ಟೀಂ ಇಂಡಿಯಾ ವಿರುದ್ಧ ಅಮೋಘ ಪ್ರದರ್ಶನ ನೀಡಿ ಏಕದಿನ ಸರಣಿ ಗೆದ್ದಿದ್ದ ಬಾಂಗ್ಲಾದೇಶ (India and Bangladesh) ತಂಡ ಟೆಸ್ಟ್ ಸರಣಿಯಲ್ಲಿ ಮುಗ್ಗರಿಸಿದೆ. ಚಟ್ಟೋಗ್ರಾಮ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶ ಎರಡನೇ ದಿನದಾಟದ ಅಂತ್ಯಕ್ಕೆ ಕೇವಲ 133 ರನ್‌ಗಳಿಗೆ ತನ್ನ 8 ವಿಕೆಟ್‌ಗಳನ್ನು ಕಳೆದುಕೊಂಡಿದೆ. ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ಗಳಿಗೆ ಚಳ್ಳೆ ಹಣ್ಣು ತಿನ್ನಿಸಿದ ಸಿರಾಜ್ (Mohammed Siraj) ಹಾಗೂ ಕುಲ್ದೀಪ್ ಯಾದವ್ ಭಾರತಕ್ಕೆ ಇನ್ನಿಂಗ್ಸ್ ಮುನ್ನಡೆ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಬಾಂಗ್ಲಾ ಪರ ಉರುಳಿರುವ 8 ವಿಕೆಟ್ಗಳಲ್ಲಿ ಕುಲ್ದೀಪ್ ಯಾದವ್ (Kuldeep Yadav) 10 ಓವರ್‌ಗಳಲ್ಲಿ 33 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಸಿರಾಜ್ ಕೂಡ 3 ವಿಕೆಟ್ ಪಡೆದಿದ್ದಾರೆ. ಇನ್ನುಳಿದಂತೆ ಒಂದು ವಿಕೆಟ್ ಉಮೇಶ್ ಯಾದವ್ ಪಾಲಾಯಿತು.
ಭಾರತದ ಬೌಲಿಂಗ್ ದಾಳಿಗೆ ನಲುಗಿದ ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ಹೊತ್ತು ವಿಕೆಟ್‌ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ತಂಡದ ಪರ ಇದುವರೆಗೆ ಮುಶ್ಫಿಕರ್ ರಹೀಮ್ ಗರಿಷ್ಠ 28 ರನ್ ಗಳಿಸಿದರೆ, ಲಿಟ್ಟನ್ ದಾಸ್ 24 ರನ್ ಗಳಿಸಿದರು. ಝಾಕಿರ್ ಹಸನ್ 20 ರನ್ಗಳ ಇನಿಂಗ್ಸ್ ಆಡಿದರು. ಇನ್ನುಳಿದಂತೆ 9ನೇ ವಿಕೆಟ್ಗೆ ಜೊತೆಯಾಗಿರುವ ಮೆಹದಿ ಹಸನ್ ಹಾಗೂ ಇಬಾದತ್ ಹುಸೇನ್ 3ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ. ಹಸನ್ 16 ರನ್ ಗಳಿಸಿದರೆ, ಇಬಾದತ್ 13 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.
2. ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ಗಳ ಪೆವಲಿಯನ್ ಪರೇಡ್
ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ನೀಡಿದ 404 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಬಾಂಗ್ಲಾದೇಶದ ಆರಂಭ ಅತ್ಯಂತ ಕಳಪೆಯಾಗಿತ್ತು. ನಜ್ಮುಲ್ ಹಸನ್ ಶಾಂಟೊ ಮೊದಲ ಎಸೆತದಲ್ಲೇ ಔಟಾದರು. ಸಿರಾಜ್ ಅವರ ಉತ್ತಮ ಎಸೆತದಲ್ಲಿ ಶಾಂಟೊ, ಪಂತ್ಗೆ ಕ್ಯಾಚ್ ನೀಡಿದರು. ಇದಾದ ಬಳಿಕ ಉಮೇಶ್ ಯಾದವ್ ಯಾಸಿರ್ ಅಲಿಯನ್ನು ಬೌಲ್ಡ್ ಮಾಡಿದರು. ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ಗಳಿಗೆ ತೊಂದರೆ ನೀಡುವುದನ್ನು ಮುಂದುವರೆಸಿದ ಸಿರಾಜ್, ಲಿಟನ್ ದಾಸ್ ಮತ್ತು ಜಾಕಿರ್ ಹಸನ್ ಅವರನ್ನು ಔಟ್ ಮಾಡುವ ಮೂಲಕ ಎದುರಾಳಿಯನ್ನು ಬ್ಯಾಕ್‌ಫೂಟ್‌ಗೆ ತಳ್ಳಿದರು.
