Tuesday 6 July 2021

ಸರ್ಕಾರದ ಬಡ್ತಿ ವಿಚಾರವಾಗಿ ಪ್ರತಿಭಟನೆ ಪ್ರಾರಂಭಿಸಿದ ಸರ್ಕಾರಿ ಶಿಕ್ಷಕರು.

 

ಚಳ್ಳಕೆರೆಪದವೀದರ ಶಿಕ್ಷಕರಿಗೆ ಬಡ್ತಿ ನೀಡುವುದು, ಇತರ ಶಿಕ್ಷಕರ ಬೇಡಿಕೆಗಳ ಕುರಿತು ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ತಾಲೂಕು ಸಂಘದ ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ. ಎಸ್. ಸುರೇಶ್ ಅವರಿಗೆ ಮನವಿ ಸಲ್ಲಿಸಿದರು.

ಕಳೆದ 20, 25 ವರ್ಷಗಳಿಂದ 6 ರಿಂದ 8ನೇ ತರಗತಿಗಳನ್ನು ಬೋಧಿಸುತ್ತಿರುವ ಅರ್ಹ ಪದವಿ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರಿಗೆ ಅನ್ಯಾಯವಾಗಿದೆ. ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರು ಪಡೆದಿರುವ ಪದವಿಗಳಿಗೆ ಯಾವುದೇ ಮಾನ್ಯತೆಯಿಲ್ಲದಾಗಿದೆ. ಅಲ್ಲದೆ ಪ್ರೌಢಶಾಲಾ ಸಹ ಶಿಕ್ಷಕರ ಗ್ರೇಡ್-2 ಹುದ್ದೆಗಳಿಗೆ ಮುಂಬಡ್ತಿ ನೀಡುವಲ್ಲಿ ಸಹ ಅನ್ಯಾಯವಾಗುತ್ತಿದೆ.

ಪ್ರಾಥಮಿಕ ಶಾಲಾ ಸಹ ಶಿಕ್ಷಕ (1 ರಿಂದ 7ನೇ ತರಗತಿ) 2016 ಕ್ಕಿಂತ. ಪೂರ್ವದಲ್ಲಿ ನೇಮಕವಾಗಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರನ್ನು ಉಲ್ಲೇಖ-3 ರನ್ವಯ ಪ್ರಾಥಮಿಕ ಶಾಲಾ ಶಿಕ್ಷಕರು (1 ರಿಂದ 5ನೇ ತರಗತಿ) ಎಂದು ಪದನಾಮಕರಿಸಿ ಅವರ ಸೇವಾ ಜೇಷ್ಠತೆ ಮತ್ತು ಪದವಿ ವಿದ್ಯಾರ್ಹತೆಯನ್ನು (BA, MA, BSc, MSc, Bed, Med, PhD) ಪರಿಗಣಿಸದೇ ಹಿಂಬಡ್ತಿ ನೀಡಿದಂತಾಗಿದೆ.

ಈ ಬಗ್ಗೆ ಹಲವಾರು ಬಾರಿ ಶಾಂತಿಯುತವಾಗಿ ಒಂದು ದಿನದ ಉಪವಾಸ ಸತ್ಯಾಗ್ರಹ, ಬೆಂಗಳೂರು ಫ್ರೀಡಂ ಪಾರ್ಕ್ ಚಲೋ ಹೋರಾಟ, ಶೈಕ್ಷಣಿಕ ಸಮಾವೇಶ, ಸಾಂಕೇತಿಕ ಧರಣಿ ಮತ್ತು ತರಗತಿ ಬಹಿಷ್ಕಾರದಂತಹ ಹೋರಾಟಗಳನ್ನು ಹಮ್ಮಿಕೊಂಡು ಪ್ರತಿಭಟಿಸಿದಾಗ್ಯೂ ಸಹ ಇಲಾಖೆಯು ವಿಳಂಬ ಧೋರಣೆ ಅನುಸರಿಸುತ್ತಾ ಬಂದಿದೆ.ಆದ್ದರಿಂದ ಉಲ್ಲೇಖ -3 ಮತ್ತು 4ಕ್ಕೆ ತಿದ್ದುಪಡಿ ಮಾಡಿ ತುರ್ತಾಗಿ ನ್ಯಾಯವನ್ನು ಒದಗಿಸದೇ ಇದ್ದಲ್ಲಿ ನಾವು 6 ರಿಂದ 8ನೇ ತಗರತಿಗಳು ಭೌತಿಕವಾಗಿ ಪ್ರಾರಂಭವಾದ ನಂತರದ ದಿನಗಳಲ್ಲಿ 6 ರಿಂದ 8ನೇ ತರಗತಿಗಳ ಪಾಠ ಬೋಧನಾ ಬಹಿಷ್ಕಾರ ಮಾಡುವ ಮುಖಾಂತರ ಮತ್ತು ಮುಂದಿನ ದಿನಗಳಲ್ಲಿ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ ಎಂದು ತಮ್ಮ ಮೂಲಕ ಇಲಾಖೆಯ ಗಮನಕ್ಕೆ ತರಲು ಬಯಸುತ್ತೇವೆ.ಎಂದು ಪ್ರತಿಭಟನಾ ನಿರತ ಶಿಕ್ಷಕರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘ,  ಚಳ್ಳಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ, ಕೆ. ಕೊಟ್ರಪ್ಪ, ಅಧ್ಯಕ್ಷರು. ಎಸ್.ಕೆ. ಕರಿಯಮ್ಮ ಈರಣ್ಣ ಉಪಾಧ್ಯಕ್ಷರು, ಮೊಹಮ್ಮದ್ ವಾಸೀಂ ಪ್ರದಾನ ಕಾರ್ಯದರ್ಶಿ, ಹೆಚ್. ರಂಗನಾಥ್ ಕೋಶಾಧ್ಯಕ್ಷರು, ಪಿ.ಎಲ್. ವಿಜಯ್ ಗೌರವಾಧ್ಯಕ್ಷರು. ಸಂಘಟನಾ ಕಾರ್ಯದರ್ಶಿಗಳು ಮತ್ತಿತರರು ಉಪಸ್ಥಿತರಿದ್ದರು.





No comments:

Post a Comment