Tuesday 17 August 2021

ಲಾರ್ಡ್ಸ್ ನಲ್ಲಿ ಲಾರ್ಡ್ ಗಳಾದ ಟೀಮ್ ಇಂಡಿಯಾ ಬೌಲರ್ ಗಳು, ಭಾರತಕ್ಕೆ ಭರ್ಜರಿ ಜಯ

 


ಲಾರ್ಡ್ಸ್ : ಭಾರತೀಯ ಬೌಲರ್ ಗಳ ಅದ್ಬುತ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನದಿಂದಾಗಿ ಲಾರ್ಡ್ಸ ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಟೀಮ್ ಇಂಡಿಯಾ 151 ರನ್ ಗಳಿಂದ ಗೆದ್ದಿದೆ.ಆ ಮೂಲಕ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ ಈಗ 1-0 ಅಂತರದಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ.

ಭಾರತ ತಂಡವು ನೀಡಿದ 272 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ 51.5 ಓವರ್ ಗಳಲ್ಲಿ 120

ಭಾರತ ತಂಡವು ನೀಡಿದ 272 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ 51.5 ಓವರ್ ಗಳಲ್ಲಿ 120 ರನ್ ಗಳಿಗೆ ಆಲೌಟಾಯಿತು, ನಾಯಕ ಜೋ ರೂಟ್ 33 ರನ್ ಗಳಿಸಿದ್ದು ತಂಡದ ಪರ ಗರಿಷ್ಟ ಮೊತ್ತವಾಗಿತ್ತು. ಭಾರತದ ಪರ ಮಾರಕ ಬೌಲಿಂಗ್ ದಾಳಿ ಮಾಡಿದ ಮೊಹಮದ್ ಸಿರಾಜ್ ನಾಲ್ಕು, ಬುಮ್ರಾ ಮೂರು ಹಾಗೂ ಇಶಾಂತ್ ಶರ್ಮಾ ಎರಡು ವಿಕೆಟ್ ಗಳನ್ನು ಕಬಳಿಸುವ ಮೂಲಕ ಇಂಗ್ಲೆಂಡ್ ತಂಡವನ್ನು ಕೇವಲ 120 ರನ್ ಗಳಿಗೆ ಆಲೌಟ್ ಮಾಡುವ ಮೂಲಕ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.

ಭಾರತವು ಮಧ್ಯಾಹ್ನದ ಭೋಜನದ ನಂತರ 298-8 ಕ್ಕೆ ಡಿಕ್ಲೇರ್ ಮಾಡಿಕೊಂಡಿತು.ಆ ಮೂಲಕ ಇಂಗ್ಲೆಂಡ್ ಗೆ 60 ಓವರ್ ಗಳಲ್ಲಿ 272 ರನ್ ಗೆಲುವಿಗೆ ಗುರಿ ನೀಡಿತು.ಭಾರತದ ಪರವಾಗಿ ರಹಾನೆ 61 ರನ್ ಗಳಿಸಿ ತಂಡಕ್ಕೆ ನೆರವಾದರು.ಇದಾದ ನಂತರ ಕೊನೆಯಲ್ಲಿ ಮೊಹಮ್ಮದ್ ಶಮಿ ಅವರ 56 ಹಾಗೂ ಬುಮ್ರಾ ಅವರ 34 ರನ್ ಗಳು ತಂಡಕ್ಕೆ ವರವಾದವು.

 

No comments:

Post a Comment