ಗುಜರಾತ್: ‘ಕ್ಷೀರ ಕ್ರಾಂತಿಯ ನೇತಾರ’ ಎನ್ನುವ ಹೆಗ್ಗಳಿಕೆ ಪಡೆದ ಭಾರತಕ್ಕೆ ಈಗ ಜಗತ್ತಿನಲ್ಲೇ ಅತಿಹೆಚ್ಚು ಹಾಲು ಉತ್ಪಾದಿಸುವ ರಾಷ್ಟ್ರ ಎನ್ನುವ ಶ್ರೇಯಸ್ಸೂ ದಕ್ಕಿದೆ.
ಈ ವಿಷಯವನ್ನು
ಅಧಿಕೃತವಾಗಿ ಘೋಷಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು “ ದೇಶದಲ್ಲಿ ವಾರ್ಷಿಕ 8.5 ಲಕ್ಷ ಕೋಟಿ
ರೂ. ಮೌಲ್ಯದ ಹಾಲು ಉತ್ಪಾದನೆ ಸಾಧ್ಯವಾಗುತ್ತಿದೆ. ವಹಿವಾಟಿನ ದೃಷ್ಟಿಯಿಂದ ಅಕ್ಕಿ, ಗೋಧಿಯಂತಹ ಅತಿ ಬಳಕೆಯ
ಪದಾರ್ಥಗಳನ್ನೇ ಹಾಲು ಹಿಂದಿಕ್ಕಿದೆ.ಹೈನು ವಲಯದ ಅತಿ ದೊಡ್ಡ ಲಾಭ ಸಣ್ಣ ರೈತರಿಗೆ ದಕ್ಕುತ್ತಿದೆ,
ಎಂದರು.
ಗುಜರಾತ್ ನ ಬನಸ್ಕಾಂತ ಜಿಲ್ಲೆಯ ಡಿಯೋದರದಲ್ಲಿ ನೂತನ ಹೈನುಗಾರಿಕೆ
ಸಂಕೀರ್ಣ ಉದ್ಘಾಟಿಸಿ ಮಾತನಾಡಿದ ಪ್ರದಾನಿ ಮೋದಿ ‘ಸಹಕಾರ ಹೈನುಗಾರಿಕೆಯು ಸಣ್ಣ ರೈತರನ್ನು ಸಬಲಗೊಳಿಸಿದೆ.ಅದರಲ್ಲೂ
ವಿಶೇಷವಾಗಿ ಮಹಿಳೆಯರನ್ನು ಅದು ಸ್ವಾವಲಂಬಿಗಳನ್ನಾಗಿಸಿದೆ. ಇದರಿಂದ ಗ್ರಾಮೀಣ ಭಾಗದ ಆರ್ಥಿಕತೆಗೂ
ಆನೆ ಬಲ ಬಂದಿದೆ, ಎಂದು
ಕ್ಷೀರ ಕ್ರಾಂತಿಯಲ್ಲಿ ಭಾರತದ ಸಾಧನೆ.
- ·
23% ಜಾಗತಿಕ ಹಾಲು ಉತ್ಪಾದನೆಯಲ್ಲಿ ಭಾರತದ ಪಾಲು.
- ·
8.5 ಲಕ್ಷ ಕೋಟಿ ರೂ. ವಾರ್ಷಿಕ ವಹಿವಾಟನ್ನು ಭಾರತದ
ಕ್ಷೀರೋದ್ಯಮ ನಡೆಸುತ್ತಿದೆ.
- ·
200 ದಶಲಕ್ಷ ಟನ್ -2020-21 ರಲ್ಲಿ ಭಾರತದ ಹಾಲು
ಉತ್ಪಾದನೆ ಪ್ರಮಾಣ.
ಹಾಲು ಉತ್ಪಾದನೆಯಲ್ಲಿ ಮೂಂಚೂಣಿ ರಾಜ್ಯಗಳು.
- ·
ಉತ್ತರ ಪ್ರದೇಶ
- ·
ರಾಜಸ್ಥಾನ
- ·
ಮಧ್ಯಪ್ರದೇಶ
- ·
ಗುಜರಾತ್
- ·
ಆಂದ್ರಪ್ರದೇಶ
ಜಗತ್ತಿನ ಟಾಪ್ 5 ಹಾಲು ಉತ್ಪಾದಕ ದೇಶಗಳು.
- ·
ಭಾರತ
- ·
ಅಮೆರಿಕ
- ·
ಪಾಕಿಸ್ತಾನ
- ·
ಚೀನಾ
- · ಬ್ರೆಜಿಲ್
No comments:
Post a Comment