Tuesday, 22 June 2021

POEM: "ಪ್ರಕೃತಿಯೇ ಪರಮಾತ್ಮ"

ದಾಸೇಗೌಡ. ಎಂ.ಆರ್. ಉಪಾಧ್ಯಕ್ಷರು, ಚಿತ್ರದುರ್ಗ ವಿಜ್ಞಾನ ಕೇಂದ್ರ. ಇವರು ಪರಿಸರವನ್ನು ಕುರಿತು ಮರ, ಮಣ್ಣು, ಶಿಲೆ, ಲೋಹಗಳನ್ನು ನಿರ್ಜೀವವಾಗಿಸಿ, ಪೂಜಿಸಿದರೆ ವರ ಹೇಗೆ ತಾನೆ ಕೊಡಲು ಸಾಧ್ಯ. ಎಂಬ ಮಾರ್ಮಿಕ ಕವನದ ಸಾಲುಗಳಿಂದ  ಓದಗರನ್ನು ಪ್ರಶ್ನಿಸಿದ್ದಾರೆ. 

                                *******************************

"ಪ್ರಕೃತಿಯೇ ಪರಮಾತ್ಮ"


ಚೈತನ್ಯದ ಮರ, ಮಣ್ಣು, ಶಿಲೆ, ಲೋಹಗಳ ಜಡ ಮಾಡಿ

ಪೂಜಿಸಲು ವರ ಕೊಡುವವೇನು?

ಜಡ ಪೂಜಿಪ ಬಡವ,ಚೈತನ್ಯ ಆರಾಧಿಸುವ ಸಿರಿವಂತ.

ಇರುವಂತೆ ಇಟ್ಟು, ಇದ್ದಲ್ಲೇ ಬಿಟ್ಟು ಆರಾಧಿಸಲು ಅದು ನಿಜ ಬದುಕಲ್ಲವೇನು?

 

ಮೃಗಕುಲದ ಪರ,ಉಸಿರು ಆಹಾರ

ವರ ಕೊಡುವ ಮರ ಕಡಿದು,

ವಿಗ್ರಹ ಮಾಡಿ,ಕತ್ತಲೊಳಿಟ್ಟು

ವರವ ಬೇಡಿದರೆ, ಸತ್ತ ಮರ ವರ ಕೊಡುವುದೇನು?

 

ಬಿಸಿಲು,ಮಳೆ,ಗಾಳಿಗೆ,ಶಿಲೆ ಬಿರಿದು ಮಣ್ಣಾಗಿ,

ಸಸ್ಯಾ0ಕುರಕೆ ಪಕ್ಕಾದ,ಜೀವಕ್ಕೆ ಕಸುವಾದ,

ಶಿಲೆಯ ಕೆತ್ತಿ ಗುಡಿಯೊಳಡಗಿಸಿಟ್ಟು

 ವರವ ಬೇಡಿದರೆ,ಜಡ ಶಿಲೆ ವರ ಕೊಡುವುದೇನು?

 

ಮಳೆ ಕರೆದು,ಜಲ ಕುಡಿದು,

ಧರೆ ತಣಿಸುವ ಗುಡ್ಡ ಬಗೆದು,

ಲೋಹ ತೆಗೆದು,ಎರಕಹೊಯ್ದು,ರೂಪ ಕೊಟ್ಟು        

ವರವ ಬೇಡಿದರೆ, ಜಡಲೋಹ ವರ  ಕೊಡುವುದೇನು?

 

ಅಣು ಅಣುವು ಶಕ್ತಿಕಣ, ಅನ್ನ ಬೆಳೆಯಲು ಪ್ರೇರಣ,

ಬಯಲ ಜೀವ ಕಣ, ಮಣ್ಣ  ತಂದು ಕಲೆಸಿ

ಮೂರ್ತಿಯ ಮಾಡಿ ಕೋಣೆಯೊಳಿಟ್ಟು,

ವರವ ಬೇಡಿದರೆ, ಜಡ ಮಣ್ಣು ವರ ಕೊಡುವುದೇನು?

 

ಕವಿ ಬರೆದರೇನು? ತಿಳಿದವ ಎಷ್ಟು ಹೇಳಿದರೇನು?

ನಿನ್ನರಿವೆ ನಿನಗೆ ಗುರು. ಆಗ ನೀನೇ ಜಗ ಮಲ್ಲ.


ದಾಸೇಗೌಡ. ಎಂ.ಆರ್.

ಉಪಾಧ್ಯಕ್ಷರು,

ಚಿತ್ರದುರ್ಗ ವಿಜ್ಞಾನ ಕೇಂದ್ರ. 





2 comments:

  1. ಪರಿಸರ ಕುರಿತ ಕವನ ತುಂಬಾ ಚೆನ್ನಾಗಿ ಮೂಡಿಬಂದಿದೆ ಸರ್.

    ReplyDelete

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...