Sunday 20 June 2021

ಚಿತ್ರದುರ್ಗ: ಹೊಸ ಪರಿಷ್ಕೃತ ಮಾರ್ಗಸೂಚಿ ಅನ್ವಯ ಲಾಕ್ ಡೌನ್ ಮುಂದುವರಿಕೆ, ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ.

ಕೊರೋನಾ ನಿಯಂತ್ರಣಕ್ಕೆ ಬಾರದ ಹಿನ್ನೆಯಲ್ಲಿ  ರಾಜ್ಯ ಸರ್ಕಾರ ಜಿಲ್ಲೆಯಲ್ಲಿ ಕೆಲವು ಪರಿಷ್ಕೃತ ಮಾರ್ಗಸೂಚಿಯೊಂದಿಗೆ ಲಾಕ್ ಡೌನ್ ಮುಂದುವರಿಸಲು ಸೂಚಿಸಿದೆ.ಎಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ತಿಳಿಸಿದರು.

ಚಿತ್ರದುರ್ಗ: ಜೂನ್ 21ರಿಂದ ಜುಲೈ 5ರ ವರೆಗೆ ಹೊಸ ಲಾಕ್ ಡೌನ್ ಗೈಡ್ಲೈನ್ಸ್.  ಚಿತ್ರದುರ್ಗ ಜಿಲ್ಲೆಯಲ್ಲಿ ಏನಿರುತ್ತೆ? ಏನಿರಲ್ಲ? ಕೊರೋನಾ ನಿಯಂತ್ರಣಕ್ಕೆ ಬಾರದ ಹಿನ್ನೆಯಲ್ಲಿ  ರಾಜ್ಯ ಸರ್ಕಾರ ಜಿಲ್ಲೆಯಲ್ಲಿ ಕೆಲವು ಪರಿಷ್ಕೃತ ಮಾರ್ಗಸೂಚಿಯೊಂದಿಗೆ ಲಾಕ್ ಡೌನ್ ಮುಂದುವರಿಸಲು ಸೂಚಿಸಿದೆ.ಎಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ತಿಳಿಸಿದರು.

ಲಾಕ್ ಡೌನ್  ಪರಿಷ್ಕೃತ ಮಾರ್ಗಸೂಚಿ ಅನ್ವಯ, ಜೂನ್ 21ರಿಂದ ಜುಲೈ 5ರ ವರೆಗೆ ಹೊಸ ಲಾಕ್ ಡೌನ್  ಗೈಡ್ಲೈನ್ಸ್ ಜಾರಿಯಲ್ಲಿರುತ್ತದೆ.ಎಂದು ತಿಳಿಸಿದ್ದಾರೆ. ಈ ಆದೇಶದ ಅನ್ವಯ ಜೂನ್ 21 ರಿಂದ ಜುಲೈ 5ರ ವರೆಗೆ ರಾತ್ರಿ ಕರ್ಪ್ಯೂ ಜಾರಿಯಲ್ಲಿರುತ್ತದೆ. ಅಲ್ಲದೆ ವೀಕ್ ಎಂಡ್  ಕರ್ಪ್ಯೂ ಶುಕ್ರವಾರ ರಾತ್ರಿ 7 ರಿಂದ ಸೋಮವಾರ ಬೆಳಗ್ಗೆ 5ರ ವರೆಗೆ ಜಾರಿಯಲ್ಲಿರಲಿದೆ.

ಸರ್ಕಾರಿ/ಸರ್ಕಾರೇತರ  ಉತ್ಪಾದನಾ ಚಟುವಟಿಕೆಗಳು,ಕಾರ್ಖಾನೆಗಳನ್ನು ಶೇ 50% ಸಿಬ್ಬಂದಿಯೊಂದಿಗೆ  ಆರಂಭಿಸಲು ಅನುಮತಿ ನೀಡಲಾಗಿದೆ. ಗಾರ್ಮೆಂಟ್ಸ್ ಗೆ ಸಂಬಂಧಿಸಿದಂತೆ 30% ಮಾತ್ರ ಅನುಮತಿ ನೀಡಿ ಕೋವಿಡ್ ನಿಯಮ ಪಾಲಿಸಲು ಸೂಚಿಸಿದೆ.

 ಆಹಾರ ದಿನಸಿ, ತರಕಾರಿ, ಮೀನು, ಮಾಂಸ, ಹಾಲಿನ ಉತ್ಪನ್ನಗಳು, ಬೀದಿಬದಿಯ ವ್ಯಾಪಾರಸ್ಥರಿಗೆ, ಮದ್ಯದಂಗಡಿಗಳು, ಕನ್ನಡಕದ ಅಂಗಡಿಗಳನ್ನು ಬೆಳಗ್ಗೆ 6 ರಿಂದ ಮದ್ಯಾಹ್ನ ಗಂಟೆವರೆಗೆ ಮಾತ್ರ ತೆರೆಯಲು ಅವಕಾಶ ನೀಡಲಾಗಿದೆ.

