ನಾಯಕನಹಟ್ಟಿ:
ಪಟ್ಟಣದಲ್ಲಿ ಕಳೆದ 10 ದಿನಗಳಿಂದ ಕೊರೋನ ಸಂಕಷ್ಟದಲ್ಲಿರುವ ಜನರಿಗೆ ನಾನಾ ವ್ಯಕ್ತಿಗಳು ನಿರಂರತವಾಗಿ ಅನ್ನ ದಾಸೋಹ ನಡೆಯುತ್ತಾ
ಸಾಗುತ್ತಿದೆ. ಪಟ್ಟಣದಲ್ಲಿ ವಾಸವಾಗಿರುವ
ರಾಜಸ್ಥಾನ ಮೂಲದ ಮಾರ್ವಾಡಿ ಸಮುದಾಯದ ವತಿಯಿಂದ ಶನಿವಾರ ಕೊರೋನ
ಸೋಂಕಿತರು ಹಾಗೂ ಹೆದ್ದಾರಿಯಲ್ಲಿನ ಟ್ರಕ್ ಚಾಲಕರಿಗೆ ಊಟದ ವ್ಯವಸ್ಥೆ ಒದಗಿಸಲಾಗಿತ್ತು.
ಕಳೆದ ಒಂದು ವಾರದಿಂದ ಪಟ್ಟಣದ ಸಮುದಾಯಗಳು ಹಾಗೂ ಯುವಕರ
ಗುಂಪುಗಳು ದಿನನಿತ್ಯ ಅನ್ನದಾಸೋಹ ಏರ್ಪಡಿಸುತ್ತಿವೆ ಎರಡು ದಿನಗಳಿಂದ ಮಾರ್ವಾಡಿ ಸಮುದಾಯದವರು
ಆಹಾರ ವಿತರಿಸಿದರು.
ವಿದ್ಯಾವಿಕಾಸ ಶಾಲೆಯ ಆವರಣದಲ್ಲಿ ಮಹಿಳೆಯರು 600ಕ್ಕೂ ಹೆಚ್ಚು ಚಪಾತಿಗಳನ್ನು ಕೈಯಾರ ಸಿದ್ಧಪಡಿಸಿದ್ದಾರೆ, ಪುರುಷರು ಹಾಗೂ ಯುವಕರು ಇದಕ್ಕೆ ಪೂರಕವಾಗಿ ಹೆಸರು, ತೊಗರಿ, ಕಡಲೆ. ಸೇರಿದಂತೆ ನಾನಾ ಬೆಳೆಗಳನ್ನು ಬಳಸಿ ದಾಲ್ ತಯಾರಿಸಿದ್ದಾರೆ. ಪ್ರತಿ ಆಹಾರದ ಪಾಕೆಟ್ ಜೊತೆಗೆ ಮೂರು ಚಪಾತಿ, ದಾಲ್ ಜೊತೆಗೆ ಕ್ಯಾರೆಟ್, ಈರುಳ್ಳಿ ಸೇರಿಸಿ ಅಲ್ಯೂಮಿನಿಯಂ ಪಾಕೆಟ್ ನಲ್ಲಿ ಪ್ಯಾಕಿಂಗ್ ಮಾಡಿ ವಿತರಿಸಿದ್ದಾರೆ.
ಕಳೆದ
10 ದಿನಗಳಿಂದ ನಾನಾ ವ್ಯಕ್ತಿಗಳು ಆಹಾರ ಪೂರೈಕೆಗೆ ನೆರವು ನೀಡುತ್ತಿದ್ದಾರೆ. ಪಟ್ಟಣದ ಸಮುದಾಯ ಆಸ್ಪತ್ರೆ, ಎನ್
ಮಹದೇವಪುರ ಗ್ರಾಮದ ಇಂದಿರಾ ಪ್ರಿಯದರ್ಶಿನಿ ಶಾಲೆ ಕೊರೋನ ಕೇಂದ್ರಕ್ಕೆ
ಆಹಾರ ಪೂರೈಸಲಾಗಿದೆ ಇದರ ಜೊತೆಗೆ ಆರೋಗ್ಯ ಸಿಬ್ಬಂದಿ, ಪೊಲೀಸ್
ಸಿಬ್ಬಂದಿಗೆ ವಿತರಿಸಲಾಗಿದೆ.
ರಾಜ್ಯ
ಹೆದ್ದಾರಿ 45 ಹಾಗೂ ರಾಷ್ಟ್ರೀಯ ಹೆದ್ದಾರಿ 150 ನಲ್ಲಿ ಆಹಾರವನ್ನು ನೀಡಲಾಗುತ್ತಿದೆ. ಹೆದ್ದಾರಿಯಲ್ಲಿ ಚಲಿಸುವ ಟ್ರಕ್, ಬೈಕ್, ಅಂಬುಲೆನ್ಸ್, ಟಾಟಾ ಎಸ್ , ಸೇರಿದಂತೆ
ವಾಹನಗಳ ಚಾಲಕರಿಗೆ ಆಹಾರ ವಿತರಣೆ ಮಾಡಲಾಗಿದೆ.
ದಿನೇಶ್, ರಮೇಶ್ ಪುನಾ ರಾಮ್. ಪಿ ಟಿ ವಿನಯ್, ಮಹೇಶ್ ,ರಾಯಲ್, ಗೋಪಾಲ್ ಸಿಂಗ್, ಅಜ್ಜಯ್ಯ ,ಶಿವು ,ಎರ್ರಿಸ್ವಾಮಿ, ಶಿವಕುಮಾರ್ ಭಂಡಾರಿ, ಶಿವುಆರಾಧ್ಯ
ಮತ್ತಿತರರಿದ್ದರು.
No comments:
Post a Comment