Wednesday 14 July 2021

2021-22 ನೇ ಸಾಲಿನ ಶೈಕ್ಷಣೆಕ ವರ್ಷದ: ಶೇ 30 ರಷ್ಟು ಪಠ್ಯ ಕಡಿತಕ್ಕೆ ರಾಜ್ಯ ಸರ್ಕಾರ ಚಿಂತನೆ.

 


ಬೆಂಗಳೂರು : 2021-22 ನೇ ಸಾಲಿನಲ್ಲೂ ಶೇ. 30 ರಷ್ಟು ಪಠ್ಯ ಕಡಿತಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಸರ್ಕಾರದ ಮೂಲಗಳು ಮಾಹಿತಿ ನೀಡಿದೆ.

2020-21ನೇ ಸಾಲಿನಲ್ಲಿ ಕೊರೊನಾದಿಂದ ಆಫ್ ಲೈನ್ ತರಗತಿಗಳು ಸರಿಯಾಗಿ ನಡೆಯದೇ ಇರುವ ಹಿನ್ನೆಲೆಯಲ್ಲಿ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಶೇ.30ರಷ್ಟು ಪಠ್ಯ ಕಡಿತ ಮಾಡಿ, ಉಳಿದ ಶೇ.70ರಷ್ಟು ಪಠ್ಯದಂತೆ ತರಗತಿಗಳನ್ನು ಆನ್‌ಲೈನ್‌, ಆಫ್ಲೈನ್‌ ವ್ಯವಸ್ಥೆ ಮೂಲಕ ನಡೆಸಲಾಗಿತ್ತು ಹಾಗೆಯೇ 1ರಿಂದ 9ನೇ ತರಗತಿ ವಿದ್ಯಾರ್ಥಿಗಳ ಪಠ್ಯವನ್ನು ನಿರ್ದಿಷ್ಟ ಶೈಕ್ಷಣಿಕ ತರಗತಿಗೆ ಅನುಗುಣವಾಗಿ ಕಡಿತ ಮಾಡಲಾಗಿತ್ತು. ಅದೇ ತೆರನಾಗಿ ಪ್ರಸಕ್ತ ಸಾಲಿಗೂ 2021-22ನೇ ಸಾಲಿಗೂ ಶೇ.30ರಷ್ಟು ಪಠ್ಯ ಕಡಿತ ಮಾಡುವ ಬಗ್ಗೆ ಶಿಕ್ಷಣ ಇಲಾಖೆ ಮತ್ತು ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

ಆನ್ ಲೈನ್ ತರಗತಿ ನಡೆದರೂ ಕೂಡ ಭೌತಿಕ ತರಗತಿಗಳು ನಡೆಯದೇ ಇರುವುದರಿಂದ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಬೋಧನೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲೂ ಶೇ.30ರಷ್ಟು ಪಠ್ಯ ಕಡಿತ ಮಾಡಬೇಕಾದ ಅನಿವಾರ್ಯತೆಯಿದೆ. ಕಳೆದ ವರ್ಷ ಶೇ.30ರಷ್ಟು ಪಠ್ಯ ಕಡಿತ ಮಾಡಲಾಗಿತ್ತು. ಅದನ್ನು ಈಗ ಸೇತುಬಂಧದ ಮೂಲಕ ಸರಿದೂಗಿಸುವ ಕಾರ್ಯ ನಡೆಯುತ್ತಿದೆಯಾದರೂ, ಪರಿಣಾಮಕಾರಿಯಾಗಿ ಆಗುತ್ತಿಲ್ಲ. ಸೇತುಬಂಧ ಕಾರ್ಯಕ್ರಮ ಬೋಧನೆಗೆ ಸರಿಯಾದ ವೇದಿಕೆಯೇ ಇಲ್ಲ. ಡಿಎಸ್‌ಆರ್‌ಟಿ ಯೂಟ್ಯೂಬ್‌ ಚಾನಲ್‌ ಮೂಲಕ ಸೇತುಬಂಧ ಪಾಠಗಳನ್ನು ಬಿಡಲಾಗಿದೆ. ಆದರೆ, ವಿದ್ಯಾರ್ಥಿಗಳು ಯೂಟ್ಯೂಬ್‌ ಮೂಲಕ ಕಲಿಕೆಗೆ ಅಷ್ಟೊಂದು ಆಸಕ್ತಿ ತೋರಿಸುತ್ತಿಲ್ಲ ಎಂಬುದು ತಿಳಿದು ಬಂದಿದೆ. ಇನ್ನೂ, ಈ ವರ್ಷ ಕೂಡ ಶೇ. 30 ರಷ್ಟು ಪಠ್ಯ ಕಡಿತಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಸರ್ಕಾರದ ಮೂಲಗಳು ಮಾಹಿತಿ ನೀಡಿದೆ.

ಕೊರೋನಾ ಸೋಂಕಿನಿಂದಾಗಿ ಶಾಲೆಗಳ ಆರಂಭ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದ ಸಿಬಿಎಸ್‌ಇ ಪಠ್ಯಕ್ರಮದ ಮಾದರಿಯಲ್ಲಿ ರಾಜ್ಯದಲ್ಲಿಯೂ ಶೇ.30 ರಿಂದ 35ರಷ್ಟುಪಠ್ಯವನ್ನು ಕಡಿತಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ರಾಜ್ಯದಲ್ಲಿ ಆನ್‌ಲೈನ್‌ ಶಿಕ್ಷಣವನ್ನು ಸಂಪೂರ್ಣ ನೀಡಲು ಸಾಧ್ಯವಿಲ್ಲ. ಆದ್ದರಿಂದಲೇ ಪೂರಕವಾಗಿ ದೂರದರ್ಶನ ಮತ್ತು ಆಕಾಶವಾಣಿ ಮೂಲಕ ಸರ್ಕಾರ ಶಿಕ್ಷಣ ನೀಡುತ್ತಿದೆ.

No comments:

Post a Comment