ಬಹುತೇಕ ಜನರು ತಮ್ಮ ಫೋನ್ ಅನ್ನು ಶೌಚಾಲಯದೊಳಗೆ ತೆಗೆದುಕೊಂಡು ಹೋಗಿ ಅದನ್ನು ಬಳಸಲು ಕಮೋಡ್ ಮೇಲೆ ಸಾಕಷ್ಟು ಸಮಯ ಕುಳಿತುಕೊಳ್ಳುತ್ತಾರೆ. ಆದರೆ ಅವರ ಈ ಅಭ್ಯಾಸ ಅವರನ್ನು ಗಂಭೀರ ಕಾಯಿಲೆಗೆ ತಳ್ಳಬಹುದು.
·
ಬಹುತೇಕ
ಜನರು ಟಾಯ್ಲೆಟ್ ನಲ್ಲಿ ಕುಳಿತು ಮೊಬೈಲ್ ಬಳಸುತ್ತಾರೆ.
·
ಇದರಿಂದ
ರಕ್ತಸ್ರಾವದ ಪೈಲ್ಸ್ ಆಗುವ ಸಾಧ್ಯತೆ ಇದೆ.
· ಬ್ಯಾಕ್ಟೀರಿಯಾ ದಾಳಿಗೂ ಕೂಡ ನೀವು ತುತ್ತಾಗಬಹುದು.
ಇಂದಿನ ತಂತ್ರಜ್ಞಾನದ ಯುಗದಲ್ಲಿ
ಮೊಬೈಲ್ ಫೋನ್ ಪ್ರತಿಯೊಬ್ಬರ ಜೀವನದ ಒಂದು ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ. ಮೊಬೈಲ್ ಇಲ್ಲದೆ
ಹೋದರೆ ಜೀವನವೇ ಅಪೂರ್ಣ ಎಂಬಂತೆ ತೋರುತ್ತಿದೆ. ಮೊಬೈಲ್ ನಿಂದ ಒಂದು ಕ್ಷಣ ದೂರವಾದರೂ ಕೂಡ
ಅಸ್ವಸ್ಥತೆಯ ಭಾವ ಆವರಿಸುತ್ತದೆ. ಮೊಬೈಲ್ ಗೆ ಜನ ಎಷ್ಟೊಂದು ಅಡಿಕ್ಟ್ ಆಗಿದ್ದಾರೆಂದರೆ ಟಾಯ್ಲೆಟ್
ನಲ್ಲಿಯೂ ಕೊಡ ತಮ್ಮ ಮೊಬೈಲ್ ತೆಗೆದುಕೊಂಡು ಹೋಗಿ ಗಂಟೆಗಟ್ಟಲೆ ತಮ್ಮ ಸಮಯವನ್ನು ಕಮೋಡ್ ಮೇಲೆ
ಕಳೆಯುತಾರೆ.
ಟಾಯ್ಲೆಟ್ ನಲ್ಲಿ
ಮೊಬೈಲ್ ತೆಗೆದುಕೊಂಡು ಹೋಗುವುದು ಪ್ರಾಣಕ್ಕೆ ಅಪಾಯ
ಟಾಯ್ಲೆಟ್ ನಲ್ಲಿ ಮೊಬೈಲ್ ತೆಗೆದುಕೊಂಡು ಹೋಗುವ ರೂಢಿ ಮಾರಣಾಂತಿಕ ಕಾಯಿಲೆಗೆ
ದಾರಿ ಮಾಡಿಕೊಡಬಹುದು. ಇದರಿಂದ ನೀವು ಮತ್ತು ನಿಮ್ಮ ಕುಟುಂಬ ಮಾರಣಾಂತಿಕ ಬ್ಯಾಕ್ಟೀರಿಯಾ
ಕಾಯಿಲೆಗೆ ಗುರಿಯಾಗಬಹುದು.
ಮೂಲವ್ಯಾಧಿ
ಸಮಸ್ಯೆ ತಲೆದೂರಬಹುದು.
