ಮುಂಬೈ: ಸಮಯಕ್ಕೆ ಸರಿಯಾಗಿ ವರ ಬರಲಿಲ್ಲ ಎಂದು, ವಧು ಅದೇ ಮಂಟಪದಲ್ಲಿ ಬೇರೊಬ್ಬನ ವರಿಸಿದ ಘಟನೆ ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯಲ್ಲಿ ನಡೆದಿದೆ. ಮದುವೆಯ ಸಮಾರಂಭವು ಮಹಾರಾಷ್ಟ್ರ ಬುಲ್ಧಾನಾ ಜಿಲ್ಲೆಯ ಮಲ್ಕಾಪುರ್ ಪಾಂಗ್ರಾ ಗ್ರಾಮದಲ್ಲಿ 22 4 2022 ರ ಗುರುವಾರ ಸಂಜೆ 4 ಗಂಟೆಗೆ ನಿಗದಿಯಾಗಿದ್ದು, ಎಲ್ಲಾ ರೀತಿಯ ತಯಾರಿಯನ್ನು ಮಾಡಿಕೊಳ್ಳಲಾಗಿತ್ತು. ಸಂಜೆ 4ಕ್ಕೆ ಮದುವೆ ನಿಶ್ಚಯವಾಗಿದ್ದು, ಸಮಯಕ್ಕೆ ಸರಿಯಾಗಿ ವರ ಬಂದಿರಲಿಲ್ಲ. ವಧು ಹಾಗೂ ಆಕೆಯ ಕುಟುಂಬದವರು 8 ಗಂಟೆಯವರೆಗೂ ಕಾದರೂ ವರನ ಸುಳಿವೇ ಇಲ್ಲ, ಕೊನೆಗೆ ಸಂಬಂಧಿಕರಲ್ಲಿ ಒಬ್ಬರನ್ನು ಆಯ್ಕೆ ಮಾಡಿ ಮದುವೆ ಕಾರ್ಯ ಮಾಡಿ ಮುಗಿಸಿದರು. ಈ ಬಗ್ಗೆ ವಧುವಿನ ತಾಯಿ ಮಾತನಾಡುತ್ತಾ ನಾವು 8 ಗಂಟೆವರೆಗೂ ಕಾದೆವು, ಆದರೆ ವರ 8 ಗಂಟೆಯ ನಂತರ ಪಾನಮತ್ತನಾಗಿ ಕುಡಿದು, ಕುಣಿದು, ಕುಪ್ಪಳಿಸುತ್ತಾ. ಸ್ನೇಹಿತರೊಂದಿಗೆ ಬಂದು ನಮ್ಮ ಮೇಲೆ ಜಗಳ ಶುರುಮಾಡಿದ. ಅಷ್ಟರೊಳಗಾಗಲೇ ನಮ್ಮ ಸಂಬಂಧಿಕರಲ್ಲಿ ಒಬ್ಬರನ್ನು ಆಯ್ಕೆ ಮಾಡಿ ನಿಗದಿಯಾದಂತೆ ಮದುವೆ ಮಾಡಿ ಮುಗಿಸಿದ್ದೆವು ಎಂದರು. ಮದುವೆಗೆ ಎಲ್ಲಾ ಸಿದ್ಧತೆ ಕಾರ್ಯಗಳು ನಿಗದಿಯಾದಂತೆ ನಡೆದಿದ್ದವು ಆದರೆ ನಾನು 4ಗಂಟೆಗೆ ನಿಗದಿಯಾದ ಮದುವೆಗೆ 8 ಗಂಟೆಯವರೆಗೂ ಕಾದರೂ ವರ ಬರಲಿಲ್ಲ ಎಂಟು ಗಂಟೆಯ ನಂತರ ಕುಡಿದು ಬಂದಿದ್ದಲ್ಲದೆ ವರನು ನಮ್ಮೊಂದಿಗೆ ಜಗಳಕ್ಕಿಳಿದ ಹಾಗಾಗಿ ಮದುವೆಗೆ ಬಂದಿದ್ದ ನಮ್ಮ ಸಂ...