Tuesday, 4 October 2022

Happy Birthday Rishabh Pant: ರಿಷಭ್ ಪಂತ್​ಗೆ ಹುಟ್ಟುಹಬ್ಬದ ಸಂಭ್ರಮ: 25ನೇ ವರ್ಷಕ್ಕೆ ಕಾಲಿಟ್ಟ ಯಂಗ್ ವಿಕೆಟ್ ಕೀಪರ್​ನ ದಾಖಲೆಗಳು ನೋಡಿ

Rishabh Pant

ಟೀಮ್ ಇಂಡಿಯಾದ (Team India) ಯುವ ವಿಕೆಟ್ ಕೀಪರ್, ಬ್ಯಾಟರ್ ರಿಷಭ್ ಪಂತ್ 25ನೇ ವಸಂತಕ್ಕೆ ಕಾಲಿರಿಸಿದ್ದಾರೆ (Risbah Pant Birthday). ಡೆಲ್ಲಿ ಕ್ರಿಕೆಟಿಗನಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಆಡುತ್ತಿರುವ ಪಂತ್ ಐಸಿಸಿ ಟಿ20 ವಿಶ್ವಕಪ್ ಮಹಾಟೂರ್ನಿಗೆ ಸಜ್ಜಾಗುತ್ತಿದ್ದಾರೆ. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್​​ನಲ್ಲಿ (Test Cricket) ಶತಕ ಸಿಡಿಸುವ ಮೂಲಕ ಭರ್ಜರಿಯಾಗಿಯೇ ಟೀಮ್ ಇಂಡಿಯಾಕ್ಕೆ ಎಂಟ್ರಿ ಕೊಟ್ಟಿದ್ದ ಪಂತ್ ಇಂದು ತಂಡದ ಪ್ರಮುಖ ಸದಸ್ಯನಾಗಿ ಹೊರಹೊಮ್ಮಿದ್ದಾರೆ.

ಇದುವರೆಗೂ 31 ಟೆಸ್ಟ್ ಪಂದ್ಯಗಳನ್ನಾಡಿರುವ ಪಂತ್, 43.32ರ ಸರಾಸರಿಯಲ್ಲಿ 2123 ರನ್ ಬಾರಿಸಿದ್ದಾರೆ. ಇದರಲ್ಲಿ ಐದು ಶತಕ ಹಾಗೂ ಹತ್ತು ಅರ್ಧಶತಕವೂ ಸೇರಿದೆ. ಇನ್ನು ವಿಕೆಟ್ ಕೀಪಿಂಗ್​ನಲ್ಲೂ ಕಮಾಲ್ ಮಾಡಿರುವ ಪಂತ್ 111 ಕ್ಯಾಚ್ ಹಾಗೂ 11 ಸ್ಟಂಪಿಂಗ್ ಕೂಡ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇದರ ಜತೆಗೆ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನೆಲದಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ವಿಕೆಟ್ ಕೀಪರ್ ಬ್ಯಾಟರ್ ಎನ್ನುವ ಗೌರವಕ್ಕೂ ಪಂತ್ ಪಾತ್ರರಾಗಿದ್ದಾರೆ.  ಪಂತ್ ಏಕದಿನ ಕ್ರಿಕೆಟ್​​ನಲ್ಲಿ 27 ಪಂದ್ಯಗಳಿಂದ 840 ರನ್ ಬಾರಿಸಿದ್ದರೆ, ಟಿ20 ಕ್ರಿಕೆಟ್​​ನಲ್ಲಿ 61 ಪಂದ್ಯಗಳನ್ನಾಡಿ 934 ರನ್ ಗಳಿಸಿದ್ದಾರೆ.

 

ಹುಟ್ಟುಹಬ್ಬದ ಪ್ರಯುಕ್ತ ರಿಷಭ್ ಪಂತ್ ಅವರ ಮೂರು ಅತ್ಯುತ್ತಮ ದಾಖಲೆಗಳನ್ನು ನೋಡುವುದಾದರೆ…

ಅತಿವೇಗವಾಗಿ 1,000 ರನ್ ಬಾರಿಸಿದ ಭಾರತದ ವಿಕೆಟ್ ಕೀಪರ್ ರಿಷಭ್ ಪಂತ್ ಆಗಿದ್ದಾರೆ. 2020-21ರ ಬಾರ್ಡರ್ ಗವಾಸ್ಕರ್ ಟ್ರೋಫಿಯ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಐದನೇ ಟೆಸ್ಟ್​ ಪಂದ್ಯದಲ್ಲಿ ಪಂತ್ ಅವರು ಧೋನಿಯ ದಾಖಲೆಯನ್ನು ಪುಡಿ ಮಾಡಿ ಈ ಸಾಧನೆ ಗೈದರು. ಕೇವಲ 27 ಇನ್ನಿಂಗ್ಸ್​ನಲ್ಲಿ ಪಂತ್ ಈ ದಾಖಲೆ ಮಾಡಿದ್ದಾರೆ. ಧೋನಿ 1000 ರನ್ ಪೂರೈಸಲು 32 ಟೆಸ್ಟ್ ಇನ್ನಿಂಗ್ಸ್  ತೆಗೆದುಕೊಂಡಿದ್ದರು.

ಇನ್ನೂ ಸಿಕ್ಸ್​ ಸಿಡಿಸುವ ಮೂಲಕ ತನ್ನ ಟೆಸ್ಟ್​ ಕ್ರಿಕೆಟ್ ಕೆರೆಯರ್​ ಅನ್ನು ಪ್ರಾರಂಭಿಸಿದ ಮೊದಲ ಭಾರತೀಯ ಬ್ಯಾಟರ್ ರಿಷಭ್ ಪಂತ್ ಆಗಿದ್ದಾರೆ. 2018 ರಲ್ಲಿ ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಪಂತ್ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಲೆಗ್ ಸ್ಪಿನ್ನರ್ ಆದಿಲ್ ರಶೀದ್ ಅವರ ಬೌಲಿಂಗ್​ನಲ್ಲಿ ಪಂತ್ ತಾನು ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸ್​ಗೆ ಅಟ್ಟಿದ್ದರು.

ಒಂದು ಪಂದ್ಯದಲ್ಲಿ ವಿಕೆಟ್ ಹಿಂಭಾಗ ನಿಂತು ಅತಿ ಹೆಚ್ಚು ಆಟಗಾರರನ್ನು ಔಟ್ ಮಾಡಿದ ವಿಕೆಟ್ ಕೀಪರ್​ಗಳ ಪೈಕಿ ಪಂತ್ ಮೂರನೇಯವರಾಗಿದ್ದಾರೆ. 2018ರ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಪಂತ್ 11 ಆಟಗಾರರನ್ನು ವಿಕೆಟ್ ಕೀಪರ್ ಆಗಿ ಔಟ್ ಮಾಡಿದ್ದರು.



source https://tv9kannada.com/sports/cricket-news/rishabh-pant-birthday-rishabh-pant-turned-25-on-october-4-a-look-at-3-incredible-records-vb-au48-450394.html

No comments:

Post a Comment