತ ಕ್ಯಾಚ್, ಗಾಳಿಯನ್ನು ಸೀಳುತ್ತಾ ಚಿರತೆಯಂತೆ ಎಗರಿ ಎರಡೂ ಕೈಗಳನ್ನು ಮುಂದಕ್ಕೆ ಚಾಚಿ, ಲಿಟನ್ ಹಿಡಿದ ಕ್ಯಾಚ್​ಗೆ ಸ್ವತಃ ಕೊಹ್ಲಿಯೇ ಬೆರಗಾದರು. ಅಲ್ಲದೆ ಅವರು ತೆಗೆದುಕೊಂಡ ಕ್ಯಾಚ್ ವಿರಾಟ್ ಕೊಹ್ಲಿಯದ್ದು (Virat Kohli) ಎಂಬುದು ದೊಡ್ಡ ವಿಷಯ. ಬಾಂಗ್ಲಾದೇಶ ವಿರುದ್ಧ ಅದ್ಭುತ ದಾಖಲೆ ಹೊಂದಿರುವ ಕೊಹ್ಲಿ ವಿಕೆಟ್ ಪಡೆದ ಬಾಂಗ್ಲಾ ತಂಡ ಸಂತಸದ ಅಲೆಯಲಲ್ಲಿ ಮಿಂದೇದಿತು. ಹಾಗೆಯೇ ಅದ್ಭುತ ಕ್ಯಾಚ್​ಗೆ ಬಲಿಯಾದ ಕೊಹ್ಲಿ ಕೂಡ ಶಾಕ್​ನಲ್ಲಿಯೇ ಪೆವಿಲಿಯನ್​ಗೆ ಮರಳಿದರು.

ಅದ್ಭುತ ಶಾಟ್, ಅದ್ಭುತ ಕ್ಯಾಚ್

ಪಂದ್ಯದಲ್ಲಿ ಇದು ಶಕೀಬ್ ಅವರ ಮೊದಲ ಓವರ್ ಆಗಿತ್ತು. ಓವರ್‌ನ ನಾಲ್ಕನೇ ಎಸೆತವನ್ನು ವಿರಾಟ್ ಕೊಹ್ಲಿ ಶಾರ್ಟ್​ ಕವರ್ ಕಡೆ ಆಡಿದರು. ಕೊಹ್ಲಿಯ ಆ ಶಾಟ್ ಖಂಡಿತ ಬೌಂಡರಿ ಸೇರುತ್ತದೆ ಎಂದು ಎಲ್ಲರೂ ಭಾಚಿಸಿದ್ದರು. ಆದರೆ ಅಲ್ಲಿ ನಡದಿದ್ದೆ ಬೇರೆ ಕಥೆ. 30 ಯಾರ್ಡ್ ಸರ್ಕಲ್​ನಲ್ಲಿ ಫೀಲ್ಡಿಂಗ್​ ಮಾಡುತ್ತಿದ್ದ ಲಿಟನ್ ದಾಸ್ ಚಿರತೆಯಂತೆ ಎಗರಿ, ಚೆಂಡನ್ನು ಹಿಡಿದು ಯಾರೂ ನಿರೀಕ್ಷಿಸದ ಕೆಲಸ ಮಾಡಿದರು.

ಇದನ್ನೂ ಓದಿ: IND vs BAN: ಗಬ್ಬರ್ ವೃತ್ತಿಜೀವನಕ್ಕೆ ಕುತ್ತು..! ಬಾಂಗ್ಲಾ ಪ್ರವಾಸದಲ್ಲೂ ಸಿಂಗಲ್ ಡಿಜಿಟ್​ಗೆ ಸುಸ್ತಾದ ಧವನ್

