Sunday, 6 June 2021

ಕೋವಿಡ್ ಸೋಂಕಿತರ ಸಾವಿನಲ್ಲಿ ದಾಖಲೆ ಮಾಡಿದ ಮಹಾರಾಷ್ಟ್ರ


 ಮುಂಬೈ, ಜೂ.6- ಕೊರೊನಾ ಸೋಂಕಿನಲ್ಲಿ ನಂಬರ್ ಒನ್ ಸ್ಥಾನ ಪಡೆದಿದ್ದ ಮಹಾರಾಷ್ಟ್ರ ಸರ್ಕಾರ ಕೋವಿಡ್ ನಿಂದ ಒಂದು ಲಕ್ಷಕ್ಕಿಂತ ಹೆಚ್ಚು ಸಾವು ಕಂಡ ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾಗುವ ಸಮೀಪದಲ್ಲಿದೆ. ವಿಶ್ವದ ಏಳು ದೇಶಗಳಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚಿನ ಕೋವಿಡ್ ಸಾವುಗಳಾಗಿವೆ, ಆದರೆ ಮಹಾರಾಷ್ಟ್ರ ರಾಜ್ಯವೊಂದರಲ್ಲೇ ಒಂದು ಲಕ್ಷ ಸಾವು ಸಂಭವಿಸುವ ಸಾಧ್ಯತೆ ಇದೆ.


ನಿನ್ನೆಯವರೆಗಿನ ಮಾಹಿತಿಯ ಪ್ರಕಾರ 99,512 ಮಂದಿ ಸಾವನ್ನಪ್ಪಿದ್ದಾರೆ, ನಿನ್ನೆಒಂದೇ ದಿನ 300 ಮಂದಿ ಪ್ರಾಣಕಳೆದುಕೊಂಡಿದ್ದಾರೆ. ಬಹುತೇಕ ಇನ್ನೂ ಒಂದೆರಡು ದಿನಗಳಲ್ಲಿ ಸಾವಿನ ಪ್ರಮಾಣ ಒಂದು ಲಕ್ಷ ಗಡಿ ದಾಟುವ ನಿರೀಕ್ಷೆ ಇದೆ.


ವಿಶ್ವದಲ್ಲಿ ಅಮೆರಿಕಾದಲ್ಲಿ 6,12,203 ಮಂದಿ, ಬ್ರಿಜಿಲ್ ನಲ್ಲಿ 4,72,629 ಮಂದಿ, ಭಾರತದಲ್ಲಿ 3,46,784 ಮಂದಿ, ಇಂಗ್ಲೆಂಡ್ ನಲ್ಲಿ 1,27,836 ಮಂದಿ, ಇಟಲಿಯಲ್ಲಿ 1,26,472 ಮಂದಿ, ರಷ್ಯದಲ್ಲಿ 1,23,436 ಮಂದಿ ಸಾವನ್ನಪ್ಪಿದ್ದಾರೆ.

ಸೋಂಕಿನ ಹಾನಿ ತೀವ್ರವಾಗಿದ್ದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಕಳೆದೆರಡು ತಿಂಗಳಿನಿಂದ ಲಾಕ್ ಡೌನ್ ಘೋಷಣೆ ಮಾಡಿತ್ತು. ಸೋಂಕು ಕಡಿಮೆಯಾಗಿದ್ದರಿಂದ ನಿನ್ನೆಯಿಂದಷ್ಟೇ ಐದು ಹಂತದ ಅನ್ ಲಾಕ್ ನಿರ್ಧಾರವನ್ನು ಘೋಷಣೆ ಮಾಡಲಾಗಿತ್ತು, ಅದರಂತೆ ಇಂದಿನಿಂದ ಅಲ್ಲಲ್ಲಿ, ವ್ಯಾಪಾರ ವಹಿವಾಟುಗಳು ಸರಾಗವಾಗಿ ಆರಂಭವಾಗಿವೆ.

No comments:

Post a Comment