Tuesday 17 August 2021

ಹೊಳೆಯುವ ಚರ್ಮಕ್ಕಾಗಿ ನಿತ್ಯ ಬಳಸಿ ಶುಂಠಿ ನೀರು.

 ಭಾರತೀಯ ಪಾಕಪದ್ಧತಿಯಲ್ಲಿ ಶುಂಠಿಗೆ ಮಹತ್ವದ ಸ್ಥಾನವಿದೆ. ಆರೋಗ್ಯಕ್ಕೆ ಉತ್ತಮ ಎಂದು ಹಲವು ಆಹಾರಗಳಲ್ಲಿ ಶುಂಠಿಯನ್ನು ಬಳಸಲಾಗುತ್ತದೆ. ಬಹುತೇಕ ಜನರಿಗೆ ಶುಂಠಿಯಿಂದ ತಯಾರಿಸಿದ ಚಹಾ ಎಂದರೆ ಪ್ರೀತಿ. ಶುಂಠಿ ಆಹಾರಕ್ಕೆ ಮಾತ್ರವಲ್ಲದೆ ಚರ್ಮಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಹೊಳೆಯುವ ಚರ್ಮಕ್ಕಾಗಿ ಶುಂಠಿ ನೀರು ಬಹಳ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.

ಹೊಳೆಯುವ ಚರ್ಮವನ್ನು ಪಡೆಯಲು ಮಹಿಳೆಯರು ಅನೇಕ ಮನೆಮದ್ದುಗಳನ್ನು ಪ್ರಯತ್ನಿಸುತ್ತಾರೆ. ನೀವೂ ಕೂಡ ಅಂತಹವರಲ್ಲಿ ಒಬ್ಬರಾಗಿದ್ದರೆ ಶುಂಠಿ ನೀರು ನಿಮಗೆ ವರದಾನವಾಗಲಿದೆ. ಶುಂಠಿಯ ಈ ಪರಿಹಾರದಿಂದ ನೀವು ಸುಲಭವಾಗಿ ಹೊಳೆಯುವ ಚರ್ಮವನ್ನು ಪಡೆಯಬಹುದು. ನಿಮ್ಮ ಚರ್ಮಕ್ಕೆ ಮತ್ತು ಆರೋಗ್ಯಕ್ಕೆ ತುಂಬಾ ಉತ್ತಮವಾದ ಶುಂಠಿಯ ಪಾನೀಯ ಅಥವಾ ಶುಂಠಿ ನೀರಿನ  ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ. ಹೊಳೆಯುವ ಚರ್ಮಕ್ಕಾಗಿ ಶುಂಠಿ ನೀರನ್ನು ಹೇಗೆ ಬಳಸುವುದು ಎಂದು ತಿಳಿಯೋಣ-

ಶುಂಠಿ ಪಾನೀಯವನ್ನು ಹೇಗೆ ತಯಾರಿಸುವುದು?

- ಶುಂಠಿಯನ್ನು ತೆಗೆದುಕೊಂಡು ಅದನ್ನು ಸ್ವಚ್ಛಗೊಳಿಸಿ.

- ಬಳಿಕ ಶುಂಠಿ ಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ.

- ಒಂದು ಲೋಟ ನೀರು ಹಾಗೂ ಶುಂಠಿಯನ್ನು ಒಂದು ಪಾತ್ರೆಯಲ್ಲಿ ಹಾಕಿ ಅದನ್ನು ಕಡಿಮೆ ಉರಿಯಲ್ಲಿ ಕಾಯಿಸಿ

- 10 ನಿಮಿಷಗಳ ನಂತರ ನೀರನ್ನು ಸೋಸಿ. ಬಳಿಕ ಇದರೊಂದಿಗೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಕುಡಿಯಬಹುದು.

ಶುಂಠಿ ನೀರು ಕುಡಿಯುವುದರಿಂದ ಆಗುವ ಲಾಭಗಳು :
ಈ ಶುಂಠಿ ಪಾನೀಯವನ್ನು ಪ್ರತಿದಿನ ಕುಡಿಯುವುದರಿಂದ ಮುಖವು ಹೊಳೆಯುತ್ತದೆ. ಈ ಪಾನೀಯವನ್ನು ದಿನಕ್ಕೆ ಎರಡು ಬಾರಿ ಮಾತ್ರ ಕುಡಿಯಿರಿ. ಆದರೆ ಬೇಸಿಗೆಯಲ್ಲಿ ಈ ಪಾನೀಯವನ್ನು ಹೆಚ್ಚು ಸೇವಿಸುವುದು ಸೂಕ್ತವಲ್ಲ ಎಂಬುದನ್ನು ನೆನಪಿನಲ್ಲಿಡಿ. 
                               

 

No comments:

Post a Comment