ಬಾಂಗ್ಲಾ ತಂಡಕ್ಕೆ ಗೆದ್ದಷ್ಟೇ ಖುಷಿ

ಲಿಟನ್ ದಾಸ್ ಅವರ ಈ ಕ್ಯಾಚ್ ನೋಡಿದ ರೋಹಿತ್ ಶರ್ಮಾ ಕೂಡ ಆಶ್ಚರ್ಯಚಕಿತರಾದರು. ಅಲ್ಲದೆ ಬಾಂಗ್ಲಾದೇಶದ ಆಟಗಾರರ ಸಂಭ್ರಮವನ್ನು ನೋಡಿದರೆ ಅವರಿಗೆ ಗೆಲುವಿನ ಕೀಲಿಕೈ ಸಿಕ್ಕಿತೇನೋ ಎನಿಸ ತೊಡಗಿತು. ಈ ಪಂದ್ಯದಲ್ಲಿ ಎಂದಿನಂತೆ ನಿದಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿದ ಕೊಹ್ಲಿ ರೋಹಿತ್ ಜೊತೆಗೂಡಿ ಉತ್ತಮ ಇನ್ನಿಂಗ್ಸ್ ಕಟ್ಟುವ ಸೂಚನೆ ನೀಡಿದ್ದರು. ಆದರೆ ಈ ಇಬ್ಬರಿಗೂ ಶಕೀಬ್ ಒಂದೇ ಓವರ್​ನಲ್ಲಿ ಪೆವಿಲಿಯನ್ ಹಾದಿ ತೋರಿಸಿದರು. ಈ ಓವರ್​ನ ಎರಡನೇ ಎಸೆತದಲ್ಲಿ ನಾಯಕ ರೋಹಿತ್ ಬೌಲ್ಡ್ ಆದರೆ. 4ನೇ ಎಸೆತದಲ್ಲಿ ವಿರಾಟ್ ಕೊಹ್ಲಿ ಅದ್ಭುತ ಫೀಲ್ಡಿಂಗ್​ಗೆ ಬಲಿಯಾದರು.

ಧವನ್‌ ಕೂಡ ವಿಫಲ

ರೋಹಿತ್ ಹಾಗೂ ಕೊಹ್ಲಿ ಹೊರತುಪಡಿಸಿ ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಧವನ್ ಕೂಡ ಈ ಪಂದ್ಯದಲ್ಲಿ ಬಿಗ್ ಇನ್ನಿಂಗ್ಸ್ ಆಡುವಲ್ಲಿ ವಿಫಲರಾದರು. ನ್ಯೂಜಿಲೆಂಡ್ ಸರಣಿಯಲ್ಲೂ ರನ್ ಗಳಿಸುವಲ್ಲಿ ವಿಫಲರಾಗಿದ್ದ ಧವನ್ ಬಾಂಗ್ಲಾ ವಿರುದ್ಧವೂ ಹೇಳಿಕೊಳ್ಳುವಂತಹ ಆಟ ಆಡಲಿಲ್ಲ. ಬಾಂಗ್ಲಾ ಸ್ಪಿನ್ನರ್, ಮೀರಜ್ ಎಸೆದ ಎರಡನೇ ಓವರ್​ನ ಎರಡನೇ ಎಸೆತದಲ್ಲಿ ಧವನ್ ರಿವರ್ಸ್ ಸ್ವೀಪ್ ಮಾಡಲು ಪ್ರಯತ್ನಿಸಿದರು, ಆದರೆ ಶಾಟ್ ಆಡುವಲ್ಲಿ ವಿಫಲರಾದರು. ಧವನ್ ಎದೆಗೆ ಬಡಿದ ಚೆಂಡು ನಂತರ ಅವರ ಕೈ ಸವರಿ ಸೀದಾ ಸ್ಟಂಪ್‌ಗೆ ಬಡಿಯಿತು. ಹೀಗಾಗಿ ಧವನ್ ಅವರ ಕಳಪೆ ಬ್ಯಾಟಿಂಗ್​ನಿಂದ ಅಭಿಮಾನಿಗಳು ಕೂಡ ನಿರಾಸೆಗೊಂಡಿದ್ದು, ಅವರನ್ನು ತಂಡದಿಂದ ಕೈಬಿಡುವಂತೆ ಒತ್ತಾಯಿಸಲು ಆರಂಭಿಸಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



source https://tv9kannada.com/sports/cricket-news/bangladesh-captain-litton-das-takes-a-magnificent-catch-shakib-al-hasan-gets-virat-kohli-wicket-psr-au14-480613.html

No comments:

Post a Comment