Friday, 29 April 2022

ಹಿಂದಿ ರಾಷ್ಟ್ರ ಭಾಷ ವಿವಾಧ| ನಟ ಸುದೀಪ್ ಬೆಂಬಲಕ್ಕೆ ನಿಂತ| ಸಿ.ಎಂ. ಬೊಮ್ಮಾಯಿ.



ಬೆಂಗಳೂರು:'ಹಿಂದಿ ರಾಷ್ಟ್ರ ಭಾಷೆ ಅಲ್ಲ 'ಎಂಬ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನಟ ಸುದೀಪ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿ ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭಾಷಾವಾರು ರಾಜ್ಯಗಳ ವಿಂಗಡಣೆಯಾಗಿರುವುದರಿಂದ ಪ್ರತಿಯೊಂದು ಭಾಷೆಗೂ ಅದರದೇ ಆದ ಮಹತ್ವವಿದೆ. ಯಾವ ಭಾಷೆ ಮೇಲು-ಕೀಳು ಅಲ್ಲ,  ಆಯಾ ರಾಜ್ಯಗಳಿಗೆ ಆಯಾ ಭಾಷೆ ಮಹತ್ವದ್ದಾಗುತ್ತದೆ. ಅಲ್ಲದೆ  ಕರ್ನಾಟಕದಲ್ಲಿ ಕನ್ನಡವೇ ನಮ್ಮ ಉಸಿರು ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು, ಎಲ್ಲರೂ ಆಯಾ ಭಾಷೆಗಳಿಗೆ ಗೌರವಿಸಬೇಕು ಎಂದರು.

ಇತ್ತೀಚಿಗೆ ನಟ ಸುದೀಪ್ ಕಾರ್ಯಕ್ರಮವೊಂದರಲ್ಲಿ ಹಿಂದಿ ರಾಷ್ಟ್ರ ಭಾಷೆಯಲ್ಲ ಎಂದಿದ್ದರು ಇದಕ್ಕೆ ಪ್ರತಿಯಾಗಿ ಅಜಯ್ ದೇವಗನ್ ಹಿಂದಿ ರಾಷ್ಟ್ರಭಾಷೆ ಎಂದು ಪ್ರತಿಪಾದಿಸಿದ್ದರು, ಈ  ಭಾಷಾ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಇದರದ್ದೆ  ಸುದ್ದಿಯಾಗಿತ್ತು.

ಈ ಟ್ವೀಟ್ ಆದರಿಸಿ ಭಾಷಾ ವಿಚಾರವಾಗಿ ಇಬ್ಬರು ನಟರ ನಡುವಿನ ಸಂಭಾಷಣೆ ಮತ್ತೊಮ್ಮೆ ಹಿಂದಿ ಭಾಷೆ, ರಾಷ್ಟ್ರ ಬಾಷೆಯೇ?  ಎಂಬ ವಿಚಾರ ಮತ್ತೆ ಮುನ್ನೆ ಲೆಗೆ ಬಂದಿದೆ.

No comments:

Post a Comment