Tuesday 6 July 2021

ಕಿಡ್ನಿಯ ಉತ್ತಮ ಆರೋಗ್ಯಕ್ಕಾಗಿ ಈ ವಸ್ತುಗಳಿಂದ ದೂರ ಇರಿ.

ಮೂತ್ರಪಿಂಡ ಅಂದರೆ ಕಿಡ್ನಿ ಮಾನವನ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಒಂದು ರೀತಿಯಲ್ಲಿ, ಮೂತ್ರಪಿಂಡವು ನಮ್ಮ ದೇಹದಲ್ಲಿ  ಫಿಲ್ಟರ್ ನಂತೆ ಕೆಲಸ ಮಾಡುತ್ತದೆ.

·         ಫಾಸ್ಟ್ ಫುಡ್ ಮೂತ್ರಪಿಂಡಕ್ಕೆ ಹಾನಿಕಾರಕವಾಗಿದೆ.

·         ಕೃತಕ ಸಿಹಿಯಿಂದ ಮೂತ್ರಪಿಂಡಕ್ಕೆ ಹಾನಿಯನ್ನುಂಟು ಮಾಡುತ್ತದೆ.

·         ಡೈರಿ ಉತ್ಪನ್ನಗಳ ಹೆಚ್ಚಿನ ಸೇವನೆಯು ಮೂತ್ರಪಿಂಡಕ್ಕೆ ಒಳ್ಳೆಯದಲ್ಲ.




ಮೂತ್ರಪಿಂಡ ಅಂದರೆ ಕಿಡ್ನಿ ಮಾನವನ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಒಂದು ರೀತಿಯಲ್ಲಿ, ಮೂತ್ರಪಿಂಡವು ನಮ್ಮ ದೇಹದಲ್ಲಿ  ಫಿಲ್ಟರ್ ನಂತೆ ಕೆಲಸ ಮಾಡುತ್ತದೆ. ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಾಗ ಮೂತ್ರಪಿಂಡದ ಆರೋಗ್ಯವನ್ನು ನೋಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ನಾವು ಸೇವಿಸುವ ಕೆಟ್ಟ ಆಹಾರವು ಮೂತ್ರಪಿಂಡದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದಾಗಿ ಕಿಡ್ನಿ ಸ್ಟೋನ್ ನಿಂದ ಹಿಡಿದು ಕಿಡ್ನಿ ಕ್ಯಾನ್ಸರ್ ವರೆಗಿನ ಕಾಯಿಲೆಗಳು ಉಂಟಾಗಬಹುದು. ಅನೇಕ ಬಾರಿ, ದೇಹಕ್ಕೆ ಹೆಚ್ಚಿನ ಪ್ರೋಟೀನ್ ತೆಗೆದುಕೊಳ್ಳುವ ಭರದಲ್ಲಿ ಅಂಥಹ ಆಹಾರವನ್ನು ಸೇವಿಸಿಬಿಡುತ್ತೇವೆ. ಮೂತ್ರಪಿಂಡಕ್ಕೆ ಅಪಾಯಕಾರಿಯಾಗಿರುವ 5 ಆಹಾರಗಳ ಬಗ್ಗೆ ತಿಳಿಯೋಣ..

 1. ಫಾಸ್ಟ್ ಫುಡ್ : 
ಫಾಸ್ಟ್ ಫುಡ್ ಮೂತ್ರಪಿಂಡಗಳಿಗೆ ಹಾನಿಕಾರಕವಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ಈ ಆಹಾರಗಳು ನಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಇದನ್ನು ರುಚಿಕರವಾಗಿಸಲು ಹೆಚ್ಚು ಮಸಾಲೆ ಮತ್ತು ಉಪ್ಪನ್ನು ಬಳಸಲಾಗುತ್ತದೆ. ಇದು ಮೂತ್ರಪಿಂಡಕ್ಕೆ ಒಳ್ಳೆಯದಲ್ಲ. ಫಾಸ್ಟ್ ಫುಡ್ ನ ಅತಿಯಾಗಿ ಸೇವನೆಯಿಂದ  ಮೂತ್ರಪಿಂಡಗಳಿಗೆ  ಹಾನಿ ಉಂಟಾಗುತ್ತದೆ. 

