ಪುಣೆ , ಜು. 14- ಕೊರೊನಾ
ಹಿನ್ನೆಲೆ ಮದುವೆ ಸಮಾರಂಭಗಳಿಗೆ ನಿರ್ಬಂಧ ವಿಧಿಸಿದ್ದರೂ ಕೂಡ ನಿಯಮಗಳನ್ನು ಉಲ್ಲಂಘಿಸಿ ಕಾರಿನ
ಬಾನೆಟ್ ಮೇಲೆ ಮೆರವಣಿಗೆ ಹೊರಟ ವಧುವಿಗೆ ಪೊಲೀಸರು ದಂಡ ವಿಧಿಸಿದ್ದಾರೆ. ಪುಣೆಯಲ್ಲಿ ನಡೆದ ಮದುವಿನ
ನಂತರ ವಧು ಎಸ್ಯುವಿ ಕಾರಿನ ಬಾನೆಟ್ ಮೇಲೆ ಕುಳಿತು ಪುಣೆ- ಸಾಸ್ವಾಡ್ ರಸ್ತೆಯಲ್ಲಿ ಮೆರವಣಿಗೆ
ಮಾಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದ
ಹಿನ್ನೆಲೆಯಲ್ಲಿ ವಧು, ಕಾರಿನ ಮಾಲೀಕ, ಚಾಲಕ,
ವಿಡಿಯೋಗ್ರಾಫರ್ ಮೇಲೆ ಮೋಟಾರು ವಾಹನ ಕಾಯ್ದೆಯಡಿ ದಂಡವನ್ನು ವಿಧಿಸಲಾಗಿದೆ. ಈ
ವೇಳೆ ಯಾರೂ ಕೂಡ ಮಾಸ್ಕ್ ಧರಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
No comments:
Post a Comment