Monday, 16 August 2021

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ : ಏರ್ಪೋರ್ಟ್ ಬಳಿ ಫೈರಿಂಗ್, ವಿಮಾನಗಳ ಹಾರಾಟ ರದ್ದು.

 


ಕಾಬೂಲ್ : ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ತಾಲೀಬಾನ್​​ ಉಗ್ರರು ಇಸ್ಲಾಮಿಕ್​ ರಿಪಬ್ಲಿಕ್​ ಆಫ್​ ಅಫ್ಘಾನಿಸ್ತಾನ ಮರುಸ್ಥಾಪಿಸಲು ಮುಂದಾಗಿದ್ದಾರೆ.

ಆಫ್ಘಾನಿಸ್ತಾನದಲ್ಲಿ ನೆಲೆಸಿರುವ ವಿದೇಶಿ ಜನ ಸೇರಿದಂತೆ ಎಲ್ಲರ ಮೇಲೂ ಗುಂಡಿನ ದಾಳಿ ನಡೆಸಲಾಗುತ್ತಿದ್ದು, ಆಫ್ಘನ್‌ನಿಂದ ಎಲ್ಲ ವಾಣಿಜ್ಯ ವಿಮಾನಗಳ ಹಾರಾಟ ರದ್ದಾಗಿದೆ. ಅಫ್ಘಾನಿಸ್ತಾನದ ಕಾಬೂಲ್ ಏರ್‌ಪೋರ್ಟ್‌ ಬಳಿ ತಾಲೀಬಾನಿಗಳು ಫೈರಿಂಗ್ ನಡೆಸಿದ್ದಾರೆ. ಗುಂಡಿನ ದಾಳಿ ಹಿನ್ನೆಲೆಯಲ್ಲಿ ವಿಮಾನಗಳ ಹಾರಾಟ ರದ್ದು ಪಡಿಸಲಾಗಿದೆ. ಈ ಮಧ್ಯೆ ಇಷ್ಟು ದಿನ ಅಫ್ಘನ್​​ನಲ್ಲಿ ನೆಲೆಸಿದ್ದ ವಿದೇಶಿಯರು ವಿಮಾನಗಳ ಮೂಲಕ ತಮ್ಮ ದೇಶಗಳಿಗೆ ತೆರಳಲು ಹರಸಾಹಸ ಪಡುತ್ತಿದ್ದಾರೆ.

No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...