ಈ ಮೊದಲು ಕೇವಲ ಅಧಿಕ ವಯಸ್ಸಿನವರಲ್ಲಿ ಕಾಣಿಸಿಕೊಳ್ಳುತ್ತಿದ್ದ ಮೂಲವ್ಯಾಧಿ
ಸಮಸ್ಯೆ ಇದೀಗ ಯುವಕರಲ್ಲಿಯೂ ಕೂಡ ಸಾಮಾನ್ಯವಾಗಿದೆ. ಈ ಕಾಯಿಲೆಗೆ ಪೈಲ್ಸ್ ಎಂದೂ ಕೂಡ
ಕರೆಯಲಾಗುತ್ತದೆ. ಟಾಯ್ಲೆಟ್ ಗೆ ಮೊಬೈಲ್ ಕೊಂಡೊಯ್ಯುವ ನಿಮ್ಮ ರೂಢಿ ಈ ಕಾಯಿಲೆಗೆ
ಕಾರಣವಾಗಬಹುದು. ಮೊಬೈಲ್ ಹಿಡಿದು ಕಮೋಡ್ ಮೇಲೆ ಕುಳಿತುಕೊಳ್ಳುವ ವ್ಯಕ್ತಿಯ ಸಂಪೂರ್ಣ ಗಮನ
ಮೊಬೈಲ್ ಮೇಲಿರುತ್ತದೆ. ಇದರಿಂದ ಆ ವ್ಯಕ್ತಿ ತುಂಬಾ ಹೊತ್ತು ಕಮೋಡ್ ಮೇಲೆಯೇ ತಮ್ಮ ಸಮಯ
ಕಳೆಯುತ್ತಾನೆ. ಹೀಗಾಗಿ ಆ ವ್ಯಕ್ತಿಗೆ ಹೆಮೋರಾಯಿಡ್ ಅಂದರೆ ಪೈಲ್ಸ್ ಆಗುವ ಸಾಧ್ಯತೆ
ಹೆಚ್ಚಾಗಿರುತ್ತದೆ.
ಸ್ನಾಯುಗಳ ಮೇಲೆ ಒತ್ತಡ.
ಬಹುತೇಕ ಜನರು ಟಾಯ್ಲೆಟ್ ಶೀಟ್ ಮೇಲೆ ಕುಳಿತು ದಿನಪತ್ರಿಕೆ ಓದುತ್ತಾರೆ
ಅಥವಾ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಸಕ್ರೀಯರಾಗುತ್ತಾರೆ. ಇನ್ನೂ ಕೆಲವರು ವಿಡಿಯೋ ವಿಕ್ಷೀಸುತ್ತಾರೆ, ಚಾಟಿಂಗ್ ನಡೆಸುತ್ತಾರೆ.
ಇದರಿಂದ ವೇಳೆ ಹೇಗೆ ಕಳೆಯುತ್ತಿದೆ ಎಂಬುದು ಅವರಿಗೆ ತಿಳಿಯುವುದೇ ಇಲ್ಲ. ತುಂಬಾ ಹೊತ್ತು
ಟಾಯ್ಲೆಟ್ ಸೀಟ್ ಮೇಲೆ ಕುಳಿತುಕೊಳ್ಳುವುದರಿಂದ ಲೋವರ್ ರೆಕ್ಟಂ ಸ್ನಾಯುಗಳ ಮೇಲೆ ಒತ್ತಡ
ಹೆಚ್ಚಾಗಿ ಪೈಲ್ಸ್ ಕಾಯಿಲೆ ಬರುವ ಸಾಧ್ಯತೆ ಇದೆ.
ಫೋನ್ ಗೆ ಆಂಟಿಕೊಳ್ಳುತ್ತವೆ
ಮಾರಕ ಬ್ಯಾಕ್ಟೀರಿಯಾಗಳು.
ಟಾಯ್ಲೆಟ್ ನಲ್ಲಿ ಮಾರಕ ಬ್ಯಾಕ್ಟೀರಿಯಾಗಳಿರುತ್ತವೆ ಇಂತಹುದರಲ್ಲಿ
ಮೊಬೈಲ್ ಅನ್ನು ಟಾಯ್ಲೆಟ್ ಗೆ ಕೊಂಡೊಯ್ಯುವುದರಿಂದ ಈ ಬ್ಯಾಕ್ಟೀರಿಯಾಗಳು ನಿಮ್ಮ ಫೋನ್ ಗೆ
ಅಂಟಿಕೊಳ್ಳುವ ಸಾಧ್ಯತೆ ಇದೆ. ಟಾಯ್ಲೆಟ್ ನಿಂದ ಹೊರಬರುವ ವ್ಯಕ್ತಿ ತಮ್ಮ ಕೈಗಳನ್ನು ಸ್ವಚ್ಛವಾಗಿ
ತೊಳೆದುಕೊಳ್ಳುತ್ತಾರೆ ಆದರೆ. ಮೊಬೈಲ್ ಅನ್ನು ಶುಚಿಗೊಳಿಸುವುದಿಲ್ಲ ಇದರಿಂದ ಹಲವು ಇನ್ಫೆಕ್ಷನ್
ಆಗುವ ಸಾಧ್ಯತೆ ಇದೆ.
No comments:
Post a Comment