ಕಟ್ಟಡ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಬೇಕಾಗಿರುವ ಸಾಮಗ್ರಿಗಳನ್ನು ಖರೀದಿಸಲು, ಹೋಮ್ ಡೆಲಿವರಿಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಪದಾರ್ಥಗಳನ್ನು 24 ಗಂಟೆಯು ಪೂರೈಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಉದ್ಯಾನವನಗಳಲ್ಲಿ ಗುಂಪು ಸೇರದಂತೆ  ವಾಯು ವಿಹಾರ ಮತ್ತು ವ್ಯಾಯಾಮ ಮಾಡಲು ಬೆಳಗ್ಗೆ 5:00 ರಿಂದ 10 ರವರೆಗೆ ಅನುಮತಿ ನೀಡಲಾಗಿದೆ.

 ಆಟೋ ಟ್ಯಾಕ್ಸಿ ಗೆ ಸಂಬಂಧಿಸಿದಂತೆ ಕೇವಲ ಇಬ್ಬರು ಪ್ರಯಾಣಿಕರು ಪ್ರಯಾಣಿಸಲು, ಅವಕಾಶ ನೀಡಲಾಗಿದ್ದು, ಬಸ್ಸು ಸಂಚಾರ ನಿರ್ಬಂಧಿಸಲಾಗಿದೆ.

 ಸರ್ಕಾರಿ ಕಚೇರಿಗಳಾದ ಲೋಕೋಪಯೋಗಿ ಇಲಾಖೆ, ವಸತಿ,ಸಹಕಾರ, ಕಂದಾಯ, ನಬಾರ್ಡ್,ಮತ್ತು ಕೇಂದ್ರ ಸರ್ಕಾರ ಕಛೇರಿಗಳು  50% ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸಲು ಸೂಚಿಸಲಾಗಿದೆ.

ರಾತ್ರಿ ಕರ್ಫ್ಯೂ ಮುಂದುವರಿಯಲಿದೆ ರಾತ್ರಿ 7:00 ರಿಂದ ಬೆಳಗ್ಗೆ 5.00 ರವರೆಗೆ ರಾತ್ರಿ ವೈಯಕ್ತಿಕವಾಗಿ ಓಡಾಟ ನಿಷೇಧಿಸಲಾಗಿದೆ ತುರ್ತು ಅಥವಾ ವೈದ್ಯಕೀಯ ಸೌಲಭ್ಯಕ್ಕೆ ಅವಕಾಶ ನೀಡಲಾಗಿದೆ ಕಾರ್ಖಾನೆಗಳು 24 ಗಂಟೆ ಕೂಡ ಶಿಫ್ಟ್ ಆಧಾರದ ಮೇಲೆ ಕೋವಿಡ್ ನಿಯಮಗಳನ್ನು ಪಾಲಿಸಕೊಂಡು ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ.

 ಟೆಲಿಕಮ್ಯುನಿಕೇಶನ್, ಇಂಟರ್ನೆಟ್ ಸೇವೆಗಳನ್ನು ಸಲ್ಲಿಸುವವರು ವ್ಯಾಲಿಡ್ ಐಡಿ ಕಾರ್ಡ್ ಗಳನ್ನು ತೋರಿಸಿ ಕಾರ್ಯನಿರ್ವಹಿಸಲು, ಔಷಧಿ ಮಳಿಗೆಗಳು ಇತರೆ ತುರ್ತು ಸೌಲಭ್ಯ ಒದಗಿಸುವ ವಾಹನಗಳ ಓಡಾಟಕ್ಕೆ ನಿಯಮಗಳು ಅನ್ವಯ.ಹಾಗೂ ದಿನದ 24 ಗಂಟೆ ಅವಕಾಶ ಕಲ್ಪಸಲಾಗಿದೆ.

 ರೈಲ್ವೆ ಪ್ರಯಾಣಕ್ಕೆ ಅಥವಾ ವಿಮಾನ ಪ್ರಯಾಣಕ್ಕೆ ತಮ್ಮ ಟಿಕೆಟ್ ತೋರಿಸಿ ರಾತ್ರಿ ಸಂದರ್ಭದಲ್ಲೂ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ.

ಮದುವೆ ಸಮಾರಂಭಗಳಿಗೆ ಕೇವಲ 40 ಜನರಿಗೆ ತಸಿಲ್ದಾರ್ ಅಧಿಕಾರಿಗಳಿಂದ ಅನುಮತಿ ಮೇರೆಗೆ ಕೋವಿಡ್ ನಿಯಮಗಳಂತೆ ಮದುವೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

  ಎಲ್ಲಾ ಹೊಸ ಗೈಡ್ಲೈನ್ಸ್ ಸೋಮವಾರದಿಂದಲೇ ಜಾರಿಗೆ ಬರಲಿವೆ.ಮತ್ತು ಎರಡು ವಾರಗಳವರೆಗೆ ಮುಂದುವರಿಯಲಿದೆ. ಇದರ ಜೊತೆ ವೀಕೆಂಡ್ ಕರ್ಫ್ಯೂ ಮುಂದುವರಿಯಲಿದ್ದು ಶುಕ್ರವಾರ ರಿಂದ ಸೋಮವಾರ ಬೆಳಗಿನ ಜಾವ 5 ರವರೆಗೆ ಇರಲಿದೆ.

ನಿಯಮ ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ-2005 ಮತ್ತು ಭಾರತೀಯ ದಂಡ ಸಂಹಿತೆ ಅನ್ವಯ ಕ್ರಮಕ್ಕೆ ಒಳಪಡಿಸಲಾಗುವುದು ಎಂದು ಎಚ್ಚರಿಸಿದ್ದಾರೆ.


No comments:

Post a Comment