2 ವರ್ಷದ ಪುಟಾಣಿ ಬಾಲಕಿಯೊಬ್ಬಳು 200ಕ್ಕೂ ಹೆಚ್ಚು ರಾಷ್ಟ್ರಗಳ ರಾಜಧಾನಿಯನ್ನ ನಿರರ್ಗಳವಾಗಿ ಹೇಳಿದ್ದು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ.
ಈ ವಿಡಿಯೋವನ್ನ ಐಎಎಸ್ ಅಧಿಕಾರಿ ಪ್ರಿಯಾಂಕಾ ಶುಕ್ಲಾ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ವಿಡಿಯೋದಲ್ಲಿರುವ ನನ್ನ ಸಹೋದ್ಯೋಗಿಯ ಪುತ್ರಿ ಪ್ರನೀನಾಳನ್ನ ನೋಡಿ. ಈಕೆಗೆ ಕೇವಲ 2.6 ವರ್ಷ, ಆದರೂ ಸಹ ಈಕೆ 205 ರಾಷ್ಟ್ರಗಳ ರಾಜಧಾನಿಯ ಹೆಸರನ್ನ ಹೇಳುತ್ತಾಳೆ. ಪ್ರನೀನಾಳ ನೆನಪಿನ ಶಕ್ತಿ ಬಾಲ್ಯದಿಂದಲೇ ತುಂಬಾನೇ ಸ್ಟ್ರಾಂಗ್ ಇತ್ತು ಅಂತಾ ಪ್ರದೀಪ್ ಹೇಳ್ತಾ ಇದ್ದರು ಎಂದು ಶೀರ್ಷಿಕೆ ನೀಡಿದ್ದಾರೆ.
ವಿಡಿಯೋವನ್ನ ಶೇರ್ ಮಾಡಿರುವ ಪ್ರಿಯಾಂಕಾ ಶುಕ್ಲಾ, ನೀವು ಎಷ್ಟು ರಾಷ್ಟ್ರಗಳ ರಾಜಧಾನಿಯ ಹೆಸರನ್ನ ಹೇಳಬಲ್ಲಿರಿ..?
ಅಫ್ಘಾನಿಸ್ತಾನ, ಬಹ್ರೇನ್, ಭೂತಾನ್, ಇಸ್ರೇಲ್, ಚೀನಾ, ಜಪಾನ್ ಹೀಗೆ ನೀವು ಯಾವುದೇ ರಾಷ್ಟ್ರದ ಹೆಸರನ್ನ ಹೇಳಿದ್ರು ಈಕೆ ರಾಜಧಾನಿಯ ಹೆಸರನ್ನ ಥಟ್ ಅಂತಾ ಹೇಳುತ್ತಾಳೆ.

No comments:
Post a Comment