Tuesday 13 July 2021

ಮಾಂಸ ಆಹಾರಕ್ಕಿಂತ: ಸಸ್ಯಹಾರದಲ್ಲಿದೆ, ಆರೋಗ್ಯದ ಗುಟ್ಟು.

ಆರೋಗ್ಯದ ದೃಷ್ಟಿಯಿಂದ ಮಾಂಸಾಹಾರ ಒಳ್ಳೆಯದಲ್ಲ.  ಮಾಂಸಾಹಾರವನ್ನುತ್ಯಜಿಸಿ  ಸಸ್ಯಾಹಾರಿಗಳಾಗಲು ಬಯಸಿದರೆ, ಸಸ್ಯಾಹಾರದ   ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಲೇಬೇಕು.

·         ಸಸ್ಯಾಹಾರವನ್ನು ಸೇವಿಸುವುದರಿಂದ ತೂಕ ಇಳಿಕೆಯಾಗುತ್ತದೆ

·         ದೇಹದಲ್ಲಿ ಸಕ್ಕರೆ ಅಂಶವು ನಿಯಂತ್ರಣದಲ್ಲಿರುತ್ತದೆ

·         ಸಸ್ಯಾಹಾರಿಗಳಿಗೆ ಕ್ಯಾನ್ಸರಿನ ಅಪಾಯ ಕೂಡಾ ಕಡಿಮೆ




ಅನೇಕರು ಉತ್ತಮ ಆರೋಗ್ಯ, ಫಿಟ್ನೆಸ್ ಕಾಯ್ದುಕೊಳ್ಳಬೇಕು ಎಂಬ ಉದ್ದೇಶದಿಂದ  ಮಾಂಸಾಹಾರವನ್ನು ಸೇವಿಸುತ್ತಾರೆ.  ಮಾಂಸಾಹಾರವನ್ನು  ತಿನ್ನುವುದರ ಮೂಲಕ ನೀವು ಆರೋಗ್ಯ ವೃದ್ಧಿಸಬಹುದು ಎನ್ನುವುದು ಸಾಮಾನ್ಯ ನಂಬಿಕೆ. ಆದರೆ ವಾಸ್ತವವಾಗಿ ಹಾಗಾಗುವುದಿಲ್ಲ. ಆರೋಗ್ಯದ ದೃಷ್ಟಿಯಿಂದ ಮಾಂಸಾಹಾರ ಒಳ್ಳೆಯದಲ್ಲ.  ಮಾಂಸಾಹಾರವನ್ನುತ್ಯಜಿಸಿ  ಸಸ್ಯಾಹಾರಿಗಳಾಗಲು ಬಯಸಿದರೆ, ಸಸ್ಯಾಹಾರದ   ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಲೇಬೇಕು.  

ದೇಹ  ತೂಕ ಇಳಿಕೆಯಾಗುತ್ತದೆ:
ಸಸ್ಯಾಹಾರವನ್ನು ಸೇವಿಸುವುದರಿಂದ ತೂಕ ಇಳಿಕೆ ಯಾಗುತ್ತದೆ ಎಂಬುದು 2016 ರಲ್ಲಿ ನಡೆಸಿದ ಸಂಶೋಧನೆಯಿಂದ ತಿಳಿದು ಬಂದಿದೆ. ವಾಸ್ತವವಾಗಿ, ಸಸ್ಯಾಹಾರಿ ಆಹಾರದಲ್ಲಿ ಕೊಬ್ಬಿನ ಅಂಶ ಕಡಿಮೆ ಇರುತ್ತದೆ. ಅಲ್ಲದೆ, ಸಸ್ಯಾಹಾರಿ ಆಹಾರವು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವ ಮೂಲಕ ದೇಹ ತೂಕ ಇಳಿಸಲು ಸಹಾಯ ಮಾಡುತ್ತದೆ. 

ಮಧುಮೇಹವನ್ನು ದೂರವಿಡಬಹುದು :
ಸಸ್ಯಾಹಾರಿ ಆಹಾರಗಳೆಂದರೆ   ಧಾನ್ಯಗಳು, ಹಸಿರು ಎಲೆಗಳ ತರಕಾರಿಗಳು, ಹಣ್ಣುಗಳು ಮತ್ತು ಬೀಜಗಳನ್ನು ಒಳಗೊಂಡಿರುತ್ತದೆ. ಈ ಆಹಾರಗಳಲ್ಲಿ ಗ್ಲೈಸೆಮಿಕ್ ಅಂಶ ಕಡಿಮೆಯಿರುತ್ತದೆ. ಈ ಕಾರಣದಿಂದಾಗಿ, ದೇಹದಲ್ಲಿ ಸಕ್ಕರೆ ಅಂಶವು ನಿಯಂತ್ರಣದಲ್ಲಿರುತ್ತದೆ. ಇದಲ್ಲದೆ, ಮಾಂಸಾಹಾರಿಗಳಿಗೆ ಹೋಲಿಸಿದರೆ, ಸಸ್ಯಾಹಾರಿಗಳಲ್ಲಿ ಮಧುಮೇಹದ ಅಪಾಯವು  ಐವತ್ತು ಪ್ರತಿಶತದಷ್ಟು ಕಡಿಮೆಯಿರುತ್ತದೆ. 

ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ: 
ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್ ಪ್ರಕಟಿಸಿದ ಅಧ್ಯಯನದ ಪ್ರಕಾರ, ಸಸ್ಯಾಹಾರಿಗಳಲ್ಲಿ ಮಾಂಸಾಹಾರಿಗಳಿಗಿಂತ ಕಡಿಮೆ ರಕ್ತದೊತ್ತಡವಿರುತ್ತದೆ.  ಸಸ್ಯ ಆಧಾರಿತ ಆಹಾರಗಳಲ್ಲಿ ಕಡಿಮೆ ಪ್ರಮಾಣದ ಕೊಬ್ಬು, ಸೋಡಿಯಂ ಮತ್ತು ಕೊಲೆಸ್ಟ್ರಾಲ್ ಇರುತ್ತದೆ. ಈ ಕಾರಣದಿಂದಾಗಿ, ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.

ಹೃದಯ ಆರೋಗ್ಯಕರವಾಗಿರುತ್ತದೆ: 
ಅಮೇರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ ಪ್ರಕಾರ, ಸಸ್ಯಾಹಾರಿಗಳಿಗೆ ಮಾಂಸಾಹಾರಿಗಳಿಗಿಂತ ಮೂರನೇ ಒಂದು ಭಾಗದಷ್ಟು ಕಡಿಮೆ ಹೃದಯ ಸಮಸ್ಯೆಗಳಿವೆ. ಅಧ್ಯಯನದ ಪ್ರಕಾರ, ಮಾಂಸಾಹಾರಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಲೆಸ್ಟ್ರಾಲ್ ಕಂಡುಬರುತ್ತದೆ. ಇದು ಹೃದಯದ ಅಪಧಮನಿಗಳನ್ನು ನಿರ್ಬಂಧಿಸುತ್ತದೆ. ಈ ಕಾರಣದಿಂದಾಗಿ, ಹೃದಯ ಸಮಸ್ಯೆಯ ಅಪಾಯವು ಹೆಚ್ಚಾಗುತ್ತದೆ.

ಕ್ಯಾನ್ಸರ್ ಅಪಾಯ ಕಡಿಮೆ: 
ಅಧ್ಯಯನದ ಪ್ರಕಾರ ತರಕಾರಿಗಳು ಮತ್ತು ಹಣ್ಣುಗಳನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ  ಹೆಚ್ಚುತ್ತದೆ.  ಮಾಂಸಾಹಾರಿಗಳಿಗೆ ಹೋಲಿಸಿದರೆ ಸಸ್ಯಾಹಾರಿಗಳಿಗೆ ಕ್ಯಾನ್ಸರಿನ ಅಪಾಯ ಕೂಡಾ ಕಡಿಮೆಯೇ.  ಸ್ವೀಡಿಷ್ ಅಧ್ಯಯನದ ಪ್ರಕಾರ, ಸಸ್ಯಾಹಾರಿ ಜನರಲ್ಲಿ ಆಸ್ತಮಾದ ಅಪಾಯವೂ ಕಡಿಮೆ ಎಂದೇ ಹೇಳಲಾಗಿದೆ

ಲೈಂಗಿಕ ಜೀವನವು ಉತ್ತಮಗೊಳ್ಳುತ್ತದೆ :
ಯುನೈಟೆಡ್ ಕಿಂಗ್‌ಡಂನಲ್ಲಿ ನಡೆಸಿದ ಸಂಶೋಧನೆಯ ಪ್ರಕಾರ, ಸಸ್ಯಾಹಾರಿಗಳಿಗೆ ಹೋಲಿಸಿದರೆ ಮಾಂಸಾಹಾರಿಗಳು  ತಮ್ಮ ಲೈಂಗಿಕ ಜೀವನದಲ್ಲಿ ಸಂತೋಷವಾಗಿ ಇರುತ್ತಾರೆ ಎಂದು ಹೇಳಲಾಗಿದೆ. 

No comments:

Post a Comment