ಇತ್ತೀಚೀನ ದಿನಗಳಲ್ಲಿ ಎಲ್ಲಾ
ವಸ್ತುಗಳಲ್ಲೂ ಕಲಬೆರಕೆಯ ಮಾತು ಕೇಳಿ ಬರುತ್ತಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಸಿಹಿತಿಂಡಿಗಳು, ತುಪ್ಪ ಅಥವಾ ಹಾಲು ಹೀಗೆ ಎಲ್ಲದರಲ್ಲೂ ಕಲಬೆರಕೆಯದ್ದೇ
ಮಾತು. ಹೀಗಿರುವಾಗ ಪನ್ನೀರ್ ನಲ್ಲೂ ಕಲಬೆರಕೆ ಇದೆಯೇ ಎಂದು ಕಂಡುಹಿಡಿಯಲು ಒಂದು ಉಪಾಯವಿದೆ.
ಪನೀರ್ ಅನ್ನು ಪ್ರತಿಯೊಂದು ಮನೆಯಲ್ಲೂ ಬಳಸಲಾಗುತ್ತದೆ. ಸಾಮಾನ್ಯವಾಗಿ
ಪನ್ನೀರ್ ಅನ್ನು ನೋಡಿ ಅದು ಅಸಲಿಯೋ ನಕಲಿಯೋ ಎಂದು ಹೇಳುವುದು ಸುಲಭವಲ್ಲ. ಆದರೆ ಅದನ್ನು
ಸೇವಿಸಿದ ನಂತರ, ಪನ್ನೀರ್ ಕಲಬೆರಕೆ ಎಂದು ಅದರ ರುಚಿಯಿಂದ ತಿಳಿದುಕೊಳ್ಳಬಹುದು. ಹಾಗಿದ್ದರೆ ಅಸಲಿ ಪನ್ನೀರ್
ಅನ್ನು ಕಂಡುಹಿಡಿಯುವ ಬಗೆ ಹೇಗೆ?
Ø ನಿಮ್ಮ ಕೈಯಲ್ಲಿ ಪನೀರ್ ತುಂಡನ್ನು ತೆಗೆದುಕೊಂಡು ಅದನ್ನು ಕೈಯಲ್ಲಿ ಉಜ್ಜಿ ನೋಡಿ. ಪನೀರ್ ಬೇರ್ಪಡಲು ಪ್ರಾರಂಭಿಸಿದರೆ, ಪನೀರ್ ನಕಲಿ ಎಂದರ್ಥ. ಏಕೆಂದರೆ ಅದರಲ್ಲಿರುವ ಕೆನೆರಹಿತ ಹಾಲಿನ ಪುಡಿ ಹೆಚ್ಚು ಒತ್ತಡವನ್ನು ಸಹಿಸುವುದಿಲ್ಲ. ಹಾಗಾಗಿ ಅದು ಬೇರ್ಪಡುತ್ತದೆ
Øಇನ್ನೊಂದು ವಿಧಾನ ಎಂದರೆ ಪನೀರ್ ಅನ್ನು ನೀರಿನಲ್ಲಿ ಕುದಿಸಿ ಅದನ್ನು ತಣ್ಣಗಾಗಲು ಬಿಡಿ. ಈಗ ಅದರ ಮೇಲೆ ಕೆಲವು ಹನಿ ಅಯೋಡಿನ್ ಟಿಂಚರ್ ಹಾಕಿ. ಹೀಗೆ ಮಾಡಿದ ನಂತರ ಪನ್ನಿರ್ ನೀಲಿ ಬಣ್ಣಕ್ಕೆ ತಿರುಗಿದರೆ, ಅದು ಕಲಬೆರಕೆ ಎಂದರ್ಥ.
Øಮೂರನೇ ವಿಧಾನ ಎಂದರೆ ಪನ್ನೀರ್ ಗಟ್ಟಿಯಾಗಿರುವುದಿಲ್ಲ. ಆದರೆ, ಕಲಬೆರಕೆ ಮಾಡಿದ ಪನೀರ್ ಬಿಗಿಯಾಗಿರುತ್ತದೆ ಮತ್ತು ತಿನ್ನುವಾಗ ರಬ್ಬರ್‌ನಂತೆ ಆಗುತ್ತದೆ.
ಪನೀರ್ ಖರೀದಿಸುವಾಗ ಮತ್ತು ತಿನ್ನುವಾಗ, ಅದರ ಗುಣಮಟ್ಟವನ್ನು
ಖಂಡಿತವಾಗಿ ಪರಿಗಣಿಸಿ.
No comments:
Post a Comment