Saturday, 5 June 2021

ಜಗಳೂರು ತಾಲೂಕು ಹೊಸಕೆರೆ ಗ್ರಾಮದ ಬಳಿ ಲಾರಿ- ಓಮ್ನಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು, ಮತ್ತಿಬ್ಬರಿಗೆ ಗಂಭೀರ ಗಾಯ

ಜಗಳೂರು: ತಾಲೂಕಿನ ಹೊಸಕೆರೆ ಗ್ರಾಮದ ರೈತ ಸಂಪರ್ಕ ಕೇಂದ್ರದ ಬಳಿ ಓಮ್ನಿ ಕಾರ್ ಮತ್ತು ಲಾರಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತಿಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ.

ಚಿಕ್ಕ ಉಜ್ಜಯಿನಿ ಗ್ರಾಮದ ಹಾಲಪ್ಪ (65)
ಹನುಮಂತಪ್ಪ( 40) ಮೃತ ದುರ್ದೈವಿಗಳು. ಮಹಾಂತಮ್ಮ ಮತ್ತುರೇಖಾ ಸಿದ್ದೇಶ್ ಎನ್ನುವವರು ಗಂಭೀರ ಗಾಯಗೊಂಡಿದ್ದು, ಜಗಳೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವಿವರ: ಅನಾರೋಗ್ಯದಿಂದ ಬಳಲುತ್ತಿದ್ದ ರೇಖಾ ಅವರನ್ನು ಅವರ ಸಂಬಂಧಿ ಹನುಮಂತಪ್ಪನವರ ಓಮ್ನಿಯಲ್ಲಿ ನಾಲ್ಕು ಮಂದಿ ಜಗಳೂರಿನ ಆಸ್ಪತ್ರೆಗೆ ಹೋಗುತ್ತಿರುವಾಗ ಹೊಸಕೆರೆ ಬಳಿ ಎದುರಿಗೆ ಬಂದ ಲಾರಿ ಡಿಕ್ಕಿ ಹೊಡೆದಿದೆ.‌ ಡಿಕ್ಕಿಯಾದ ರಭಸಕ್ಕೆ ಓಮ್ನಿ ವಾಹನ ಚಾಲಕ ಹನುಮಂತಪ್ಪ ಮತ್ತು ಹಾಲಪ್ಪ ವಾಹನದಲ್ಲಿಯೇ ಸಿಕ್ಕಿಕೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಸ್ಥಳೀಯರು ಗಾಯಗೊಂಡಿದ್ದ ರೇಖಾ, ಮಹಾಂತಮ್ಮ ಎನ್ನುವವರನ್ನು ಜಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಕಳುಹಿಸಿದ್ದಾರೆ. ಈ‌ ಘಟನೆ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...