ಬೆಂಗಳೂರು;
ಏಪ್ರಿಲ್ 22 ರಿಂದ 18 ರ ವರೆಗೆ ಒಟ್ಟು 1076 ಪರೀಕ್ಷಾ ಕೇಂದ್ರಗಳಲ್ಲಿ ಬೆಳಗ್ಗೆ 10.15 ರಿಂದ ಮಧ್ಯಾಹ್ನ
1.30 ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ. ಎಂದು ಪ್ರಾಥಮಿಕ ಮತ್ತು ಪೌಢಶಿಕ್ಷಣ ಸಚಿವ
ಬಿ.ಸಿ ನಾಗೇಶ್ ತಿಳಿಸಿದ್ದಾರೆ.
ಒಟ್ಟು
6.84 ಲಕ್ಷ ವಿದ್ಯಾರ್ಥಿ: ಈ ಭಾರಿ 3,46,936 ಬಾಲಕರು, 3,37,319 ಬಾಲಕಿಯರು ಸೇರಿದಂತೆ ಒಟ್ಟು
6,84,255. ವಿದ್ಯಾರ್ಥಿಗಳು ಪರೀಕ್ಷಗೆ ನೋಂದಣಿ ಮಾಡಿಕೊಂಡಿದ್ದಾರೆ.ಇದರಲ್ಲಿ 6,00,519 ಹೊಸ ಅಭ್ಯರ್ಥಿಗಳು,
61,808 ಪುನರಾವರ್ತಿತ ಹಾಗೂ 21,928 ಮಂದಿ ಖಾಸಗಿ ಅಭ್ಯರ್ಥಿಗಳಿದ್ದಾರೆ. ಕಲಾ ವಿಭಾಗದ 2,28,167
ವಾಣಿಜ್ಯ ವಿಭಾಗದ 2,45,519, ವಿಜ್ಞಾನ ವಿಭಾಗದ 2,10,569 ವಿದ್ಯಾರ್ಥಿಗಳು 2,212 ಮಂದಿ ವಿಶೇಷಚೇತನರು
ಪರೀಕ್ಷೆ ಬರೆಯಲಿದ್ದಾರೆ ಎಂದರು.
ಪರೀಕ್ಷಾ ಅಕ್ರಮ ತಡೆಯಲು 2152 ವಿಶೇಷ ಜಾಗೃತ ದಳ, 858
ತಾಲೂಕು ಜಾಗೃತಚ ದಳ ಹಾಗೂ 64 ಜಿಲ್ಲಾ ಜಾಗೃತ ದಳಗಳನ್ನು ರಚನೆ ಮಾಡಾಗಿದೆ. ಪರೀಕ್ಷಗೆ ಹಾಜರಾಗುವ
ವಿದ್ಯಾರ್ಥಿಗಳು ಪರೀಕ್ಷೆ ದಿನಗಳಂದು ತಮ್ಮ ಪ್ರವೇಶ ಪತ್ರ ತೋರಿಸಿ ಕೆಎಸ್ ಆರ್ ಟಿಸಿ, ಬಿಎಂಟಿಸಿ ಸೇರಿದಂತೆ ಇತರೆ ಸಾರಿಗೆ ಬಸ್
ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಸಾರಿಗೆ ಇಲಾಖೆ ಅವಕಾಶ ಕಲ್ಪಿಸಿದೆ.
ಈ ಬಾರಿ ಹಾಸನ, ತುಮಕೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ
ಹೊಸದಾಗಿ ಮೌಲ್ಯಮಾಪನ ಕೇಂದ್ರಗಳನ್ನು ತೆರೆಯಲಾಗುವುದು, ಒಟ್ಟು 81 ಕೇಂದ್ರಗಳಲ್ಲಿ ದ್ವಿತೀಯ ಪಿಯು
ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯಲಿದೆ, ಎಂದು ತಿಳಿಸಿದರು.
No comments:
Post a Comment