ಚಿತ್ರದುರ್ಗ: ವಿಸ್ಮಯಗಳ
ಲೋಕ ಬಾಹ್ಯಕಾಶದಲ್ಲಿ ಏಪ್ರೀಲ್ 24ರ ಸೂರ್ಯೋದಯಕ್ಕಿಂತ ಮುಂಚೆ ಪೂರ್ವ ದಿಕ್ಕಿನಲ್ಲಿ
5 ಗ್ರಹಗಳು ಒಂದೇ ಸಾಲಿನಲ್ಲಿ ಕಾಣಲಿವೆ. ಬುಧ, ಗುರು, ಶುಕ್ರ, ಮಂಗಳ ಹಾಗೂ ಶನಿ ಗ್ರಹಗಳು ಒಂದೇ ರೇಖೆಯಲ್ಲಿ
ಸಾಗುವುದನ್ನು ಬರಿಗಣ್ಣಿನಿಂದಲೇ ನೋಡಬಹುದು. ದೂರದರ್ಶಕ ಅಥವಾ ಬೈನಾಕುಲರ್ ಇದ್ದರೆ, ಇಂತಹ ಅಪರೂಪದ
ನೋಟವನ್ನು ಕಣ್ತುಕೊಳ್ಳಬಹುದು ಎಂದು ಹವ್ಯಾಸಿ ಖಗೋಳ ವೀಕ್ಷಕ, ಕ.ರಾ.ವಿ.ಪ ರಾಜ್ಯ ಸಮಿತಿ ಸದಸ್ಯ ಎಚ್,ಎಸ್,ಟಿ
ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
No comments:
Post a Comment