ಹೌದು, ಭರ್ಥಾನದ ಸಮಸ್ಪುರದಲ್ಲಿ ಯುವ ಜೋಡಿಯೊಂದು ಬಂಧು- ಬಳಗ, ಕುಟುಂಬಸ್ಥರ ಸಮ್ಮುಖದಲ್ಲಿ ಶಾಸ್ತ್ರೋಸ್ತವಾಗಿ ಸಪ್ತಪದಿ ತುಳಿಯಲು ಸಿದ್ಧರಾಗಿದ್ರು. ಮಾಲೆಗಳನ್ನೂ ಬದಲಾಯಿಸಿಕೊಂಡ್ರು.. ಇನ್ನೇನು ಮುಹೂರ್ತ ಹತ್ತಿರವಾಯ್ತು. ಇನ್ನೇನು ಪುರೋಹಿತರು ʼಮಾಂಗಲ್ಯ ಧಾರಣೆʼ ಎಂದು ಘೋಷಿಸ್ಬೇಕು, ಅಷ್ಟರಲ್ಲಾಗ್ಲೇ ಆಘಾತಕಾರಿ ಘಟನೆಯೊಂದು ನಡೆದು ಹೋಗಿದೆ.
ಹೌದು, ಶಾಸ್ತ್ರೋತ್ರವಾಗಿ ನಡೆಯುತ್ತಿದ್ದ ಮದುವೆಯಲ್ಲಿ ವಧು ವರರು ಮಾಲೆಗಳನ್ನ ಬದಲಾಇಸಿಕೊಂಡ್ರು. ನಂತ್ರ ದಂಪತಿಗಳು ಮಾಂಗಲ್ಯ ಧಾರಣೆಗೆ ತಯಾರಿ ನಡೆಸುತ್ತಿದ್ರು, ಅಷ್ಟರಲ್ಲಿ ವರ ಮಂಜೇಶ್ ಕುಮಾರ್ ಪಕ್ಕದಲ್ಲಿ ನಿಂತಿದ್ದ ವಧು ಸುರಭಿ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ನೆಲಕ್ಕೆ ಬಿದ್ದಿದ್ದಾಳೆ. ತಕ್ಷಣವೇ ವೈದ್ಯರನ್ನ ಕರೆಸಲಾಯ್ತು. ಆದ್ರೆ, ಅಷ್ಟೊತ್ತಿಗಾಗ್ಲೇ ವಧುವಿನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ವಧು ಸುರಭಿ ಹೃದಯ ಸ್ತಂಭನಕ್ಕೆ ಒಳಗಾಗಿ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ರು. ಸಂಭ್ರಮದ ಮನೆ ಸೂತಕದ ಮನೆಯಾಗಿ ಮಾರ್ಪಾಡಾಯ್ತು.
ಈ ಗೊಂದಲದಲ್ಲಿ ಅಲ್ಲಿದವರ್ಯಾರೋ ವಧುವಿನ ತಂಗಿಯ ಜೊತೆಗೆ ಮದುವೆ ಮಾಡಿ ಎಂದು ಸಲಹೆ ನೀಡಿದ್ದಾರೆ. ಅದ್ರಂತೆ, ಎರಡೂ ಕುಟುಂಬಗಳು ಒಟ್ಟಿಗೆ ಕುಳಿತು, ವಧು ಸುರಭಿ ತಂಗಿ ನಿಶಾಳನ್ನ ವರನೊಂದಿಗೆ ಮದುವೆ ಮಾಡಲು ಚರ್ಚಿಸಿದವು. ಇದಕ್ಕೆ ಅವರಿಬ್ಬರ ಒಪ್ಪಿಗೆಯನ್ನೂ ಪಡೆದರು. ನಂತ್ರ ಸುರಭಿಯ ದೇಹವನ್ನ ಮತ್ತೊಂದು ಕೋಣೆಯಲ್ಲಿ ಇರಿಲಾಯ್ತು. ನಂತ್ರ ಮಂಜೇಶ್ ಮತ್ತು ನಿಶಾ ಮದುವೆಯನ್ನ ನೆರವೇರಿಲಾಯಿತು. ಮದುವೆಯ ನಂತ್ರ ಸುರಭಿಯ ಅಂತಿಮ ಸಂಸ್ಕಾರ ನಡೆಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಸಿದ ಮೃತ ಸುರಭಿ ಸಹೋದರ, 'ಪರಿಸ್ಥಿತಿಯಲ್ಲಿ ಏನು ಮಾಡಬೇಕು ಅನ್ನೋದು ನಮಗೆ ತಿಳಿದಿರಲಿಲ್ಲ. ಎರಡೂ ಕುಟುಂಬಗಳು ಒಟ್ಟಿಗೆ ಕುಳಿತಿದ್ದವು ಮತ್ತು ನನ್ನ ತಂಗಿ ನಿಶಾ, ವರನೊಂದಿಗೆ ಮದುವೆಯಾಗಬೇಕೆಂದು ಯಾರೋ ಸಲಹೆ ನೀಡಿದರು. ಕುಟುಂಬಗಳು ಈ ಬಗ್ಗೆ ಚರ್ಚಿಸಿದವು ಮತ್ತು ಇಬ್ಬರೂ ಒಪ್ಪಿದರು. ಆಗ ಸುರಭಿಯ ದೇಹವನ್ನು ಮತ್ತೊಂದು ಕೋಣೆಯಲ್ಲಿ ಇರಿಸಲಾಯಿತು ಮತ್ತು ಮಂಜೇಶ್ ಅವರ ಮದುವೆಯನ್ನ ನಿಶಾಳೊಂದಿಗೆ ನೆರವೇರಿತು. ಮದುವೆಯ ನಂತ್ರ ಸುರಭಿಯ ಅಂತಿಮ ಸಂಸ್ಕಾರ ಮಾಡಿ ಮುಗಿಸಿದೆವು' ಎಂದರು.
ಇನ್ನು ಸುರಭಿಯ ಚಿಕ್ಕಪ್ಪ ಅಜಬ್ ಸಿಂಗ್, 'ಇದು ನಮ್ಮ ಕುಟುಂಬಕ್ಕೆ ಕಠಿಣ ಕರೆಯಾಗಿತ್ತು. ಒಂದು ಕೋಣೆಯಲ್ಲಿ ಒಬ್ಬ ಮಗಳು ಸತ್ತಿದ್ದಳು ಮತ್ತು ಇನ್ನೊಬ್ಬ ಮಗಳ ಇನ್ನೊಂದು ಕೋಣೆಯಲ್ಲಿ ಮದುವೆ ನಡೆಯುತ್ತಿತ್ತು. ಇಂತಹ ಮಿಶ್ರ ಭಾವನೆಗಳನ್ನ ನಾವು ಎಂದಿಗೂ ಅನುಭವಿಸಿರ್ಲಿಲ್ಲ' ಎಂದರು.

No comments:
Post a Comment