Saturday 3 July 2021

ಟಿ20 ವಲ್ಡ್ ಕಪ್: ನಂತರ ರವಿಶಾಸ್ತ್ರಿ ಬದಲಿಗೆ, ರಾಹುಲ್ ದ್ರಾವಿಡ್ ಹೊಸ ಕೋಚ್ ಆಗಿ, ಆಯ್ಕೆಯಾಗುವರೇ??

ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ರವಿಶಾಸ್ತ್ರಿ ಅವರ ಒಪ್ಪಂದ ಈ ವರ್ಷದ ಕೊನೆಯಲ್ಲಿ ಕೊನೆಗೊಳ್ಳಲಿದೆ. ರವಿಶಾಸ್ತ್ರಿ ಬದಲಿಗೆ ರಾಹುಲ್ ದ್ರಾವಿಡ್ ತಂಡದ ಕೋಚ್ ಆಗಿ ಆಯ್ಕೆಯಾಗಬಹುದು ಎಂದು ಹೇಳಲಾಗುತ್ತಿದೆ.

·         ರಾಹುಲ್ ದ್ರಾವಿಡ್ ಕೋಚ್ ಆಗಿಯೂ ಪ್ರಸಿದ್ದಿ ಪಡೆದಿದ್ದಾರೆ.

·         ದ್ರಾವಿಡ್ ಟೀಂ ಇಂಡಿಯಾ ಕೋಚ್ ಆಗಬೇಕೆಂದು ಅಭಿಮಾನಿಗಳು ಬಯಸುತ್ತಾರೆ.

·         ಯುವ ಕ್ರಿಕೆಟಿಗರಿಗೆ ದ್ರಾವಿಡ್ ಆದರ್ಶಪ್ರಾಯರೆಂದು ಪರಿಗಣಿಸಲಾಗಿದೆ.



ನವದೆಹಲಿ: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್  ವಿರುದ್ಧದ ಸೋಲಿನ ನಂತರ, ವಿರಾಟ್ ಕೊಹ್ಲಿ ಜೊತೆಗೆ ಮುಖ್ಯ ಕೋಚ್ ರವಿಶಾಸ್ತ್ರಿ  ಅವರ ಪಾತ್ರವನ್ನೂ ಪ್ರಶ್ನಿಸಲಾಗುತ್ತಿದೆ. 

ದ್ರಾವಿಡ್ ಅಭಿಮಾನಿಗಳ ಬೇಡಿಕೆ:
ರವಿಶಾಸ್ತ್ರಿ ಅವರ ಬದಲಿಗೆ 'ಮಿಸ್ಟರ್ ಟ್ರಸ್ಟ್ ವರ್ತಿ' ರಾಹುಲ್ ದ್ರಾವಿಡ್ ಅವರನ್ನು ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕ ಮಾಡಬೇಕೆಂದು ಅನೇಕ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಆಶಯ ವ್ಯಕ್ತಪಡಿಸಿದ್ದಾರೆ.

'ಶಾಸ್ತ್ರಿ ಬದಲಿಗೆ ದ್ರಾವಿಡ್':
ವಾಸ್ತವವಾಗಿ, ಐಸಿಸಿ ಟಿ 20 ವಿಶ್ವಕಪ್ ನಂತರ ರವಿಶಾಸ್ತ್ರಿ ಅವರ ಒಪ್ಪಂದವು ಈ ವರ್ಷದ ಕೊನೆಯಲ್ಲಿ ಮುಕ್ತಾಯಗೊಳ್ಳಲಿದೆ. ರಾಹುಲ್ ದ್ರಾವಿಡ್, ಶಾಸ್ತ್ರಿ ಬದಲಿಗೆ ಕೋಚ್ ಆಗಿ ನೇಮಕಗೊಳ್ಳುವ ಸಾಧ್ಯತೆಯಿದೆ ಎಂದು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ರೀತಿಂದರ್ ಸಿಂಗ್ ಸೋಧಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'ಶಾಸ್ತ್ರಿ ಉತ್ತಮ ಕೆಲಸ ಮಾಡಿದ್ದಾರೆ':
ನ್ಯೂಸ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಸೋಧಿ, 'ಮೊದಲನೆಯದಾಗಿ, ರವಿಶಾಸ್ತ್ರಿ ತರಬೇತುದಾರನಾಗಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ನಾವು ಒಪ್ಪಿಕೊಳ್ಳಬೇಕು ಮತ್ತು ಹೌದು ಅವರ ಒಪ್ಪಂದವು ಮುಕ್ತಾಯಗೊಳ್ಳುತ್ತಿದೆ. ರಾಹುಲ್ ದ್ರಾವಿಡ್ ಅವರು ಸರದಿಯಲ್ಲಿದ್ದಾರೆ ಎಂಬ ಸ್ಪಷ್ಟ ಸೂಚನೆ ಇದೆ. ಮುಖ್ಯವಾದ ವಿಷಯವೆಂದರೆ ಸದ್ಯ ಟೀಂ ಇಂಡಿಯಾದ ಮುಖ್ಯ ಕೋಚ್ ರವಿಶಾಸ್ತ್ರಿ ಅವರ ಸ್ಥಾನವನ್ನು ಬದಲಾಯಿಸಬಹುದಾದ ಸೂಕ್ತ ಸಾಮರ್ಥ್ಯವಿರುವುದು ರಾಹುಲ್ ದ್ರಾವಿಡ್ ಅವರಿಗೇ ಎಂದವರು ಅಭಿಪ್ರಾಯಪಟ್ಟಿದ್ದಾರೆ.

ದ್ರಾವಿಡ್ ಯುವಕರ ಆದರ್ಶ:
ಗಮನಿಸಬೇಕಾದ ಸಂಗತಿಯೆಂದರೆ, ಅಂಡರ್ -19 ಟೀಮ್ ಇಂಡಿಯಾ 2018 ರಲ್ಲಿ ವಿಶ್ವ ಚಾಂಪಿಯನ್ ಗಳಿಸುವಲ್ಲಿ ರಾಹುಲ್ ದ್ರಾವಿಡ್ ಅವರು  ಕೋಚ್ ಆಗಿ  ಮುಖ್ಯ ಪಾತ್ರವಹಿಸಿದ್ದರು. ಇದರೊಂದಿಗೆ ಅವರು ಇತರ ಅನೇಕ ಯಶಸ್ಸನ್ನು ಗಳಿಸಿದ್ದಾರೆ, ಯುವ ಕ್ರಿಕೆಟಿಗರಿಗೆ ದ್ರಾವಿಡ್ ಆದರ್ಶಪ್ರಾಯರೆಂದು ಪರಿಗಣಿಸಲಾಗಿದೆ.


No comments:

Post a Comment