2. ಕೃತಕ ಸಿಹಿ : 
ಪ್ರಸ್ತುತ ಸಮಯದಲ್ಲಿ, ಅರ್ಟಿಫಿಸಿಯಲ್ ಸಿಹಿ ಹರಡುವಿಕೆ ಬಹಳಷ್ಟು ಹೆಚ್ಚಾಗಿದೆ. ಕೃತಕ ಸಿಹಿಕಾರಕವನ್ನು ಮಾರುಕಟ್ಟೆಯಲ್ಲಿ ಕಂಡುಬರುವ ಸಿಹಿತಿಂಡಿಗಳು, ಬಿಸ್ಕೆಟ್ ಗಳು ಮತ್ತು ಪಾನೀಯಗಳಲ್ಲಿ ಹೆಚ್ಚು ಬಳಸಲಾಗುತ್ತದೆ. ಇದು ತುಂಬಾ ಅಪಾಯಕಾರಿ. ಕೃತಕ ಸಿಹಿಕಾರಕಗಳು ಮೂತ್ರಪಿಂಡಕ್ಕೆ ಹಾನಿಯನ್ನುಂಟುಮಾಡುತ್ತವೆ.

3.ರೆಡ್ ಮೀಟ್ :
ಸಹಜವಾಗಿ, ಮಾಂಸದಲ್ಲಿ ಪ್ರೋಟೀನ್ ಪ್ರಮಾಣ ಹೆಚ್ಚಾಗಿ ಕಂಡುಬರುತ್ತದೆ. ನಮ್ಮ ದೇಹದ ಬೆಳವಣಿಗೆಗೆ ಪ್ರೋಟೀನ್ ಬಹಳ ಮುಖ್ಯ, ಆದರೆ ರೆಡ್ ಮೀಟ್ ಅನ್ನು ಸೇವಿಸಿದ ನಂತರ, ಅದರ ಚಯಾಪಚಯ ಕ್ರಿಯೆಯ ಪ್ರಕ್ರಿಯೆಯು ತುಂಬಾ ಕಷ್ಟಕರವಾಗಿರುತ್ತದೆ. ಇದು ಮೂತ್ರಪಿಂಡಗಳ ಮೇಲೆ ಹೆಚ್ಚಿನ ಒತ್ತಡವನ್ನುಂಟು ಮಾಡುತ್ತದೆ. ತಜ್ಞರ ಪ್ರಕಾರ, ಮಾಂಸದಿಂದ ಬರುವ ಪ್ರೋಟೀನ್ ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸುತ್ತದೆ.

4.ಡೈರಿ ಉತ್ಪನ್ನಗಳು: 
ಡೈರಿ ಉತ್ಪನ್ನಗಳ ಅತಿಯಾದ ಸೇವನೆಯು ಮೂತ್ರಪಿಂಡಕ್ಕೆ ಒಳ್ಳೆಯದಲ್ಲ. ಇದರಲ್ಲಿ ಕ್ಯಾಲ್ಸಿಯಂ ಅಧಿಕವಾಗಿದ್ದು, ಇದು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು. ಡೈರಿ ಉತ್ಪನ್ನಗಳಲ್ಲಿ ಪ್ರೋಟೀನ್ ಪ್ರಮಾಣವು ಕಂಡುಬರುತ್ತದೆ. ಇದು ಕೊಬ್ಬನ್ನು ಸಹ ಹೊಂದಿರುತ್ತದೆ . ಹಾಗಾಗಿ ಇವುಗಳು  ಮೂತ್ರಪಿಂಡಕ್ಕೆ ಹಾನಿಕಾರಕವಾಗಿದೆ.

5. ಬೇಳೆ :
ಬೇಳೆ ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ ಮತ್ತು ಅದನ್ನು ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ. ಆದರೆ ದ್ವಿದಳ ಧಾನ್ಯಗಳಲ್ಲಿಯೂ ಆಕ್ಸಲೇಟ್ ಕಂಡುಬರುತ್ತದೆ. ಇದನ್ನು ಅತಿಯಾಗಿ ತಿನ್ನುವುದು ಮೂತ್ರಪಿಂಡಕ್ಕೆ ಒಳ್ಳೆಯದಲ್ಲ. ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವ ಜನರು ದ್ವಿದಳ ಧಾನ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಾರದು. 


No comments:

Post a Comment