ಮಳೆಗಾಲ ಆಗಮನದೊಂದಿಗೆ ಸೊಳ್ಳೆಗಳ ಆಗಮನವೂ ಪ್ರಾರಂಭವಾಗುತ್ತದೆ. ಸೊಳ್ಳೆಗಳನ್ನು ಓಡಿಸಲು, ಜನರು ಮಾರುಕಟ್ಟೆಯಲ್ಲಿ ಅನೇಕ ವಸ್ತುಗಳು ಲಭ್ಯವಿರುತ್ತವೆ. ಆದರೂ ಅದು ಸೊಳ್ಳೆಗಳ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ. ಅಲ್ಲದೆ ಅದು ಕೆಮಿಕಲ್ ಗಳಾಗಿರುವುದರಿಂದ ಅದು ನಮ್ಮ ಆರೋಗ್ಯಕ್ಕೂ ತೊಂದರೆ ಉಂಟು ಮಾಡುತ್ತದೆ. ಆದರೆ ಇಂದು ನಾವು ಹೇಳುವ ಕೆಲ ಪರಿಹಾರಗಳಿಂದ ಸೊಳ್ಳೆ ಕಾಟವೂ ತಪ್ಪುತ್ತದೆ. ನಿಮ್ಮ ಆರೋಗ್ಯದ ಮೇಲೆಯೂ ಕೆಟ್ಟ ಪರಿಣಾಮ ಬೀರುವುದಿಲ್ಲ.
ಚಕ್ಕೆ :ಸೊಳ್ಳೆಗಳು ಚಕ್ಕೆ ಪರಿಮಳವನ್ನು ಇಷ್ಟಪಡುವುದಿಲ್ಲ. ಇದರಲ್ಲಿ
ಸಿನ್ನಮಾಲ್ಡಿಹೈಡ್ ಮತ್ತು ಸಿನ್ನಮೈಲ್ ಅಸಿಟೇಟ್ ನಂತಹ ಅನೇಕ ಪದಾರ್ಥಗಳಿವೆ. ಇದು ಸೊಳ್ಳೆಗಳನ್ನು
ದೂರವಿರಿಸುತ್ತದೆ. ಸ್ಪ್ರೇ ಬಾಟಲಿಯಲ್ಲಿ ಕೆಲವು ಹನಿ ಚಕ್ಕೆ ಎಣ್ಣೆಯನ್ನು ಹಾಕಿ ಮತ್ತು ಅದಕ್ಕೆ
ನೀರು ತುಂಬಿಸಿ. ನಿಮ್ಮ ದೇಹದ ಮೇಲೆ ಇದನ್ನು ಸಿಂಪಡಿಸಿಕೊಳ್ಳಿ.
ಬೇವು:ಬೇವು ಸೊಳ್ಳೆಗಳನ್ನು ಓಡಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. 30 ಮಿಲಿ ನೀರಿನಲ್ಲಿ 10 ಹನಿ
ಬೇವಿನ ಎಣ್ಣೆಯನ್ನು ಬೆರೆಸಿ ದೇಹದ ಭಾಗಗಳಿಗೆ
ಹಚ್ಚಿ. ಸೊಳ್ಳೆಗಳು ನಿಮ್ಮ ಹತ್ತಿರ ಕೂಡಾ ಸುಳಿಯುವುದಿಲ್ಲ.
ಬೆಳ್ಳುಳ್ಳಿ
: ಬೆಳ್ಳುಳ್ಳಿಯ ಪರಿಮಳಕ್ಕು
ಸೊಳ್ಳೆಗಳು ನಿಲ್ಲುವುದಿಲ್ಲ. ಹಾಗಾಗಿ, ಬೆಳ್ಳುಳ್ಳಿ ಮೊಗ್ಗುಗಳನ್ನು ಒಂದು ಚಮಚ
ಎಣ್ಣೆಯಲ್ಲಿ ಹಾಕಿ ರಾತ್ರಿ ಇಡೀ ಬಿಡಿ. ಈ ಎಣ್ಣೆಗೆ ಒಂದು ಚಮಚ ನಿಂಬೆ ಮತ್ತು 2 ಕಪ್ ನೀರು ಸೇರಿಸಿ. ಇದನ್ನು ಸ್ಪ್ರೇ ಬಾಟಲಿಯಲ್ಲಿ ಹಾಕಿ ಮನೆಯಲ್ಲಿ ಇರಿಸಿದ ಸಸ್ಯಗಳ
ಮೇಲೆ ಸಿಂಪಡಿಸಿ.
ವಿನೆಗರ್
ಮತ್ತು ಬೇಕಿಂಗ್ ಸೋಡಾ : 1 ಕಪ್ ವಿನೆಗರ್
ನಲ್ಲಿ 1/4 ಕಪ್ ಅಡಿಗೆ ಸೋಡಾವನ್ನು ಬೆರೆಸಿ ಸ್ಪ್ರೇ
ಬಾಟಲಿಯಲ್ಲಿಹಾಕಿ. ಈಗ ಈ ಮಿಶ್ರಣವನ್ನು ಮನೆಗೆ ಸಿಂಪಡಿಸಿ.
No comments:
Post a Comment