Thursday, 3 June 2021

ಅನ್ನದಾತರೇ, ʼPM Kisanʼ ಯೋಜನೆಯ 8ನೇ ಕಂತಿನ ʼ2000 ರೂಪಾಯಿʼಯಿನ್ನೂ ನಿಮ್ಮ ಖಾತೆ ಸೇರಿಲ್ವಾ? ಈ ʼಸಂಖ್ಯೆಗಳಿಗೆ ಕರೆ ಮಾಡಿʼ


 ನವದೆಹಲಿ : ಸಣ್ಣ ಮತ್ತು ಅಲ್ಪ ರೈತರನ್ನು ಗಮನದಲ್ಲಿಟ್ಟುಕೊಂಡು ಮೋದಿ ಸರ್ಕಾರ ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯನ್ನ ಪ್ರಾರಂಭಿಸಿತು. ಸರ್ಕಾರವು ಈ ಯೋಜನೆಯಡಿ ರೈತರಿಗೆ ಒಂದು ವರ್ಷದಲ್ಲಿ 3 ಕಂತುಗಳಲ್ಲಿ 6,000 ರೂ. ನೀಡಲಿದೆ. ಪ್ರತಿ 4 ತಿಂಗಳಿಗೊಮ್ಮೆ 2 ಸಾವಿರ ರೂಪಾಯಿಗಳನ್ನ ರೈತರ ಖಾತೆಯಲ್ಲಿ ವರ್ಗಾಯಿಸಲಾಗುತ್ತದೆ. ಈವರೆಗೆ ರೈತರ ಖಾತೆಗೆ 8 ಕಂತುಗಳ ಹಣವನ್ನ ಕಳುಹಿಸಲಾಗಿದೆ.

ಇತ್ತೀಚೆಗೆ ಖಾತೆಗೆ ಹಣವನ್ನು ಕಳುಹಿಸಲಾಗಿದೆ..!
ಪ್ರಧಾನಿ ಮೋದಿಯವ್ರು ಮೇ 14,2021 8ನೇ ಕಂತು ಬಿಡುಗಡೆ ಮಾಡಿದ್ರು. ಆದ್ರೆ, ಇನ್ನೂ ಹಣವು ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಬಂದಿಲ್ಲ. ನಿಮ್ಮ ಖಾತೆಗೆ ಮೊತ್ತವನ್ನ ಜಮಾ ಮಾಡದಿದ್ದರೆ, ನೀವು ನಿರ್ದಿಷ್ಟ ಸಂಖ್ಯೆಗಳಿಗೆ ಕರೆ ಮಾಡಿ, ದೂರು ನೀಡಬಹುದು ಮತ್ತು ಕಾರಣವನ್ನ ತಿಳಿದುಕೊಳ್ಳಬಹುದುಹೌದು,

 ಈವರೆಗೆ ನಿಮ್ಮ ಖಾತೆಗೆ ಹಣ ಬಂದಿಲ್ಲದಿದ್ದರೆ, ನೀವು ಅದರ ಬಗ್ಗೆ ದೂರು ನೀಡಬಹುದು. ಪಿಎಂ ಕಿಸಾನ್ ಸಮ್ಮನ್ ಸಹಾಯವಾಣಿ ಸಂಖ್ಯೆಯಲ್ಲಿ ನೀವು ನೋಂದಾಯಿಸಿಕೊಳ್ಳಬಹುದು. ಇದಕ್ಕಾಗಿ ನೀವು ಸಹಾಯವಾಣಿ ಸಂಖ್ಯೆ 011-24300606 ಗೆ ಕರೆ ಮಾಡಬಹುದು. ಇದಲ್ದೇ ಕೆಳಗಿರುವ ಸಂಖ್ಯೆ

ದೂರು ನೀಡಲು ಪ್ರಮುಖ ಸಂಖ್ಯೆಗಳು ಕೆಳಗಿನಂತಿವೆ…!
>> PM ಕಿಸಾನ್ ಟೋಲ್ ಉಚಿತ ಸಂಖ್ಯೆ: 18001155266
>> PM ಕಿಸಾನ್ ಸಹಾಯವಾಣಿ ಸಂಖ್ಯೆ: 155261
>> ಪಿಎಂ ಕಿಸಾನ್ ಲ್ಯಾಂಡ್‌ಲೈನ್ ಸಂಖ್ಯೆಗಳು: 011-23381092, 23382401
>> ಪಿಎಂ ಕಿಸಾನ್ ಅವರ ಹೊಸ ಸಹಾಯವಾಣಿ: 011-24300606
>> PM ಕಿಸಾನ್ ಮತ್ತೊಂದು ಸಹಾಯವಾಣಿ ಹೊಂದಿದೆ: 0120-6025109
>> ಇ-ಮೇಲ್ ID: pmkisan-ict@gov.in

No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...