Sunday, 11 December 2022

IND vs BAN Test: ಶಮಿ ಔಟ್, ರೋಹಿತ್-ಜಡೇಜಾ ಡೌಟ್: ಭಾರತ-ಬಾಂಗ್ಲಾದೇಶ ಮೊದಲ ಟೆಸ್ಟ್ ಪಂದ್ಯ ಯಾವಾಗ?

IND vs BAN Test

ಭಾರತ ಹಾಗೂ ಬಾಂಗ್ಲಾದೇಶ (India vs Bangladesh) ನಡುವಣ ಏಕದಿನ ಸರಣಿ ಮುಕ್ತಾಯಗೊಂಡಿದೆ. ಆತಿಥೇಯರು 2-1 ಅಂತರದಿಂದ ಸರಣಿ ವಶಪಡಿಸಿಕೊಂಡಿದ್ದು, ಟೀಮ್ ಇಂಡಿಯಾ (Team India) ಕೊನೆಯ ಪಂದ್ಯದಲ್ಲಿ ಗೆದ್ದು ಮಾನ ಉಳಿಸಿಕೊಂಡಿತು. ಇಶಾನ್ ಕಿಶನ್ (Ishan Kishan) ಅವರ ಅಮೋಘ ದ್ವಿತಶಕ, ವಿರಾಟ್ ಕೊಹ್ಲಿಯ ಶತಕದಿಂದ ಬೃಹತ್ ಟಾರ್ಗೆಟ್ ನೀಡಿದ್ದ ಭಾರತ 227 ರನ್​ಗಳ ಜಯ ಸಾಧಿಸಿತು. ಇದೀಗ ಉಭಯ ತಂಡಗಳು ಟೆಸ್ಟ್ ಸರಣಿ ಮೇಲೆ ಕಣ್ಣಿಟ್ಟಿದೆ. ಭಾರತ ಹಾಗೂ ಬಾಂಗ್ಲಾದೇಶ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಯೋಜಿಸಲಾಗಿದೆ. ಈಗಾಗಲೇ ಟೆಸ್ಟ್ ಸರಣಿಗೆ ಉಭಯ ತಂಡಗಳು ಕೂಡ ಪ್ರಕಟವಾಗಿದ್ದು ಬಲಿಷ್ಠವಾಗಿದೆ. ಹಾಗಾದರೆ ಇಂಡೋ-ಬಾಂಗ್ಲಾ ನಡುವಣ ಟೆಸ್ಟ್ ಸರಣಿ ಯಾವಾಗ? ಎಷ್ಟು ಗಂಟೆಗೆ ಆರಂಭ?, ತಂಡದಲ್ಲಿ ಯಾರಿಗೆಲ್ಲ ಸ್ಥಾನವಿದೆ? ಎಂಬುದನ್ನು ನೋಡೋಣ.

ಭಾರತ ಹಾಗೂ ಬಾಂಗ್ಲಾದೇಶ ನಡುವಣ ಮೊದಲ ಟೆಸ್ಟ್ ಪಂದ್ಯ ಡಿಸೆಂಬರ್ 14 ರಿಂದ 18 ವರೆಗೆ ನಡೆಯಲಿದೆ. ಇದು ಚಿತ್ತಗಾಂಗ್​ನ ಜಹುರ್ ಅಹ್ಮದ್ ಚೌಧರಿ ಮೈದಾನದಲ್ಲಿ ಆಯೋಜಿಸಲಾಗಿದೆ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಬೆಳಗ್ಗೆ 9 ಗಂಟೆಗೆ ಶುರುವಾಗಲಿದೆ. 8:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ. ದ್ವಿತೀಯ ಟೆಸ್ಟ್ ಪಂದ್ಯ ಡಿಸೆಂಬರ್ 22 ರಿಂದ 26ರ ವರೆಗೆ ಆಯೋಜಿಸಲಾಗಿದೆ. ಇದು ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಸ್ಟೇಡಿಯಂನಲ್ಲಿ ಜರುಗಲಿದೆ. ಈ ಪಂದ್ಯ ಕೂಡ ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಬೆಳಗ್ಗೆ 9 ಗಂಟೆಗೆ ಶುರುವಾಗಲಿದೆ. 8:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ.

Ishan Kishan: 5 ವರ್ಷಗಳ ಬಳಿಕ ತಂಡಕ್ಕೆ ಎಂಟ್ರಿ: ಸ್ಟೋಟಕ ದಾಂಡಿಗನ ನೆನಪಿಸಿದ ಇಶಾನ್ ಕಿಶನ್

ರೋಹಿತ್ ಅನುಮಾನ, ಶಮಿ ಅಲಭ್ಯ:

ಇಂಜುರಿಯಿಂದಾಗಿ ಏಕದಿನ ಸರಣಿಯಿಂದ ಹೊರಬಿದ್ದಿದ್ದ ಮೊಹಮ್ಮದ್ ಶಮಿ ಅವರು ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಕೂಡ ಅಲಭ್ಯರಾಗಿದ್ದಾರೆ. ಟೆಸ್ಟ್ ಆರಂಭವಾಗುವ ಹೊತ್ತಿಗೆ ಶಮಿ ಗುಣಮುಖರಾಗುವುದು ಅನುಮಾನ ಆಗಿದ್ದರಿಂದ ಔಟಾಗಿದ್ದಾರೆ. ಇವರ ಜಾಗಕ್ಕೆ ಜಯದೇವ್ ಉನಾದ್ಕಟ್ ಅವರನ್ನು ಆಯ್ಕೆ ಮಾಡಲಾಗಿದೆ. ಇವರು ಭಾರತ ಪರ ಕೊನೆಯದಾಗಿ 2010 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ್ದರು. ಇದೀಗ 12 ವರ್ಷಗಳ ಬಳಿಕ ಆಯ್ಕೆ ಆಗಿದ್ದಾರೆ. ಅಂತೆಯೆ ದ್ವಿತೀಯ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್‌ ವೇಳೆ ಸ್ಲಿಪ್‌ ವಿಭಾಗದಲ್ಲಿ ಕ್ಯಾಚ್‌ ತೆಗೆದುಕೊಳ್ಳುವಾಗ ಎಡಗೈ ಹೆಬ್ಬೆರಳು ಮುರಿದು ಕೊಂಡ ನಾಯಕ ರೋಹಿತ್‌ ಶರ್ಮಾ ಭಾರತಕ್ಕೆ ಹಿಂತಿರುಗಿದ್ದಾರೆ. ಹೀಗಾಗಿ ಇವರು ಮೊದಲ ಟೆಸ್ಟ್​ಗೆ ಅನುಮಾನ. ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಪಡೆದುಕೊಂಡಿರುವ ರವೀಂದ್ರ ಜಡೇಜಾ ಲಭ್ಯತೆ ಬಗ್ಗೆ ಕೂಡ ಅನುಮಾನವಿದೆ.

ಕೆಎಲ್ ರಾಹುಲ್ ನಾಯಕ:

ರೋಹಿತ್ ಶರ್ಮಾ ಅಲಭ್ಯತೆಯಲ್ಲಿ ಬಿಸಿಸಿಐ ಬಾಂಗ್ಲಾ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕೆ ಕೆಎಲ್ ರಾಹುಲ್ ಅವರನ್ನು ಭಾರತದ ನಾಯಕನಾಗಿ ಆಯ್ಕೆ ಮಾಡಿತ್ತು. ಇದೀಗ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ರೋಹಿತ್ ಅನುಮಾನ ಆಗಿರುವುದರಿಂದ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಕ್ರಿಕ್​ಬುಝ್ ವರದಿ ಮಾಡಿದೆ. ಹಾಗೆಯೆ ಜಸ್​ಪ್ರೀತ್ ಬುಮ್ರಾ ಕೂಡ ಇರದ ಕಾರಣ ರಿಷಭ್ ಪಂತ್ ಉಪ ನಾಯಕನ ಜವಾದ್ದಾರಿ ನಿರ್ವಹಿಸಲಿದ್ದಾರೆ. ರೋಹಿತ್ ಜಾಗಕ್ಕೆ ಅಭಿಮನ್ಯ ಈಶ್ವರನ್ ಆಯ್ಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಭಾರತ ತಂಡ: ರೋಹಿತ್ ಶರ್ಮಾ (ಅನುಮಾನ), ಕೆಎಲ್ ರಾಹುಲ್, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಕೆಎಸ್ ಭರತ್, ಆರ್. ಅಶ್ವಿನ್, ರವೀಂದ್ರ ಜಡೇಜಾ (ಅನುಮಾನ), ಅಕ್ಷರ್ ಪಟೇಲ್, ಕುಲ್ದೀಪ್, ಶಾರ್ದೂಲ್ ಥಾಕೂರ್, ಜುಯದೇವ್ ಉನಾದ್ಕಟ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್.

ಬಾಂಗ್ಲಾದೇಶ ತಂಡ: ಮಹ್ಮುದುಲ್ ಹಸನ್ ಜಾಯ್, ನಜ್ಮುಲ್ ಹಸನ್ ಶಾಂಟೊ, ಮೊಮಿನುಲ್ ಹಕ್, ಯಾಸಿರ್ ಅಲಿ ಚೌಧರಿ, ಮುಷ್ಫೀಕರ್ ರಹಿಮ್, ಶಕಿಬ್ ಅಲ್ ಹಸನ್ (ನಾಯಕ), ಲಿಟ್ಟನ್ ದಾಸ್, ನೂರುಲ್ ಹಸನ್, ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ತಸ್ಕಿನ್ ಅಹ್ಮದ್, ಸೈಯದ್ ಖಲೀದ್ ಅಹ್ಮದ್, ಇಬಾ ಇಸ್ಲಾಮ್ ಇಸ್ಲಾಮ್ , ಝಾಕಿರ್ ಹಸನ್, ರೆಜೌರ್ ರೆಹಮಾನ್ ರಾಜಾ, ಅನಾಮುಲ್ ಹಕ್ ಬಿಜೋಯ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



source https://tv9kannada.com/sports/cricket-news/ind-vs-ban-test-series-when-india-vs-bangladesh-1st-test-match-check-team-india-squad-kannada-cricket-news-vb-au48-484211.html

No comments:

Post a Comment