ಸಿರಾಜ್ ಜೊತೆ ಲಿಟನ್ ಕಿರಿಕ್; ಮುಂದಿನ ಎಸೆತದಲ್ಲೇ ಔಟ್! ಕಿಂಗ್ ಕೊಹ್ಲಿ ರಿಯಾಕ್ಷನ್ ಹೇಗಿತ್ತು ಗೊತ್ತಾ? ವಿಡಿಯೋ
3. ಕುಲ್ದೀಪ್ಗೆ 4 ವಿಕೆಟ್
ಸಿರಾಜ್ ಜೊತೆಗೆ ವಿಕೆಟ್ ತೆಗೆಯುವ ಜವಬ್ದಾರಿವಹಿಸಿಕೊಂಡ ಕುಲ್ದೀಪ್ ಬಾಂಗ್ಲಾ ತಂಡದ ಮಧ್ಯಮ ಕ್ರಮಾಂಕದ ಬೆನ್ನೇಲುಬು ಮುರಿದರು. ಮೊದಲು ಕುಲ್ದೀಪ್, ನಾಯಕ ಶಕೀಬ್ರನ್ನು 3 ರನ್‌ಗಳಿಗೆ ಬಲಿ ಪಡೆದರೆ, ನಂತರ ನುರುಲ್ ಹಸನ್ ವಿಕೆಟ್ ಕಬಳಿಸಿದರು. ಇಲ್ಲಿ ಈ ವಿಕೆಟ್ನ ಶ್ರೇಯ ಗಿಲ್ಗೆ ಸಲ್ಲಬೇಕು. ಕುಲ್ದೀಪ್ ಬೌಲಿಂಗ್ನಲ್ಲಿ ಶಾಟ್ ಲೆಗ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಗಿಲ್, ಹಸನ್ ಆಡಿದ ಬಾಲನ್ನು ಸೆಕೆಂಡ್ಗೂ ಕಡಿಮೆ ಸಮಯದಲ್ಲಿ ಕ್ಯಾಚ್ ಮಾಡಿದರು. 3ನೇ ವಿಕೆಟ್ ರೂಪದಲ್ಲಿ ಮುಶ್ಫಿಕರ್ ರಹೀಮ್ ವಿಕೆಟ್ ಕಬಳಿಸಿದ ಕುಲ್ದೀಪ್, ನಾಲ್ಕನೇ ವಿಕೆಟ್ ಆಗಿ ಇಸ್ಲಾಂರನ್ನು ಬಲಿ ಹಾಕಿದರು.
4. 404 ರನ್‌ಗಳಿಗೆ ಭಾರತ ಆಲೌಟ್
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 404 ರನ್ ಗಳಿಸಿದೆ. ಭಾರತದ ಪರ ಚೇತೇಶ್ವರ ಪೂಜಾರ 90 ಮತ್ತು ಶ್ರೇಯಸ್ ಅಯ್ಯರ್ 86 ರನ್ ಗಳಿಸಿದರೆ, ಅಶ್ವಿನ್ ಮತ್ತು ಕುಲದೀಪ್ ಯಾದವ್ ಎರಡನೇ ದಿನ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಅಶ್ವಿನ್ 58 ರನ್ ಗಳಿಸಿ ಅದ್ಭುತ ಅರ್ಧಶತಕ ಗಳಿಸಿದರೆ, ಕುಲದೀಪ್ ಯಾದವ್ 40 ರನ್ಗಳಿಸಿ ಇನ್ನಿಂಗ್ಸ್ ಮುಗಿಸಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
source https://tv9kannada.com/sports/cricket-news/india-vs-bangladesh-1st-test-match-day-2-report-ind-vs-ban-today-test-match-full-scorecard-in-kannada-psr-au14-486172.html
No comments:
Post a Comment