
ಚಿತ್ರದುರ್ಗ : ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷದಿಂದ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯೂ ಬೆಳೆಯುತ್ತಾ ಹೋಗುತ್ತದೆ.
ಹೊಸದುರ್ಗ ಕ್ಷೇತ್ರದಿಂದ ಶಾಸಕ ಗೂಳಿಹಟ್ಟಿ ಶೇಖರ್ ಹಾಗೂ ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್ ಲಿಂಗಮೂರ್ತಿ ಇಬ್ಬರೂ ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಹೀಗಾಗಿ ಇಬ್ಬರ ನಡುವೆ ಈಗಾಗಲೇ ವೈಮನಸ್ಸು ಏರ್ಪಟ್ಟಿದೆ. ಆಗಾಗ ವಾಕ್ಸಮರಗಳು ನಡೆಯುತ್ತಲೆ ಇರುತ್ತವೆ. ಇದು ಪಕ್ಷದ ವರ್ಚಸ್ಸಿಗೆ ದೊಡ್ಡ ಪೆಟ್ಟು ಬೀಳುವ ಸಾಧ್ಯತೆ ಇದೆ. ಹೀಗಾಗಿ ಇಬ್ಬರನ್ನು ಸಮಾಧಾನ ಮಾಡಿ, ಒಂದೇ ಪಕ್ಷದವರು ಎಂದು ಒಗ್ಗೂಡಿಸುವ ಕೆಲಸ ವಿಫಲವಾಗಿದೆ.
ಹೊಸದುರ್ಗ ಪಟ್ಟಣದಲ್ಲಿ ಸಂಧಾನ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಇಬ್ಬರೂ ಹಾಜರಿದ್ದರು. ಎಂಎಲ್ಸಿ ಕೆ.ಎಸ್.ನವೀನ್, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ ನೇತೃತ್ವದಲ್ಲಿ ಸಂಧಾನ ಸಭೆ ನಡೆಸಲಾಯಿತು. ಸಭೆಯಲ್ಲಿ ಪಕ್ಷದ ಸೂಚನೆಯಂತೆ ನಡೆದುಕೊಳ್ಳಲು ಸೂಚನೆ ನೀಡಲಾಗಿತ್ತು. ಆದರೆ ಅದ್ಯಾಕೋ ಸಂಧಾನ ಸಭೆ ಯಶಸ್ವಿಯಾಗದೆ ವಿಫಲವಾಯ್ತು.
ಸಭೆಯ ಬಳಿಕ ಈ ಬಾರಿ ಬಿಜೆಪಿಯಿಂದ ಟಿಕೆಟ್ ನೀಡಿದರೆ ಖುಷಿ, ಇಲ್ಲವಾದರೆ ಪಕ್ಷೇತರವಾಗಿಯೇ ಸ್ಪರ್ಧೆ ನಡೆಸುವುದಾಗಿ ಗೂಳಿಹಟ್ಟಿ ಶೇಖರ್ ನೇರವಾಗಿಯೇ ತಿಳಿಸಿದ್ದಾರೆ. ಇನ್ನು ಹೊಸದುರ್ಗದ ಪಟ್ಟಣದಲ್ಲಿ ಕಳಪೆ ಕಾಮಗಾರಿ ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ರೋಶಗೊಂಡಿದ್ದ ಖನಿಜ ನಿಗಮ ಮಾಜಿ ಅದ್ಯಕ್ಷ ಎಸ್.ಲಿಂಗಮೂರ್ತಿ ಅವರು, ಹೊಸದುರ್ಗದಲ್ಲಿ ಜನರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಗರಂ ಆಗಿದ್ದರು. ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಮತ್ತು ಎಸ್.ಲಿಂಗಮೂರ್ತಿ ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಈ ಜಗಳ ತಾರಕಕ್ಕೇರಿ ಪಕ್ಷಕ್ಕೆ ಡ್ಯಾಮೇಜ್ ಆಗಬಾರದು ಎಂದು ಸಂಧಾನ ಸಭೆ ಕೂಡ ನಡೆಸಲಾಗಿತ್ತು.
The post ಬಿಜೆಪಿಯಿಂದ ಟಿಕೆಟ್ ನೀಡಿದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ : ಶಾಸಕ ಗೂಳಿಹಟ್ಟಿ ಶೇಖರ್ first appeared on Kannada News | suddione.
source https://suddione.com/contest-as-a-non-party-candidate-if-not-given-ticket-by-bjp-mla-goolihatti-shekhar/
Comments
Post a Comment