Thursday, 3 June 2021

ತಳಕು, ನಾಯಕನಹಟ್ಟಿಯಲ್ಲಿ ಹದ ಮಳೆ, ರೈತರಲ್ಲಿ ಮೂಡಿದ ಸಂತಸ.


 

ನಾಯಕನಹಟ್ಟಿ: ತಳಕು 105.5 ಮಿ ಮೀ ಹಾಗೂ ನಾಯಕನಹಟ್ಟಿಯಲ್ಲಿ 56.6 ಮಿ ಮೀ ಮಳೆಯಾಗಿದೆ. ತಳಕು ಹೋಬಳಿಯಲ್ಲಿ ಬುಧವಾರ ರಾತ್ರಿ ಸುರಿದ ಉತ್ತಮ ಮಳೆಯಿಂದಾಗಿ ಮೂರು ಕೆರೆಗಳಲ್ಲಿ ನೀರು ಸಂಗ್ರಹಗೊಂಡಿದೆ. ತಳಕು ತಿಪ್ಪಯ್ಯನ ಕೋಟೆ ಕೆರೆಯಲ್ಲಿ ಈ ಬಾರಿ ಐದು ಅಡಿ ನೀರು ಸಂಗ್ರಹಗೊಂಡಿದೆ. ವಲಸೆ ಕೆರೆಯ ಅರ್ಧಭಾಗದಷ್ಟು ನೀರು ಸಂಗ್ರಹಗೊಂಡಿದೆ. ಕೆರೆಗೆ ನೀರು ಹರಿದಿರುವುರಿಂದ ತಳುಕು, ಮನ್ನೆಕೋಟೆ, ಎಂ ದೇವರಹಳ್ಳಿ, ವರವು, ರೇಖಲಗೆರೆ ಲಂಬಾಣಿಹಟ್ಟಿ, ಸೇರಿದಂತೆ ಹತ್ತಕ್ಕೂ ಹೆಚ್ಚು  ಗ್ರಾಮಗಳ ಬೋರ್ವೆಲ್ ಗಳಿಗೆ ಜೀವ ಬಂದಿದೆ. ದೇವರಹಳ್ಳಿಯ ಗ್ರಾಮದಲ್ಲಿ ಎರಡು ವರ್ಷಗಳ ಹಿಂದೆ ನಿರ್ಮಿಸಿದ್ದ ಬೃಹತ್ ಚೆಕ್ಡ್ಯಾಂ ಎರಡನೇ ಬಾರಿ ತುಂಬಿ ಹರಿದಿದೆ. ಗಿಡ್ಡಾಪುರ ಸರ್ಕಾರಿ ಪ್ರಾಥಮಿಕ ಶಾಲೆಯ ಕಾಂಪೌಂಡ್  45 ಅಡಿ ಉದ್ದದ ಗೋಡೆ ಕುಸಿದಿದೆ. ಬತ್ತಿ ಹೋಗಿದ್ದ ಬೋರ್ವೆಲ್ ಗಳಲ್ಲಿ ನೀರು ಕಾಣಿಸಿಕೊಂಡಿದೆ.

No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...