ಬೆಂಗಳೂರು: ರಾಜ್ಯಾದ್ಯಂತ ಏಪ್ರಿಲ್ 22 ರಿಂದ ಆರಂಭವಾಗಲಿರುವ ದ್ವಿತೀಯ ಪಿಯು ಪರೀಕ್ಷೆಗೆ ಸರಕಾರ, ಹೈಕೋರ್ಟ್ನ ಆದೇಶದನ್ವಯ ಹಿಜಾಬ್ ಧರಿಸಿ ಬರುವಂತಿಲ್ಲ. ಕಡ್ಡಾಯವಾಗಿ ಸಮವಸ್ತ್ರದಲ್ಲೇ ಪರೀಕ್ಷೆಗೆ ಹಾಜರಾಗಬೇಕು.
“ಪರೀಕ್ಷಾ ಕಾರ್ಯಕ್ಕೆ
ಹಾಜರಾಗುವ ಸಿಬ್ಬಂದಿ ಹಾಗೂ ಇತರೆ ಧಾರ್ಮಿಕ ಸಂಕೇತವುಳ್ಳ ವಸ್ತ್ರಗಳನ್ನು ಧರಿಸಿ ಪರೀಕ್ಷಾ ಕಾರ್ಯಕ್ಕೆ
ಹಾಜರಾಗಲು ಅವಕಾಶವಿಲ್ಲ.” ಎಂದು ಪ್ರಾಥಮಿಕ ಮತ್ತು ಪೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ಸಮವಸ್ತ್ರ ನಿಯಮದಿಂದ
ಪುನಾರಾವರ್ತಿತ ಮತ್ತು ಖಾಸಗಿ ಅಭ್ಯರ್ಥಿಗಳಿಗೆ ವಿನಾಯಿತಿ ನೀಡಲಾಗಿದೆ. ವಿದ್ಯಾರ್ಥಿಗಳು ಸರಕಾರ ಮತ್ತು
ಹೈಕೋರ್ಟ್ ಆದೇಶ ಪಾಲನೆ ಮಾಡಬೇಕು. ಇತ್ತೀಚೆಗೆ ಪೂರ್ಣಗೊಂಡ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಗೆ
14 ಜಿಲ್ಲೆಗಳಲ್ಲಿ ಇತರೆ ಧರ್ಮದ ಹೆಣ್ಣು ಮಕ್ಕಳಿಗೆ ಹೋಲಿಸಿದರೆ. ಮುಸ್ಲಿಂ ಧರ್ಮದ ಹೆಣ್ಣು ಮಕ್ಕಳು
ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ ಶೇ 98 ರಷ್ಟು ಮಂದಿ ಹಾಜರಾಗಿದ್ದಾರೆ. ಹಾಗಾಗಿ ಹಿಜಾಬ್ ಒಂದು
ಸಮಸ್ಯೆಯಲ್ಲ ಎಂದರು.
No comments:
Post a Comment