Sunday, 6 June 2021

ಸ್ಪೋಟಕ ಹೇಳಿಕೆ ನೀಡಿದ ಸಿಎಂ, ವಿಜಯೇಂದ್ರ ಮೂಲಕ ರಾಜೀನಾಮೆ ಸಂದೇಶ ಕಳಿಸಿದ ಹೈಕಮಾಂಡ್.?


 ಸಿಎಂ ಪುತ್ರ ವಿಜಯೇಂದ್ರ ದೆಹಲಿಯ ಭೇಟಿ ಬಳಿಕ ಯಡಿಯೂರಪ್ಪ ರಾಜೀನಾಮೆಯಂತಹ ಸ್ಪೋಟಕ ಹೇಳಿಕೆ ನೀಡಿದ್ದಾರೆ.ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಆಗಲಿದೆ ಎನ್ನುವ ಕುರಿತಾಗಿ ಚರ್ಚೆ ನಡೆದಿರುವ ಹೊತ್ತಲ್ಲೇ ಸಿಎಂ ಅವರಿಂದ ಇಂತಹ ಹೇಳಿಕೆ ಬಂದಿದೆ. ವಿಜಯೇಂದ್ರ ಮೂಲಕ ಸಿಎಂ ರಾಜೀನಾಮೆಗೆ ವರಿಷ್ಠರ ಸೂಚನೆ ಬಂದಿದೆ. ವರಿಷ್ಠರಿಂದ ರಾಜೀನಾಮೆ ಬಗ್ಗೆ ಸಂದೇಶ ಬಂದ ನಂತರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ ಎಂದೆಲ್ಲ ಚರ್ಚೆಯಾಗ್ತಿದೆ.

ಪುತ್ರ ವಿಜಯೇಂದ್ರ ಅವರ ಮೂಲಕ ಸಿಎಂಗೆ ಹೈಕಮಾಂಡ್ ಸಂದೇಶ ರವಾನಿಸಿದೆ. ವಿಜಯೇಂದ್ರ ದೆಹಲಿ ಭೇಟಿ ಬಳಿಕ ಯಡಿಯೂರಪ್ಪ ಸ್ಪೋಟಕ ಹೇಳಿಕೆ ನೀಡಿರುವುದು ಸಂಚಲನ ಮೂಡಿಸಿದೆ. ಭಿನ್ನರ ಬಣದ ಹೋರಾಟಕ್ಕೆ ಹೈಕಮಾಂಡ್ ಲೆವೆಲ್ ನಲ್ಲಿ ಮೇಲುಗೈ ಸಿಕ್ಕಿದೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕೂಗಿನ ಬೆನ್ನಲ್ಲೇ ಸಿಎಂ ಹೇಳಿಕೆ ನೀಡಿದ್ದಾರೆ. ಸಿಎಂ ಹೇಳಿಕೆ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಸುಳಿವು ನೀಡಿದೆ ಎಂದು ಹೇಳಲಾಗಿದೆ.

No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...