Monday, 12 July 2021

ದಾವಣಗೆರೆ: ಬೈಕ್ ಅಡ್ಡಗಟ್ಟಿ ನಗದು, ಮೊಬೈಲ್ ಕಿತ್ತುಕೊಂಡು ದುಷ್ಕರ್ಮಿಗಳು ಪರಾರಿ.

 

ದಾವಣಗೆರೆ: ತಾಲ್ಲೂಕಿನ ಚಿಕ್ಕ ಬೂದಿಹಾಳ್ ಗ್ರಾಮದ ಬಳಿ ಬೈಕ್ ಅನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಸವಾರನಿಂದ ₹ 15 ಸಾವಿರ ಹಾಗೂ ಒಂದು ₹ 9 ಸಾವಿರ ಮೌಲ್ಯದ ಒಂದು ಸ್ಯಾಮ್‌ಸಂಗ್ ಮೊಬೈಲ್ ಅನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಬುಸವನಹಟ್ಟಿ ಗ್ರಾಮದ ರೇವಣಸಿದ್ದಪ್ಪ ಹಣ ಕಳೆದುಕೊಂಡವರು. ಭತ್ತದ ವ್ಯಾಪಾರ ಮುಗಿಸಿಕೊಂಡು ದಾವಣಗೆರೆಯಿಂದ ಶನಿವಾರ ರಾತ್ರಿ ಗ್ರಾಮಕ್ಕೆ ತೆರಳುತ್ತಿರುವಾಗ ನಂಬರ್‌ ಪ್ಲೇಟ್ ಇಲ್ಲದ ಸ್ಕೂಟರ್‌ನಲ್ಲಿ ಬಂದ ಮೂವರು ಮಂದಿ ರೇವಣ ಸಿದ್ದಪ್ಪ ಅವರನ್ನು ಅಡ್ಡಗಟ್ಟಿ, ಕಲ್ಲಿನಿಂದ ತಲೆಗೆ ಹೊಡೆದಿದ್ದಾರೆ. ಆಗ ಕೆಳಗೆ ಬಿದ್ದಾಗ ಹಣ ಹಾಗೂ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments:

Post a Comment