ಬೆಳಗೆದ್ದು ಈ ಆಹಾರಗಳನ್ನು ಯಾವತ್ತು ಸೇವಿಸಬಾರದು ಬೆಳಿಗ್ಗೆ
ಆರೋಗ್ಯಕರವಾದ ಆಹಾರವನ್ನು ಸೇವಿಸುವುದು ಯಾವಾಗಲೂ ಒಳ್ಳೆಯದು. ಬೆಳಗಿನ ಉಪಾಹಾರವೆಂದರೆ
ರಾತ್ರಿ ಪೂರ್ತಿ ಖಾಲಿ ಹೊಟ್ಟೆಯಲ್ಲಿದ್ದು, ನಂತರ
ಸೇವಿಸುವ ಆಹಾರವಾಗಿರುತ್ತದೆ.
·
ಚಹಾ
ಅಥವಾ ಕಾಫಿಯ ಖಾಲಿ ಸೇವನೆಯು ಹಾನಿಕಾರಕವಾಗಿದೆ.
·
ಖಾಲಿ
ಹೊಟ್ಟೆಯಲ್ಲಿ ಟೊಮೆಟೊವನ್ನು ಎಂದಿಗೂ ಸೇವಿಸಬೇಡಿ.
· ಪೇರಳೆ ಹಣ್ಣು ಜೀರ್ಣಕ್ರಿಯೆಗೆ ಉತ್ತಮವೆಂದು ಪರಿಗಣಿಸಲಾಗುತ್ತದೆ.
ಬೆಳಗೆದ್ದು ಈ ಆಹಾರಗಳನ್ನು ಯಾವತ್ತು ಸೇವಿಸಬಾರದು ಬೆಳಿಗ್ಗೆ ಆರೋಗ್ಯಕರವಾದ ಆಹಾರವನ್ನು ಸೇವಿಸುವುದು ಯಾವಾಗಲೂ ಒಳ್ಳೆಯದು. ಬೆಳಗಿನ ಉಪಾಹಾರವೆಂದರೆ ರಾತ್ರಿ ಪೂರ್ತಿ ಖಾಲಿ ಹೊಟ್ಟೆಯಲ್ಲಿದ್ದು, ನಂತರ ಸೇವಿಸುವ ಆಹಾರವಾಗಿರುತ್ತದೆ. ಹಾಗಿ ಬೆಳಗಿನ ಉಪಹಾರದಲ್ಲಿ ಯಾವಾಗಲೂ ಆರೋಗ್ಯಕರ ವಸ್ತುಗಳನ್ನೇ ಸೇವಿಸಬೇಕು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಂದರೆ ಬೆಳಗಿನ ಉಪಾಹಾರದಲ್ಲಿ ಹುಳಿ ವಸ್ತುಗಳನ್ನು ತಪ್ಪಿಸಬೇಕು. ಏಕೆಂದರೆ ಅವುಗಳ ಸೇವನೆಯು ಜೀರ್ಣಕ್ರಿಯೆ ಮತ್ತು ಮಲಬದ್ಧತೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಖಾಲಿ ಹೊಟ್ಟೆಯಲ್ಲಿ ಈ
ವಸ್ತುಗಳನ್ನು ಸೇವಿಸಬೇಡಿ:
1. ಟೀ-ಕಾಫಿ:
ಹೆಚ್ಚಿನವರು ತಮ್ಮ ದಿನವನ್ನು ಚಹಾ ಅಥವಾ ಕಾಫಿಯೊಂದಿಗೆ ಆರಂಭಿಸುತ್ತಾರೆ. ಆದರೆ
ಖಾಲಿ ಹೊಟ್ಟೆಯಲ್ಲಿ ಚಹಾ ಅಥವಾ ಕಾಫಿಯನ್ನು ಸೇವಿಸುವುದು ಹಾನಿಕಾರಕ. ಹಾಗಾಯಿ ಬೆಳಿಗ್ಗೆ ಚಹಾ
ಅಥವಾ ಕಾಫಿ ಕುಡಿಯುವಾಗ ಬಿಸ್ಕೆಟ್ ಆದರೂ ಜೊತೆಗಿರುವುದು ಒಳ್ಳೆಯದು. ಖಾಲಿ ಹೊಟ್ಟೆಯಲ್ಲಿ
ಚಹಾ ಮತ್ತು ಕಾಫಿಯನ್ನು ಸೇವಿಸುವುದರಿಂದ ಆಸಿಡಿಟಿ ಉಂಟಾಗುತ್ತದೆ.
2. ಪೇರಳೆ ಹಣ್ಣು : ಪೇರಳೆ ಹಣ್ಣು ಜೀರ್ಣಕ್ರಿಯೆಗೆ ಉತ್ತಮ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ
ವಿಟಮಿನ್ ಸಿ ಹೇರಳವಾಗಿ ಕಂಡು ಬರುತ್ತದೆ. ಆದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪೇರಳೆ
ಹಣ್ಣು ಸೇವಿಸುವುದರಿಂದ ಹೊಟ್ಟೆ ನೋವಿನ ಸಮಸ್ಯೆ
ಉಂಟಾಗಬಹುದು.
3. ಸೇಬುಹಣ್ಣು : ವಿಟಮಿನ್ ಎ, ಬಿ, ಸಿ, ಕ್ಯಾಲ್ಸಿಯಂ, ಪೊಟ್ಯಾಸಿಯಮ್
ಮತ್ತು ಆಂಟಿಆಕ್ಸಿಡೆಂಟ್‌ಗಳು ಸೇಬಿನಲ್ಲಿ ಹೇರಳವಾಗಿ ಕಂಡುಬರುತ್ತವೆ. ಇವು ಆರೋಗ್ಯಕ್ಕೆ
ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೆ ಖಾಲಿ ಹೊಟ್ಟೆಯಲ್ಲಿ ಸೇಬನ್ನು ಸೇವಿಸುವುದು
ಹಾನಿಕಾರಕವಾಗಿದೆ.
4. ಸಲಾಡ್: ಸಲಾಡ್ ಆರೋಗ್ಯಕ್ಕೆ ತುಂಬಾ
ಪ್ರಯೋಜನಕಾರಿ. ಸಲಾಡ್ ಸೇವಿಸುವುದರಿಂದ ತೂಕವನ್ನು ನಿಯಂತ್ರಿಸಬಹುದು. ಆದರೆ ಬೆಳಿಗ್ಗೆ ಖಾಲಿ
ಹೊಟ್ಟೆಯಲ್ಲಿ ಸಲಾಡ್ ಸೇವಿಸುವುದರಿಂದ ಆಸಿಡಿಟಿ ಮತ್ತು ಎದೆಯುರಿ ಉಂಟಾಗುತ್ತದೆ.
No comments:
Post a Comment